ಹಾಸನ: ವಿಶ್ವ ಮಾನವ ದಿನದ ಅಂಗವಾಗಿ ಯುಗಕವಿ ಕುವೆಂಪು ಅವರ ಜನ್ಮದಿನೋತ್ಸವವನ್ನು ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಸೋಮವಾರ (ಡಿ.29) ಸಂಜೆ ರೋಟರಿ ಸನ್ ರೈಸ್ ಭವನದಲ್ಲಿ ಭಾವ–ಗೀತ ನಮನ ಕಾರ್ಯಕ್ರಮವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಾಡಗೀತೆಯೊಂದಿಗೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೆಸರಾಂತ ಜಾನಪದ ಕಲಾವಿದ ಕುಮಾರ್ ಕಟ್ಟೆ ಬೆಳಗುಲಿ ಅವರು ಕುವೆಂಪು ಅವರ ಹಲವು ಗೀತೆಗಳನ್ನು ಹಾಡಿ ಗೀತ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೋ. ಭುವನೇಶ್ ಹಾಗೂ ಆನ್ ಮಧುಮತಿ ಕೃಷ್ಣಮೂರ್ತಿ ಅವರು ಕುವೆಂಪು ಅವರ ಸಾಹಿತ್ಯ, ಮಾನವೀಯ ಚಿಂತನೆ ಹಾಗೂ ಸಾಮಾಜಿಕ ಸಂದೇಶಗಳ ಕುರಿತು ಮಾತನಾಡಿ ನುಡಿ ನಮನಗಳನ್ನು ಅರ್ಪಿಸಿದರು.
ಇದನ್ನು ಓದು: ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ಅವರಿಂದ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ಗೆ ಅಧಿಕೃತ ಭೇಟಿ
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಸನ್ ರೈಸ್ನ ಅಧ್ಯಕ್ಷ ರೋ. ವಜ್ರ ಕುಮಾರ್ ಎಚ್.ಡಿ., ಕಾರ್ಯದರ್ಶಿ ರೋ. ಯೋಗೇಶ್ ಕೆ.ಎಸ್., ಖಜಾಂಚಿ ರೋ. ಗವಿಗೌಡ, ಸದಸ್ಯರಾದ ರೋ. ರೂಪಶ್ರೀ ಆರ್., ಮಧುಮತಿ ಆರ್., ಆಶಾ ಎಚ್.ಡಿ. ಸೇರಿದಂತೆ ನಿರ್ದೇಶಕರು ರೋ. ಎಂ.ಸಿ. ರಾಜು, ರೋ. ಸಿದ್ದನಂಜಪ್ಪ, ರೋ. ಗುರುಮೂರ್ತಿ, ರೋ. ಶಶೀಂದ್ರನಾಥನ್ ಡಿ., ರೋ. ರಾಜೇಶ್, ರೋ. ದರ್ಶನ್ ಹಾಗೂ ಕ್ಲಬ್ನ ಇತರ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕ್ಲಬ್ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು.
