ತುಮಕೂರು- ಕನ್ನಡ ನೆಲ, ಜಲ, ನಾಡು, ಭಾಷೆ ಉಳಿವಿಗಾಗಿ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಕರೆ ನೀಡಿದರು.
ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು. ಈ ಮೂಲಕ ನಮ್ಮ ನೆಲ, ಜಲ ಹಾಗೂ ಭಾಷೆಗೆ ಧಕ್ಕೆ ಬಂದಾಗ ಹೋರಾಟ ನಡೆಸುವ ಮನೋಭಾವ ಹೊಂದಬೇಕು ಎಂದು ಅವರು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಸರ್ಕಾರಗಳ ಜತೆಗೆ ನಾಡಿನಲ್ಲಿರುವ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದ ಅವರು, ಮಯೂರ ವೇದಿಕೆಯಿಂದ 18ನೇ ವರ್ಷದ ಸೋಮೇಶ್ವರ ಕನ್ನಡ ಹಬ್ಬ ಆಚರಿಸುತ್ತಿರುವುದು ಈ ಬಡಾವಣೆಯ ನಾಗರಿಕರ ಸಹಕಾರಕ್ಕೆ ಸಾಕ್ಷಿಯಾಗಿದೆ ಎಂದರು.
ಇದನ್ನು ಓದಿ: ತುಮಕೂರು: ಯುಪಿಎಸ್ಸಿ ಸಾಧಕರ ಅನುಭವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ- ಮುರಳೀಧರಹಾಲಪ್ಪ
ಬಡಾವಣೆಗಳಲ್ಲಿ ಮನೆಯ ಅಕ್ಕಪಕ್ಕ ಬಾಡಿಗೆ ಬರುವ ಅನ್ಯ ಭಾಷೆಯವರಿಗೂ ಕನ್ನಡ ಭಾಷೆ ಕಲಿಸುವ ಕೆಲಸ ಆಗಬೇಕು. ಈ ಕಾರ್ಯವನ್ನು ಬೇರೆ ಯಾರೂ ಮಾಡುವುದಿಲ್ಲ, ನಾವು ನೀವೆಲ್ಲರೂ ಮಾಡಬೇಕು ಎಂದರು.ಮಯೂರ ವೇದಿಕೆಯ ಕನ್ನಡಾಭಿಮಾನ ಹೀಗೆ ಮುಂದುವರೆಯಲಿ, ನಮ್ಮ ಮಾತೃಭಾಷೆಯ ಅಭಿವೃದ್ಧಿಗೆ ಶ್ರಮಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್, ಡಾ.ವರುಣ್ ಅಸ್ರಣ್ಣ, ಮಯೂರ ವೇದಿಕೆಯ ಅಧ್ಯಕ್ಷ ಪಿ. ಸದಾಶಿವಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಆರ್. ಸ್ವಾಮಿ, ಟಿ.ಸಿ.ಕಾಂತರಾಜು, ಅನುಶಾಂತರಾಜು, ಚಂದ್ರಶೇಖರ್, ರವಿಚೆಂಗಾವಿ, ರಾಜಕುಮಾರ್ ಗುಪ್ತ, ಹೆಚ್.ಎನ್. ಶ್ರೀನಿವಾಸ್, ಎಸ್.ಪಿ.ಚಿದಾನಂದ್,ಪಿ. ಸದಾಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ

[…] […]