
1.ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸುವ ವಿಚಾರದಲ್ಲಿ ಕೆಳಗಿನ ಯಾವ ಆಯೋಗವನ್ನು ರಚಿಸಿತ್ತು?
ಉತ್ತರ :-ಗಾಯಕ್ವಾಡ್ ಆಯೋಗ
2.ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರವನ್ನು ಕೆಳಗಿನ ಯಾವ ಸ್ಥಳದಲ್ಲಿ ಸ್ಥಾಪಿಸಲಾಗಿದೆ.?
ಉತ್ತರ :- ಜಾಮ್ನಗರ್, ಗುಜರಾತ್
3.ಇತ್ತೀಚೆಗೆ ಕೇಂದ್ರದ ಯಾವ ಸಚಿವಾಲಯ ವಾಟ್ಸ್ ಆ್ಯಪ್ ಸಂಸ್ಥೆಯ ಮಾತೃ ಸಂಸ್ಥೆಯಾದ ಮೆಟಾ ಸಂಸ್ಥೆಯೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿದೆ?
ಉತ್ತರ :-ಕೇಂದ್ರ ಶಿಕ್ಷಣ ಸಚಿವಾಲಯ
4.ಆಶ್ವಾಸ ನಿಧಿ ಯೋಜನೆಯನ್ನು ಕೆಳಗಿನ ಯಾವ ಸಚಿವಾಲಯ ಜಾರಿಗೆ ತರುತ್ತಿದೆ?
ಉತ್ತರ :-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.
5.ಮೊಬೈಲ್ ಮಾಲ್ವೇರ್ ದಾಳಿ(mobile malware attacks)ಯಲ್ಲಿ ಜಾಗತಿಕ ಪಟ್ಟಿಯಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ?
ಉತ್ತರ :- ಭಾರತ
6.ಬಾಲ ಕಾರ್ಮಿಕರೆಂದರೆ —–ವಯಸ್ಸಿನೊಳಗಿನ ಕೆಲಸ ಮಾಡುತ್ತಿರುವ ಮಕ್ಕಳಾಗಿರುತ್ತಾರೆ.
ಉತ್ತರ :- 14 ವರ್ಷಗಳ
7.ಕರ್ನಾಟಕ ಕೃಷಿ ಬೆಲೆ ಆಯೋಗವು ಯಾವ ವರ್ಷ ಸ್ಥಾಪನೆಯಾಯಿತು?
ಉತ್ತರ :- 2014
8.’ಗಾಂಧಿ ಗ್ರಾಮ ಪುರಸ್ಕಾರ’ ಯೋಜನೆಯು ಆರಂಭವಾದ ವರ್ಷ
ಉತ್ತರ :- 2013-14ನೇ ಸಾಲಿನಲ್ಲಿ
9.’ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆ ಉದ್ಘಾಟನೆಯಾದ ದಿನಾಂಕ
ಉತ್ತರ :- 2015 ಜುಲೈ 25
10.ಆಹಾರ ದಾನ, ಔಷಧ ದಾನ, ಗ್ರಂಥ ದಾನ ಮಾಡಿದ ಅಪರೂಪದ ಮಹಿಳೆ ಯಾರು?
ಉತ್ತರ :-ಅತ್ತಿಮಬ್ಬೆ
11.ಕೇಂದ್ರ ಸರ್ಕಾರವು 2025-26ರಲ್ಲಿ ಎಷ್ಟು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ತೀರ್ಮಾನಿಸಿದೆ
ಉತ್ತರ :- 10,000 ಕಿಲೋಮೀಟರ್