ಕೊರಟಗೆರೆ:- ಸರ್ಕಾರವು ಗ್ಯಾರೆಂಟಿ ಯೋಜನೆ ಮತ್ತು ಹಾಲು ಉತ್ಪಾದಕರಿಗೆ ಉತ್ತೇಜನ ನೀಡುತ್ತಿರುವುದರಿಂದ ಗ್ರಾಮೀಣ ಮಹಿಳೆಯರ ಬದುಕು ಸದೃಡವಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಕೊರಟಗೆರೆ ತಾಲ್ಲೂಕಿನ ಅಗ್ರಹಾರ, ತೀತಾ, ಬೈರಗೊಂಡ್ಲು, ಪುಟ್ಟಸಂದ್ರ ಗ್ರಾಮಗಳಲ್ಲಿ ತುಮಕೂರು ಹಾಲು ಒಕ್ಕೂಟ ನಿಯಮಿತದಿಂದ ಸುಮಾರು 80 ಲಕ್ಷರೂಗಳ ವೆಚ್ಚದ 4 ಹಾಲು ಶೇಖರಣಾ ಘಟಕಗಳನ್ನು ಉದ್ಘಾಟನೆ ಮಾಡಿ ಮಾತನಾಡಿ ರೈತನ ಬದುಕನ್ನು ಸಿಲ್ಕ್ ಮತ್ತು ಮಿಲ್ಕ್ ಒಂದು ವರದಾನವಾದ ಉದ್ಯಮವಾಗಿದೆ ಭಾರತ ದೇಶ ಪ್ರಪಂಚದಲ್ಲೇ ಹಾಲು ಉತ್ಪಾದನೆಯಲ್ಲಿ ಮೊದಲ ದೇಶವಾದರೆ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಎರಡನೇ ರಾಜ್ಯವಾಗಿದೆ, ತುಮುಲ್ ಹಾಲು ಉತ್ಪಾದನೆಯಲ್ಲಿ ಎರಡನೇ ಜಿಲ್ಲೆಯಾಗಿದೆ ತುಮುಲ್ ಮುಂಬಯ್, ಕೇರಳ, ಶ್ರೀಲಂಕಾ ಗಳಿಗೂ ಹಾಲು ರಪ್ತು ಮಾಡುತ್ತಿದೆ, ನಮ್ಮ ಸರ್ಕಾರವು ಹಾಲು ಉತ್ಪಾದನೆ ಉತ್ತೇಜನಕ್ಕೆ ರೈತರಿಗೆ ಲೀಟರ್ 5 ರೂ ಪ್ರೋತ್ಸಾಹ ಧನ ನೀಡುತ್ತಿದೆ ನಮ್ಮ ಗ್ಯಾರೆಂಟಿ ಹಣ ನಮ್ಮ ಸರ್ಕಾರದ ಕಾರ್ಯಕ್ರಮಗಳು ಗ್ರಾಮೀಣ ಮತ್ತು ಸಾಮಾನ್ಯ ಜನರ ಬದುಕನ್ನು ಸುದಾರಿಸುವ ಗುರಿ ಹೊಂದಿದ್ದು ಎಷ್ಟೇ ಟೀಕೆ ಟಿಪ್ಪಣೆ ಬಂದರೂ ನಮ್ಮ ಜನಪರ ಯೋಜನೆ ನಿಲ್ಲುವುದಿಲ್ಲ ಎಂದರು.
ಕೊರಟಗೆರೆಯಲ್ಲಿ ರೈತಭವನ- ಕೊರಟಗೆರೆ ತಾಲ್ಲೂಕು ಕೆಂದ್ರದಲ್ಲಿ ತುಮುಲ್ ನಿಂದ ಸುಮಾರು 10 ಕೋಟಿ ವೆಚ್ಚದಲ್ಲಿ ರೈತಭವನವನ್ನು ನಿರ್ಮಾಣ ಮಾಡಲು ಹಣ ಮುಂಜೂರು ಮಾಡಿಸಲಾಗುವುದು ಇದ್ದಕ್ಕೆ ಜಾಗವನ್ನು ನೀಡಲಾಗುವುದು, ಕೊರಟಗೆರೆ ಪಟ್ಟಣದಲ್ಲಿ ರೈತರ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತುಮಕೂರಿನಂತೆ ಹೆಣ್ಣು ಮಕ್ಕಳ ಹಾಸ್ಟಲ್ ನ್ನು ನಿರ್ಮಾಣ ಮಾಡಲಾಗುವುದು ಹಾಗೂ ತುಮಕೂರಿನಲ್ಲಿ ಮೆಗಾ ಡೈರಿಯಾದರೆ ಅಲ್ಲಿ ಕೊರಟಗೆರೆ ಮತ್ತು ತುಮಕೂರು ಜಿಲ್ಲೆಯ ಹಲವರಿಗೆ ಉದ್ಯೋಗ ನೀಡುವಂತೆ ತುಮುಲ್ ಗೆ ಮನವಿ ಮಾಡುವುದಾಗಿ ಗೃಹ ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಶ್ರೀ ಹನುಮಂತನಾಥಸ್ವಾಮೀಜಿ ಮಾತನಾಡಿ ಕೊರಟಗೆರೆ ಕ್ಷೇತ್ರ 2013 ರಲ್ಲಿ ಒಂದು ರಾಜ್ಯದಲ್ಲಿ ಮಹತ್ವ ಸ್ಥಾನ ಕಳೆದುಕೊಂಡಿದೆ ಈಗ ಮತ್ತೆ ಅವಕಾಶ ಬಂದರೆ ಡಾ.ಜಿ.ಪರಮೇಶ್ವರ ರವರು ಮುಖ್ಯಮಂತ್ರಿಯಾಗಲಿ ಎಂದು ಜಿಲ್ಲೆಯ ಹಲವಾರು ಸಂತರು ಮಠಾಧೀಶ್ವರ ರವರುಗಳು ಅವರ ಪರ ಧ್ವನಿ ಎತ್ತಿದ್ದೇವೆ, ಇದರಲ್ಲಿ ಯಾವುದೇ ಜಾತಿ ಮತ ಪಕ್ಷ ವಿಲ್ಲ ತುಮಕೂರು ಜಿಲ್ಲೆ ಏಳಿಗೆ ಮತ್ತು ಅಭಿವೃದ್ದಿ ದೃಷ್ಟಿಯಿಂದ ಮಾತ್ರ, ಈ ಬಾರಿಯೂ ಅವಕಾಶ ತಪ್ಪಿದರೆ ಇತಿಹಾಸದಲ್ಲಿ ತುಮಕೂರು ಜಿಲ್ಲೆಯವರು ಮುಖ್ಯಮಂತ್ರಿ ಯಾಗುವುದು ಕಷ್ಟ, ಡಾ,ಜಿ.ಪರಮೇಶ್ವರ ರವರು ಸಜ್ಜನ ಉತ್ತಮ ರಾಜಕಾರಣಿಯಾಗಿದ್ದು ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ ಎಂದರು.
ತುಮುಲ್ ಅದ್ಯಕ್ಷ ಶಾಸಕ ವೆಂಕಟೇಶ್ ಮಾತನಾಡಿ ಡಾ.ಜಿ.ಪರಮೇಶ್ವರ ರವರು 2013 ರಲ್ಲಿ ಮುಖ್ಯಮಂತ್ರಿಯಾಗಬೇಕಿತ್ತು ಈಗ ಅವಕಾಶ ಬಂದರೆ ಅವರು ಮುಖ್ಯಮಂತ್ರಿಯಾಗಲಿ ಎಂದ ಅವರು ಡಾ.ಜಿ.ಪರಮೇಶ್ವರ ಮತ್ತು ಮಾಜಿ ಸಚಿವರಾದ ಕೆ.ಎನ್,ರಾಜಣ್ಣ ರವರಿಂದ ತುಮುಲ್ ಅದ್ಯಕ್ಷನಾಗಿದ್ದೇನೆ ಉತ್ತಮವಾಗಿ ಕೆಲಸ ಮಾಡುತ್ತೇನೆ, ಪ್ರತಿ ದಿನ 6.5 ಲಕ್ಷ ಲೀಟರ್ ಹಾಲು ಬರುತ್ತಿದ್ದು ಈಗ 10 ಲಕ್ಷ ದಾಟಿದೆ ಸುಮಾರು 100 ಕೊಟಿ ಲಾಭ ಬಂದಿದ್ದು ಅದರಲಿ ರೈತ ನೆರವಿಗೆ ಹಲವು ಯೊಜನೆ ನೀಡಿದ್ದೇವೆ ಮುಂದಿನ ದಿನಗಳಲ್ಲಿ ಡಾ.ಜಿ.ಪರಮೇಶ್ವರ ರವರ ನೇತೃತ್ವದಲ್ಲಿ ತುಮಕೂರಿನಲ್ಲಿ ಮೆಗಾ ಡೈರಿ ತೆರೆಯುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಓಪ್ರಭು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಉಪವಿಭಾಗಾಧಿಕಾರಿ ಗೋಟೂರುಶಿವಪ್ಪ, ತಹಶೀಲ್ದಾರ್ ಮಂಜುನಾಥ್, ಇಓಅಪೂರ್ವ, ತುಮುಲ್ ನಿರ್ದೇಶಕ ಸಿದ್ದಗಂಗಪ್ಪ, ಎಂ.ಡಿ. ಶ್ರೀನಿವಾಸನ್, ವಿದ್ಯಾನಂದ, ಗ್ರಾ.ಪಂ ಅಧ್ಯಕ್ಷರುಗಳಾದ ಸುಮಂಗಲ, ಪ್ರಭಾಕರ್, ಗ್ಯಾರೆಂಟಿ ಅದ್ಯಕ್ಷ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವಥನಾರಾಯಣ್, ಅರಕೆರೆಶಂಕರ್, ಮಹಿಳಾ ಅದ್ಯಕ್ಷೆ ಜಯಮ್ಮ, ಯುವ ಅದ್ಯಕ್ಷ ಬೈರೇಶ್, ಮಹಾಲಿಂಗಪ್ಪ, ಬಿ.ಎಸ್.ದಿನೇಶ್, ವಾಲೆಚಂದ್ರಯ್ಯ, ಎಲ್.ರಾಜಣ್ಣ, ಬಸವರಾಜು, ಪಾಲಾಕ್ಷ ಸೇರಿದಂತೆ ಹಲವರು ಹಾಜರಿದ್ದರು.
– ಶ್ರೀನಿವಾಸ್ , ಕೊರಟಗೆರೆ.
