ಚನ್ನರಾಯಪಟ್ಟಣ: ಹೊಸ ಬಸ್ ನಿಲ್ದಾಣದ ಎದುರು ಇರುವ ಕುವೆಂಪು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಆಟೋ ನಿಲ್ದಾಣದ ಮೇಲ್ಟಾವಣಿಯನ್ನು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣರವರು ಉದ್ಘಾಟಿಸಿ ಮಾತನಾಡಿ ದಶಕಗಳಿಂದ ಆಟೋ ಚಾಲಕರ ಬೇಡಿಕೆ ಆದಂತಹ ನಿಲ್ದಾಣದ ಚಾವಣಿಯನ್ನು ಈ ದಿನ ಎರಡು ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗಿದೆ ಎಂದರು.
ಎಲ್ಲಾ ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಅದೇ ರೀತಿ ಎಲ್ಲಾ ಆಟೋ ಚಾಲಕರು ವಾಹನ ಪರವಾನಗಿ, ಕಡ್ಡಾಯವಾಗಿ ಇನ್ಸೂರೆನ್ಸ್ ಗಳನ್ನು ಮಾಡಿಸಿಕೊಂಡು ಜಾಗೃತಿಯಿಂದ ವಾಹನ ಚಾಲನೆ ಮಾಡಬೇಕೆಂದು ಸಲಹೆ ನೀಡಿದರು. ಎಲ್ಲರೂ ಸಹ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಶಾಸಕರಾದ ಸಿ ಎನ್ ಬಾಲಕೃಷ್ಣ, ಪುರಸಭಾ ಅಧ್ಯಕ್ಷರಾದ ಮೋಹನ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳಾದ ಮಖಾನ್ ಬಾಬು, ಸಿ ಪಿ ಮಂಜುನಾಥ್, ಕೆರೆ ಬೀದಿ ರಂಗಣ್ಣ,ಗೋವಿಂದ ಕೆರೆ ಬೀದಿ, ತಗ್ಯಮ್ಮ ಬಡಾವಣೆ ಶಿವರಾಜ್, ಚಿಕ್ಕಣ್ಣ, ಲಕ್ಷ್ಮಣ್ ಕ್ಯಾಂಟೀನ್, ಸೇರಿದಂತೆ ಇತರರು ಹಾಜರಿದ್ದರು.
