ಮುಂಬೈ, 29 ಡಿಸೆಂಬರ್ 2025: ಭಾರತದ ಇಕ್ವಿಟಿ ಕ್ಯಾಪಿಟಲ್ ಮಾರ್ಕೆಟ್ 2020ರಿಂದ 2025ರ ಅವಧಿಯಲ್ಲಿ ಬಹಳ ದೊಡ್ಡ ಬದಲಾವಣೆ ಕಂಡಿದೆ. ಮೊದಲು ಇದು ಹೆಚ್ಚಾಗಿ ಪುನರಾವರ್ತಿತ ಹಣ ಸಂಗ್ರಹಿಸುವ ವ್ಯವಸ್ಥೆಯಾಗಿತ್ತು ಆದರೆ ಈಗ ಇದು ಹೆಚ್ಚು ಗಟ್ಟಿಯಾದ, ಸ್ಥಿರವಾದ ಮತ್ತು ವಿಶ್ವಾಸಾರ್ಹ ವೇದಿಕೆಯಾಗಿದ್ದು, ದೀರ್ಘಾವಧಿಗೆ ಬಂಡವಾಳ ಸಂಗ್ರಹಿಸಲು ಸಹಾಯ ಮಾಡುತ್ತಿದೆ ಎಂದು ಪ್ಯಾಂಟೋಮ್ಯಾಥ್ ಕ್ಯಾಪಿಟಲ್ ಬಿಡುಗಡೆ ಮಾಡಿದ ಪ್ರೈಮರಿ ಪಲ್ಸ್ 2025 ವರದಿ ಹೇಳುತ್ತದೆ.ಈ ವರದಿಯ ಪ್ರಕಾರ, ಭಾರತದ IPO ಮಾರುಕಟ್ಟೆ ಈಗ ಇನ್ನಷ್ಟು ಬಲವಾದ ಹಂತಕ್ಕೆ ಪ್ರವೇಶಿಸಿದೆ. ಡೀಲ್ಗಳ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಮೂಂಚೂಣಿಯಲ್ಲಿದ್ದು, 2026ರಲ್ಲಿ ಸುಮಾರು 4 ಲಕ್ಷ ಕೋಟಿ ರುಪಾಯಿ ಬಂಡವಾಳ ಸಂಗ್ರಹವಾಗುವ ಸಾಧ್ಯತೆ ಇದೆ. ಇದು ಭಾರತದ ಪ್ರೈಮರಿ ಮಾರ್ಕೆಟ್ ಎಷ್ಟು ದೊಡ್ಡದಾಗಿದೆ, ಆಳವಾಗಿದೆ ಮತ್ತು ಪಕ್ವವಾಗಿದೆ ಎನ್ನುವುದನ್ನು ತೋರಿಸುತ್ತದೆ.
2020ರ ನಂತರ ಭಾರತದ IPO ಪರಿಸರದಲ್ಲಿ ಸ್ಪಷ್ಟವಾದ ತಿರುವು ಕಂಡುಬಂದಿದೆ ಎಂದು ವರದಿ ಹೇಳುತ್ತದೆ. ಮೇನ್ಬೋರ್ಡ್ ಮತ್ತು SME ಎರಡೂ ವಿಭಾಗಗಳಲ್ಲಿ IPOಗಳ ವಿತರಣ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಇದು ಕೇವಲ ಅವಕಾಶ ನೋಡಿ ಲಿಸ್ಟಿಂಗ್ ಮಾಡುವ ಹಂತದಿಂದ, ನಿರಂತರವಾಗಿ ಹಣ ಸಂಗ್ರಹಿಸುವ ವ್ಯವಸ್ಥೆಗೆ ಮಾರುಕಟ್ಟೆ ಬದಲಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಮುಖ್ಯವಾಗಿ, 2025ರಲ್ಲಿ ಮೇನ್ಬೋರ್ಡ್ IPOಗಳ ಸಂಖ್ಯೆ 100 ಕ್ಕಿಂತ ಹೆಚ್ಚು ಆಗಿದೆ – ಇದು 2007ನಂತರ ಮೊದಲ ಬಾರಿಗೆ ಆಗಿದೆ. ಪ್ರಸ್ತುತ ವರ್ಷ 2025ರಲ್ಲಿ IPOಗಳ ಸಂಖ್ಯೆಯಲ್ಲಿ ವಿಶ್ವದಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, IPO ಮೂಲಕ ಸಂಗ್ರಹವಾದ ಹಣದ ಪ್ರಮಾಣದಲ್ಲೂ ಟಾಪ್ 3 ದೇಶಗಳಲ್ಲೊಂದು. ದೊಡ್ಡ ದೊಡ್ಡ ಕೆಲವೇ IPOಗಳ ಮೇಲೆ ಅವಲಂಬಿಸದೆ, ರು. 100–500 ಕೋಟಿ ಮತ್ತು ರು.1,000–2,000 ಕೋಟಿ ಸೆಗ್ಮೆಂಟ್ಗಳಲ್ಲಿ ಕೂಡ ಉತ್ತಮ ಬೆಳವಣಿಗೆ ಕಂಡಿದೆ.
ಹೂಡಿಕೆದಾರರ ಭಾಗವಹಿಸುವಿಕೆ ಕೂಡ ದೇಶದಾದ್ಯಂತ ಹೆಚ್ಚಾಗಿದೆ. ಅದರಲ್ಲೂ ಮುಂಬೈ ಇನ್ನೂ ಮುಖ್ಯ ಕೇಂದ್ರವಾಗಿದ್ದು, ರಿಟೇಲ್ ಮತ್ತು HNI ಅಪ್ಲಿಕೇಶನ್ಗಳಲ್ಲಿ ಕ್ರಮವಾಗಿ ಸರಿಸುಮಾರು 37% ಮತ್ತು 38% ಪಾಲು ಹೊಂದಿದೆ. ಜೊತೆಗೆ ಅಹಮದಾಬಾದ್, ಸೂರತ್, ರಾಜ್ಕೋಟ್, ಭಾವನಗರ, ಮೆಹ್ಸಾನಾ ಮುಂತಾದ ಗುಜರಾತ್ ನಗರಗಳಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದರ ಜೊತೆಗೆ ಭಿಲಾಯಿ (ಛತ್ತೀಸ್ಗಢ), ಕೆಂದ್ರಪಾಡಾ (ಒಡಿಶಾ), ಹಿಸಾರ್ (ಹರಿಯಾಣ) ಮುಂತಾದ ಮೆಟ್ರೋ ಅಲ್ಲದ ನಗರಗಳಿಂದಲೂ ಗಮನಾರ್ಹ ಹೂಡಿಕೆ ಕಾಣಿಸಿಕೊಂಡಿದೆ. ಇದು ಇಕ್ವಿಟಿ ಹೂಡಿಕೆ ಭಾರತದೆಲ್ಲೆಡೆ ನಿಧಾನವಾಗಿ ಜನಸಾಮಾನ್ಯರಿಗೂ ತಲುಪುತ್ತಿದೆ ಎನ್ನುವುದನ್ನು ತೋರಿಸುತ್ತದೆ.
ಇದನ್ನು ಓದಿ: ಎಂಬಸಿ ಮಾನ್ಯತಾ ಬಿಸಿನೆಸ್ ಪಾರ್ಕ್ನಲ್ಲಿ 530 ಕೋಟಿ ರೂ. ಹೂಡಿಕೆ: EAAA Alternativesಗೆ 3.76 ಲಕ್ಷ ಚದರ ಅಡಿ ಆಸ್ತಿ
ವರದಿಯ ಪ್ರಕಾರ IPO ಮೂಲಕ ಸಂಗ್ರಹವಾದ ಹಣದ ಸುಮಾರು 75%ಕ್ಕಿಂತ ಹೆಚ್ಚು ಹಣವನ್ನು ಉತ್ಪಾದಕ ಕಾರ್ಯಗಳಿಗೆ ಅಂದರೆ ವ್ಯವಹಾರ ವಿಸ್ತರಣೆ, ಹೊಸ ಸಾಮರ್ಥ್ಯ ನಿರ್ಮಾಣ, ಸಾಲ ತೀರಿಸುವುದು ಮತ್ತು ವರ್ಕಿಂಗ್ ಕ್ಯಾಪಿಟಲ್ಗೆ ಬಳಸಲಾಗಿದೆ, ಹಣಕಾಸು ಅಡ್ಜಸ್ಟ್ಮೆಂಟ್ಗಳಿಗೆ ಬಳಸಿಲ್ಲ ಎಂದು ಹೇಳುತ್ತದೆ. ಹಣಕಾಸು ಸೇವಾ ಕ್ಷೇತ್ರ ಮೊದಲ ಸ್ಥಾನದಲ್ಲಿದ್ದು, ನಂತರ ಮ್ಯಾನುಫ್ಯಾಕ್ಚರಿಂಗ್, ಇಂಡಸ್ಟ್ರಿಯಲ್ಸ್ ಮತ್ತು ಬಳಕೆಗೆ ಸಂಬಂಧಿಸಿದ ಕ್ಷೇತ್ರಗಳು ಇದ್ದು. ಇವು ಭಾರತದ ದೀರ್ಘಾವಧಿ ಬೆಳವಣಿಗೆಗೆ ಹೊಂದಿಕೊಳ್ಳುವ ಕ್ಷೇತ್ರಗಳಾಗಿವೆ.
ಹೂಡಿಕೆದಾರರ ಭಾಗವಹಿಸುವಿಕೆಯು ಈಗ ಹೆಚ್ಚು ಪಕ್ವವಾಗಿದ್ದು. ಮ್ಯೂಚುವಲ್ ಫಂಡ್ಗಳು ಆಂಕರ್ ಇನ್ವೆಸ್ಟರ್ಗಳಾಗಿ ಪ್ರಮುಖ ಪಾತ್ರ ವಹಿಸಿದ್ದು, ಹಣದ ಜೊತೆಗೆ ವಿಶ್ವಾಸವನ್ನೂ ನೀಡಿವೆ, ಆದರೆ ಆಯ್ದ IPOಗಳಲ್ಲಿ ಮಾತ್ರ ಹೂಡಿಕೆ ಮಾಡಿವೆ. ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರೂ ಆಯ್ಕೆಮಾಡಿ ಭಾಗವಹಿಸಿ, ಜಾಗತಿಕ ಮಟ್ಟದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದಾರೆ.
ಪ್ಯಾಂಟೋಮ್ಯಾಥ್ ಕ್ಯಾಪಿಟಲ್ನ CMD ಮಹಾವೀರ್ ಲುನಾವತ್ ಹೇಳುತ್ತಾರೆ “ಇಂದಿನ ಭಾರತದ IPO ಮಾರುಕಟ್ಟೆ ತಾತ್ಕಾಲಿಕ ಉತ್ಸಾಹದಿಂದ ಅಲ್ಲ, ಬದಲಾಗಿ ಗಟ್ಟಿಯಾದ ರಚನಾತ್ಮಕ ಪಕ್ವತೆಯಿಂದ ಮುಂದೆ ಸಾಗುತ್ತಿದೆ”. “IPOಗಳ ಸಂಖ್ಯೆ, ಸರಾಸರಿ ಡೀಲ್ ಸೈಸ್ ಮತ್ತು ಸಂಸ್ಥಾತ್ಮಕ ಶಿಸ್ತು – ಇವೆಲ್ಲವೂ ಒಟ್ಟಿಗೆ ಬೆಳೆಯುತ್ತಿರುವುದು ದೀರ್ಘಾವಧಿಗೆ ಬಲವಾದ ವ್ಯವಸ್ಥೆ ಇದೆ ಅನ್ನೋದನ್ನು ತೋರಿಸುತ್ತದೆ. ನಿಯಂತ್ರಣ ವ್ಯವಸ್ಥೆಗಳು ಇನ್ನಷ್ಟು ಬಲವಾಗುತ್ತಿರುವುದರಿಂದ, 2026ರಲ್ಲಿ 4 ಟ್ರಿಲಿಯನ್ಗಿಂತ ಹೆಚ್ಚು ಮೌಲ್ಯದ IPO ಪೈಪ್ಲೈನ್ ಕಾಣಿಸುತ್ತಿದೆ.” ಎಂದು ತಿಳಿಸಿದ್ದಾರೆ.
2025ರಲ್ಲಿ ಬಂದ ನಿಯಂತ್ರಣ ಸುಧಾರಣೆಗಳ ಸಹಾಯದಿಂದ – ಆಡಳಿತ ಮಾನದಂಡಗಳು, ಆಂಕರ್ ಹೂಡಿಕೆದಾರರ ಸ್ಥಿರತೆ ಮುಂತಾದವುಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದರಿಂದ ಭಾರತದ IPO ವ್ಯವಸ್ಥೆ ದೀರ್ಘಾವಧಿ ಆರ್ಥಿಕ ಬೆಳವಣಿಗೆಯೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಿದೆ ಮತ್ತು ಪ್ರೈಮರಿ ಮಾರ್ಕೆಟ್ ಭಾರತ ಕಂಪನಿಗಳಿಗೆ ಪ್ರಮುಖ ಹಣಕಾಸು ಎಂಜಿನ್ ಆಗಿ ರೂಪುಗೊಳ್ಳುತ್ತಿದೆ.

[…] ಇದನ್ನು ಓದು: 2026ರಲ್ಲಿ ಭಾರತದ ಕ್ಯಾಪಿಟಲ್ ಮಾರ್ಕೆಟ್ನಲ್… […]
[…] […]