ಕೊರಟಗೆರೆ:-ತಾಲ್ಲೂಕಿನ ಹಲವಾರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಪಿ ಎನ್ ಕೃಷ್ಣಮೂರ್ತಿರವರ ಬೆಂಗಳೂರಿನ ರಾಜರಾಜೇಶ್ವರಿ ನಗರ.ದಾಸರಹಳ್ಳಿ ಒಳಗೊಂಡಂತೆ ಅವರ ಮೂಲ ರಾಜಕೀಯ ಸ್ಥಳವಾದ ತುಮಕೂರು ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಇಂದು 58ನೇ ಹುಟ್ಟುಹಬ್ಬದ ಪ್ರಯುಕ್ತ ಊರ್ಡಿಗೆರೆ. ಇರಕಸಂದ್ರ ಕಾಲೋನಿ. ಜಿ. ನಾಗೇನಹಳ್ಳಿಯ ಶನಿ ಮಹಾತ್ಮದೇವಸ್ಥಾನ. ಕೊರಟಗೆರೆಯ ಟೌನ್ ಹಾಗೂ ವಿಶೇಷವಾಗಿ ಕಟ್ಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಂಡು ಸಾಮಾನ್ಯರಲ್ಲಿ ಒಬ್ಬ ಸಾಮಾನ್ಯನಾಗಿ ಅಭಿಮಾನಿಗಳ ಜೊತೆ ಹಾಗೂ ಸಾರ್ವಜನಿಕರ ಜೊತೆ ಅತಿ ಪ್ರೀತಿ ವಿಶ್ವಾಸದಿಂದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು.

ಈ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಕೊರಟಗೆರೆ ತಾಲ್ಲೂಕಿನ ಹಾಗೂ ರಾಜರಾಜೇಶ್ವರಿ ನಗರ ಮತ್ತು ದಾಸರಹಳ್ಳಿ ನಗರಗಳಿಂದ ಅತಿ ಹೆಚ್ಚಿನ ಅಭಿಮಾನಿಗಳು ಹುಟ್ಟು ಹಬ್ಬದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು.

58ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಪಿ ಎನ್ ಕೃಷ್ಣಮೂರ್ತಿರವರು ಕೊರಟಗೆರೆ ತಾಲ್ಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಾಲು ವಿತರಣೆ. ಪೌರಕಾರ್ಮಿಕರಿಗೆ ಜರ್ಕಿನ್ ವಿತರಣೆ. ನಿರ್ಗತಿಕರಿಗೆ ಚಳಿಗಾಲದ ನಿಮಿತ ಹೊದಿಕೆ ವಿತರಣೆ ಮಾಡಲಾಯಿತು.

ವಿಶೇಷವಾಗಿ 58ನೇ ಹುಟ್ಟುಹಬ್ಬದ ಪ್ರಯುಕ್ತ ತುಮಕೂರಿನ ಜೂನಿಯರ್ ಕಾಲೇಜ್ ಮೈದಾನದಲ್ಲಿ ಆಯೋಜನೆ ಮಾಡಲಾಗಿರುವ ಡಾಕ್ಟರ್ ಪುನೀತ್ ರಾಜ್ ಕಪ್ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪದ್ಯವಳಿಗೆ ಹುಟ್ಟು ಹಬ್ಬದ ಪ್ರಯುಕ್ತ ವಿಜೇತರಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಿದ್ದು. ತುಮಕೂರಿನ ಪಿ ಎನ್ ಕೃಷ್ಣಮೂರ್ತಿರವರ ಅಭಿಮಾನಿಗಳು ಹಾಗೂ ರಾಜ್ ಕಪ್ ಅಭಿಮಾನಿ ತಂಡ ಹುಟ್ಟುಹಬ್ಬದಲ್ಲಿ ಭಾಗಿಯಾದರು. ವೇದಿಕೆಯಲ್ಲಿ ದುನಿಯಾ ವಿಜಿ ಅಭಿಮಾನಿಗಳು ಉಪಸ್ಥಿತರಿದ್ದರು.

ಪಿ ಎನ್ ಕೃಷ್ಣಮೂರ್ತಿರವರು ಮಾತನಾಡಿ, ನನ್ನ ಈ 35 ವರ್ಷದ ರಾಜಕೀಯ ಹಾಗೂ ಸಮಾಜಸೇವೆಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದೇನೆ. ಇದು ಯಾವುದೇ ಒಂದು ಮೂಲ ಉದ್ದೇಶವಿಲ್ಲದೆ ಸಾಮಾಜಿಕ ಉದ್ದೇಶವನ್ನು ಮಾತ್ರ ಗುರಿಯಾಗಿರಿಸಿಕೊಂಡು ಮಾಡಿದ್ದು.

ನಮ್ಮ ಈ ಕಾರ್ಯಕ್ಕೆ ಅಭಿಮಾನಿಗಳು ಸಾರ್ವಜನಿಕರು ಸಹಕಾರವನ್ನು ನೀಡಬೇಕು. ಆದುದರಿಂದ ನನ್ನ 58ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಒತ್ತಾಯದ ಮೇರೆಗೆ ಇಂದು ಬೆಳಿಗ್ಗೆಯಿಂದಲೂ ಅಭಿಮಾನಿಗಳು ರಾಜರಾಜೇಶ್ವರಿ ಹಾಗೂ ದಾಸರಹಳ್ಳಿಯಿಂದ ಅಭಿಮಾನಿಗಳು ಬಂದು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದು.

ತುಮಕೂರು ಜಿಲ್ಲೆಯ ಹಲವಾರು ಕಡೆ ಹಾಗೂ ನನ್ನ ನೆಚ್ಚಿನ ಕೊರಟಗೆರೆ ತಾಲೂಕಿನಲ್ಲಿ ವಿಶೇಷವಾಗಿ ಅಭಿಮಾನಗಳು ಹಾರ ತುರಾಯಿ ಅನ್ನದಾಸೋಹಗಳ ಮೂಲಕ ನನ್ನ ಹುಟ್ಟು ಹಬ್ಬವನ್ನು ಮಾಡಿರುವುದು ನನಗೆ ಸಂತಸವನ್ನು ತಂದಿದೆ. ನನ್ನ ಜನುಮದಿನವನ್ನು ಅದ್ದೂರಿಯಾಗಿ ಆಚರಿಸಿದ ನನ್ನೆಲ್ಲಾ ಅಭಿಮಾನಿಗಳಿಗೆ ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.
*ವರದಿ : ನರಸಿಂಹಯ್ಯ ಹೊಸಕೋಟೆ
