
*🔰6ನೇ ತಲೆಮಾರಿನ ಫೈಟರ್ ಜೆಟ್ ಸಿದ್ಧಪಡಿಸಿದ ಜಪಾನ್*
– ಮಿಟ್ಸುಬಿಷಿ F-X ಎಂದು ಕರೆಯಲಾಗುವ ಈ ಫೈಟರ್ ಜೆಟ್, ರಾಡಾರ್ಗೂ ಸಿಗದ,ಅತಿ ವೇಗದ ಹಾರಾಟದ ಅತ್ಯಾಧುನಿಕ ಯುದ್ಧ ವಿಮಾನವಾಗಿದೆ.
– ಆಧುನಿಕ ಯುಗದಲ್ಲಿ ಜಗತ್ತಿನ ಮೂರು ಪ್ರಮುಖ ರಾಷ್ಟ್ರಗಳ ಬಳಿ ಮಾತ್ರ ಇರುವ ಇಂಥ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಜಪಾನ್, ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳಿಗೆ ತನ್ನ ತಂತ್ರಜ್ಞಾನ ಸಾಮರ್ಥ್ಯದ ಮೂಲಕವೇ ಉತ್ತರ ರವಾನಿಸಿದೆ.
– 2022ರ ಡಿಸೆಂಬರ್ನಲ್ಲಿ ಅತ್ಯಾಧುನಿಕ ಯುದ್ಧ ವಿಮಾನ ಅಭಿವೃದ್ಧಿಯಲ್ಲಿ ಜಪಾನ್ ಜತೆಗೆ ಬ್ರಿಟನ್ ಮತ್ತು ಇಟಲಿ ಅಧಿಕೃತವಾಗಿ ಜತೆಗೂಡಿದವು. ಇದಕ್ಕಾಗಿ ಜಾಗತಿಕ ಯುದ್ಧ ವಿಮಾನ ಕಾರ್ಯಕ್ರಮ (GCAP) ಅಸ್ತಿತ್ವಕ್ಕೆ ಬಂದಿತು.
– ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಈ ಪಾಲುದಾರಿಕೆಯ ಬಳಕೆಯೋಗ್ಯ 6ನೇ ತಲೆಮಾರಿನ ಯುದ್ಧ ವಿಮಾನವು 2035ರ ಹೊತ್ತಿಗೆ ಹೊಸ ತಂತ್ರಜ್ಞಾನದೊಂದಿಗೆ ಲಭ್ಯವಾಗಲಿದೆ.