ಕೆ.ಆರ್.ಪೇಟೆ: ಕ್ರೀಡೆಯಲ್ಲಿ ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದರೆ ಮಾತ್ರ ಜೀವನದಲ್ಲಿ ಉತ್ತಮ ಕ್ರೀಡಾಪಟು ಆಗಲು ಸಾಧ್ಯ ಎಂದು ಸಮಾಜ ಸೇವಕರಾದ ಆರ್ ಟಿ ಓ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದ ಪರಮಪೂಜ್ಯ ಡಾ || ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀ ಕ್ರೀಡಾಂಗಣ ಆವರಣದಲ್ಲಿ ರಾಯಲ್ ಸ್ಪೋರ್ಟ್ಸ್ ಕ್ಲಬ್ ವ್ಯವಸ್ಥಾಪಕ ಹೊಸಹೊಳಲು ರಾಘವ ನೇತೃತ್ವದಲ್ಲಿ ಪ್ರೇಮಿಯರ್ ಲೀಗ್ ಸೀಸನ್ 2 ಕ್ರೀಡೆಯಲ್ಲಿ ಪಾಲ್ಗೊಂಡು ವಿಜೇತರಾದ ತಂಡಗಳಿಗೆ ಆಕರ್ಷಕ ಬಹುಮಾನದ ಜೊತೆಗೆ ಟ್ರೋಪಿ ನೀಡಿ ಮಾತನಾಡಿದರು.ಒಬ್ಬ ಯೋಧ ದೇಶಕ್ಕಾಗಿ ತನ್ನ ಕೊನೆಯ ಉಸಿರಿನವರೆಗೆ ಹೋರಾಡುತ್ತಾನೋ ಅದೇ ರೀತಿ ಒಬ್ಬ ಕ್ರೀಡಾಪಟು ತಾನು ಭಾಗವಹಿಸಿದ ಕ್ರೀಡೆಯಲ್ಲಿ ಸೋಲಿಗೆ ಮನಸೋಲದೆ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಕ್ರೀಡೆಯನ್ನು ಪೂರ್ಣಗೊಳಿಸುವವನು ಮುಂದೆ ಉತ್ತಮ ಕ್ರೀಡಾಪಟುವಾಗುತ್ತಾನೆ.ಕ್ರಿಕೆಟ್ ಇಂದು ದೇಶದ ಎಲ್ಲಾ ಕ್ರೀಡಾ ಪ್ರೇಮಿಗಳು ಇಷ್ಟಪಡುವ ಕ್ರೀಡೆಯಾಗಿದೆ ನಮ್ಮ ತಾಲೂಕಿನಲ್ಲೂ ಇಂತಹ ಪಂದ್ಯಾವಳಿಗಳು ನಡೆಯುವುದರಿಂದ ಅನೇಕ ಕ್ರಿಕೆಟ್ ಪಟುಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿದೆ. ತಾಲ್ಲೂಕು ಅಲ್ಲದೆ ಹೊರಜಿಲ್ಲೆಯಿಂದ ಹತ್ತಾರು ಶ್ರೇಷ್ಠ ಕ್ರಿಕೆಟ್ ಆಟಗಾರರು ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಖ್ಯಾತಿಯನ್ನು ಪಡೆದಿದ್ದಾರೆ. ಕ್ರೀಡೆಗೆ ಪ್ರೋತ್ಸಾಹ ನೀಡಲು ರಾಜ್ಯ ಸರಕಾರವು ಕೋಟ್ಯಂತರ ಅನುದಾನ ನೀಡಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಕ್ರೀಡೆಯನ್ನು ಅದರ ನೈಜ ರೀತಿಯಲ್ಲಿಆಸ್ವಾಧಿಸುತ್ತಾ ಸಮಾಜದಲ್ಲಿಸಾಮರಸ್ಯ ಸಾಧಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದ ಅವರು ಎಲ್ಲಾ ಜನಾಂಗದ ಕ್ರೀಡಾಪಟುಗಳನ್ನು ಒಗ್ಗೂಡಿಸಿ ಆಯೋಜಿಸುವ ಇಂತಹ ಕ್ರೀಡಾಕೂಟದಿಂದ ಸಮಾಜದಲ್ಲಿ ಶಾಂತಿ,ಸೌಹಾರ್ದತೆ,ಸಹಬಾಳ್ವೆ ಕಾಣಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಹೊರತರಲು ಇಂತಹ ಕ್ರೀಡೆ ಸಹಕಾರಿಯಾಗಲಿದೆ. ನಮ್ಮ ಭಾಗದಿಂದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಜಿಲ್ಲೆ, ರಾಜ್ಯಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದರು.

ಕ್ರೀಡಾ ಆಯೋಜಿಸಿದ ಹೊಸಹೊಳಲು ರಾಘವ ಮಾಲೀಕತ್ವದ ರಾಯಲ್ ಸ್ಪೋರ್ಟ್ಸ್ ಕ್ಲಬ್ ವಿನ್ನರ್ ಆಗಿ 2.ಲಕ್ಷ ಬಹುಮಾನ ಜೊತೆಗೆ ಆಕರ್ಷಕ ಟ್ರೋಪಿ, ಎರಡನೇ ಬಹುಮಾನ ಸದ್ದಾಮ್ ಫ್ರೆಂಡ್ಸ್ 80.ಸಾವಿರ ನಗದು ಬಹುಮಾನ ಜೊತೆಗೆ ಟ್ರೋಫಿ, ಮೂರನೇ ಬಹುಮಾನಕ್ಕೆ ಶ್ರೀ ಕಿಕ್ಕೇರಿಮ್ಮ ಕ್ರಿಕೆಟರ್ಸ್ 40,ಸಾವಿರ ಜೊತೆಗೆ ಟ್ರೋಫಿ, ನಾಲ್ಕನೇ ಬಹುಮಾನಕ್ಕೆ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಕ್ರಿಕೆಟರ್ 30. ಸಾವಿರ ನಗದು ಬಹುಮಾನದ ಜೊತೆಗೆ ಆಕರ್ಷಕ ಟ್ರೋಪಿಯನ್ನ ತಮ್ಮದಾಗಿಸಿಕೊಂಡರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಯುವ ಉದ್ಯಮಿ ವಾಸು, ರಾಯಲ್ ಸ್ಪೋರ್ಟ್ಸ್ ಕ್ಲಬ್ ವ್ಯವಸ್ಥಾಪಕ ಹೊಸ ಹೊಳಲು ರಾಘು,ಹೊಸಹೊಳಲು ಮಾರುತಿ ಯುವಕರ ಸಂಘದ ಅಧ್ಯಕ್ಷ ಶ್ರೀನಿವಾಸ್,ಯುವ ಮುಖಂಡ ಅಜಯ್ ಕುಮಾರ್,ಬಾಬು,ಕಾರ್ತಿಕ್, ಜೈಕುಮಾರ್, ಧನುಷ್ ಗೌಡ, ಅನಿಲ್, ಪುನೀತ್,ಸಾಗರ್, ಸೇರಿದಂತೆ ಕ್ರೀಡಾಭಿಮಾನಿಗಳಿದ್ದರೂ.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
