ಚನ್ನರಾಯಪಟ್ಟಣ: ತಾಲೂಕು ಮಿನಿ ವಿಧಾನಸೌಧದ ಮುಂಭಾಗ ತಾಲೂಕು ಕಬ್ಬು ಬೆಳೆಗಾರರ ಒಕ್ಕೂಟದ ವತಿಯಿಂದ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಹಾಗೂ ಶ್ರೀನಿವಾಸಪುರ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಸಮಸ್ಯೆಗಳ ಕಡೆ ಹೆಚ್ಚಿನ ಮುತ್ತುವರ್ಜಿ ವಹಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನವೀನ್ ಕುಮಾರ್ ಮಾತನಾಡಿ ರೈತರಿಗೆ ನೈಜ್ಯವಾದ ಬೆಂಬಲ ಬೆಲೆ ಸಿಗದೇ ಇರುವುದು ದೊಡ್ಡ ದುರಂತವಾಗಿದೆ, ಈ ಬಗ್ಗೆ ಎಲ್ಲಾ ರೈತರು ಒಗ್ಗಟ್ಟಿನಿಂದ ತಮ್ಮ ಹಕ್ಕುಗಳನ್ನು ಹೋರಾಟ ಮಾಡುವ ಮೂಲಕ ಪಡೆದುಕೊಳ್ಳಬಹುದು ಎಂದು ಹೇಳಿದರು. ರೈತರಿಗೂ ಪ್ರತಿ ಬಾರಿಯೂ ನಿಗದಿತ ಬೆಂಬಲ ಬೆಲೆಯನ್ನು ನೀಡದೆ ವಂಚನೆ ಮಾಡಲಾಗುತ್ತದೆ ಈ ಬಗ್ಗೆ ಕೂಡಲೇ ಅಧಿಕಾರಿಗಳ ವರ್ಗ ಮಧ್ಯಪ್ರದೇಶ ಮಾಡಿ ಕಬ್ಬು ಬೆಳಗಾರರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಭರತ್ ರಾಜ್ ಹಾಗೂ ಹಾಸನ ಜಿಲ್ಲಾ ಅಧ್ಯಕ್ಷರಾದ ನವೀನ್ ಕುಮಾರ್,
ಗೊಲ್ಲರಹೊಸಹಳ್ಳಿ ಮಂಜುನಾಥ್, ಕಲ್ಕೆರೆ ವಾಸುದೇವ್, ಗೋವಿನಕೆರೆ ತೇಜಸ್, ಜೋಗಿಪುರ ಮಂಜೇಗೌಡ, ಸೇರಿದಂತೆ ಇತರರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್

[…] […]