ಟಿ.ನರಸೀಪುರ : ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮತ್ತು ಮಹಾಬೆಳಕು ಮೈಸೂರು ಇವರ ಸಹಯೋಗದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಸಹಕಾರದೊಂದಿಗೆ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ ನಡೆದ “ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ಹಾಗೂ “ಭೀಮ ಗೀತಾ ಗಾಯನ” ಕಾರ್ಯಕ್ರಮವನ್ನು ಡಿ.14 ಭಾನುವಾರ ಬೆಳಗ್ಗೆ 10-30 ಕ್ಕೆ ಬೆಳಕು ಹಂಚಿದ ಬಾಲಕ ನಾಟಕವನ್ನು ಡಾ.ಆರ್.ವಿ.ಭಂಡಾರಿ ರಚನೆಯಲ್ಲಿ,ಆರ್.ಕೆ.ಶಿವಕುಮಾರ್ ನಿರ್ದೇಶನದಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಜೆ.ಎಲ್.ಬಿ. ರಸ್ತೆ, ಲಕ್ಷ್ಮಿಪುರಂ, ಮೈಸೂರು ನಲ್ಲಿ ಏರ್ಪಡಿಸಲಾಗಿದೆ ಎಂದು ಮಹಾಬೆಳಕು ಸಂಸ್ಥೆ ಸಂಸ್ಥಾಪಕರಾದ ಕಾತ್ಯಾಯಿನಿ ತಿಳಿಸಿದ್ದಾರೆ.
– ಎಂ.ನಾಗೇಂದ್ರ ಕುಮಾರ್

[…] […]