“ವಿಶ್ವಕವಿ”
ನಾಡಗೀತೆ ಬರೆದುಕೊಟ್ಟ ಉತ್ಸವ ಕವಿಯೇ
ಕವಿಗಳಿಗೆ ಸ್ಪೂರ್ತಿಕೊಟ್ಟ ಪ್ರಕೃತಿ ಕವಿಯೇ
ಜ್ಞಾನಪೀಠ ತಂದುಕೊಟ್ಟ ರಾಮನ ಕವಿಯೇ
ಮಲೆನಾಡ ಬಸಿರಿನ ಹಸಿರಿನ ಕವಿಯೇ
ಬೆರಳ್ಗೆ ಕೊರಳ್ ನ ಏಕಲವ್ಯರ ಕವಿಯೇ
ರಕ್ತಾಕ್ಷಿ ಮಲೆಗಳ ಮಧು ಮಗಳ ಕವಿಯೇ
ಬಾರಿಸು ಕನ್ನಡ ಡಿಂಡಿಮ ಕನ್ನಡ ಕವಿಯೇ
ಭೇದ ಭಾವವಿಲ್ಲದ ವಿಶ್ವಪಥದ ಕವಿಯೇ
ರೀತಿ ನೀತಿ ಪ್ರೀತಿ ಕಂಡ ಕರುಣೆಯ ಕವಿಯೇ
ರೈತರ ಕುಳ ನೆನಸಿದ ಹಸಿರಿನ ಕವಿಯೇ
ಕವಿಶೈಲದಿ ಜ್ಞಾನ ಪಡೆದ ರಾಷ್ಟ್ರದ ಕವಿಯೇ
ನೀ ಅನಂತವಾಗು ಎಂದ ವಿಶ್ವಕವಿಯೇ.

ಎಸ್ ಸಿದ್ದರಾಜು
ಹಿರೀಸಾವೆ, ಹಾಸನ.
9242444982.
