ಚನ್ನರಾಯಪಟ್ಟಣ: ತಾಲೂಕು ಶ್ರವಣಬೆಳಗೊಳ ಹೋಬಳಿಯ ಬೆಕ್ಕ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಬೆಕ್ಕ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ನಾರಾಯಣಗೌಡರ ವಿರುದ್ಧ ಕೊಲೆಯ ಸಂಚು ರೂಪಿಸಿದ್ದಾರೆ ಎಂದು ಪತ್ರಿಕಾ ಮಾಧ್ಯಮದರಿಗೆ ತಿಳಿಸಿದರು.
ನಾರಾಯಣಗೌಡನ ಹೆಂಡತಿ ಮತ್ತು ಮಕ್ಕಳು ಆಸ್ತಿಗಾಗಿ ಲಪಟಾಯಿಸುವ ಉದ್ದೇಶದಿಂದ ವ್ಯವಸ್ಥಿತ ಸಂಚು ರೂಪಿಸಿದ್ದಾರೆ.
ವಯೋವೃದ್ಧ ನಾರಾಯಣಗೌಡ ವಿರುದ್ಧ ಇಡೀ ಕುಟುಂಬ ಸಂಚು ರೂಪಿಸಿ ಆಸ್ತಿ ಲಪಟಾಯಿಸಲು ಮುಂದಾಗಿದ್ದಾರೆ. ಇದಕ್ಕೆ ಸ್ಪಂದನೆ ನೀಡದ ನಾರಾಯಣಗೌಡರನ್ನು ಬೆಂಗಳೂರಿನ ರಿಯಾಬ್ ಕೇಂದ್ರಕ್ಕೆ ಹಾಕಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ನೀಡಿದ್ದಾರೆಂದು ನಾರಾಯಣಗೌಡರು ಪೊಲೀಸರಿಗೆ ದೂರನ್ನು ನೀಡಲಾಗಿದೆ ಎಂದರು. ನಾಡಪ್ರಭು ಕೆಂಪೇಗೌಡ ವೇದಿಕೆಯ ರಾಜ್ಯದ್ಯಕ್ಷರಾದ ಆನಂದ್ ಕುಮಾರ್ ಮಾತನಾಡಿ ಮಾನಸಿಕವಾಗಿ ನೊಂದಿರುವ ಹಿರಿಯ ನಾಗರಿಕರಾದ ನಾರಾಯಣಗೌಡರಿಗೆ ಜಿಲ್ಲಾಡಳಿತ ಸೂಕ್ತ ಭದ್ರತೆ ಒದಗಿಸಿ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನಾರಾಯಣಗೌಡರ ಹೆಂಡತಿ ಮತ್ತು ಮಕ್ಕಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಹಿರಿಯ ನಾಗರಿಕರಾದ ನಾರಾಯಣಗೌಡರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು. ಇದೇ ಸಂಧರ್ಭದಲ್ಲಿ ನಾರಾಯಣಗೌಡರ ಸಹೋದರಿಯರು ಹಾಗೂ ಸಂಬಂಧಿಕರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
