ಚನ್ನರಾಯಪಟ್ಟಣ: ಕನ್ನಡದ ರಾಷ್ಟ್ರಕವಿ ಕುವೆಂಪು ಅವರ 121ನೇ ಹುಟ್ಟುಹಬ್ಬದ ಅಂಗವಾಗಿ ಕುವೆಂಪು ಕ್ರಿಕೆಟರ್ಸ್ ವತಿಯಿಂದ ಏರ್ಪಡಿಸಿದ್ದ ಲೆಜೆಂಡ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಟ್ಟಣದ ಕುವೆಂಪು ಕ್ರಿಕೆಟರ್ಸ್ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಪಟ್ಟಣದ ಅರವಿಂದ್ ಕ್ರಿಕೆಟರ್ಸ್ ತಂಡವು ರನ್ನರ್ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ. ಗೋಪಾಲಸ್ವಾಮಿ, ಮಾಜಿ ನಗರ ಪ್ರಾಧಿಕಾರ ಅಧ್ಯಕ್ಷರಾದ ಅಣತಿ ಆನಂದ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಉದಯಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಕಲ್ಕೆರೆ ಮೋಹನ್ ಮತ್ತು ಜೆ.ಕೆ. ಮಂಜುನಾಥ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕುವೆಂಪು ಕ್ರಿಕೆಟರ್ಸ್ ಸಂಘದ ಅಪ್ಪಿ, ತಂಡದ ನಾಯಕ ಪ್ರವೀಣ್, ಅಮಿತ, ರವೀಂದ್ರ, ಸುಪ್ರೀತ್, ನವೀನ್ ಸೇರಿದಂತೆ ಇತರ ಆಟಗಾರರು ಮತ್ತು ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
ಅತಿಥಿಗಳು ವಿಜೇತ ಮತ್ತು ರನ್ನರ್ಅಪ್ ತಂಡಗಳಿಗೆ ಬಹುಮಾನ ವಿತರಿಸಿ, ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.
– ಮಂಜುನಾಥ್ ಐ ಕೆ

[…] ಇದನ್ನು ಓದಿ: ಚನ್ನರಾಯಪಟ್ಟಣ: ಲೆಜೆಂಡ್ ಕಪ್ ಕ್ರಿಕೆಟ್ನ… […]