ಚನ್ನರಾಯಪಟ್ಟಣ: ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣ ಇವರ ವತಿಯಿಂದ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘ ಹೊಳೆನರಸೀಪುರ ಇವರ ಸಂಸ್ಥೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಾಗೂ ಮಹಿಳಾ ಆರೋಗ್ಯ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆ ಶ್ರೀ ಸೋಮಲಿಂಗೇಗೌಡ ಬಿ. ಇ .ಓ ಹಾಗೂ ಶ್ರೀ ಭರತ್ ಕುಮಾರ್ ಹೆಚ್. ಜಿ ಚೇರ್ಮನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು ಮತ್ತು ವೇದಿಕೆ ಗಣ್ಯರು ಉದ್ಘಾಟಿಸಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋಮಲಿಂಗೇಗೌಡ ರವರು ಇಂದು ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಮಹಿಳಾ ಶಿಕ್ಷಕರಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದು ಸಂತೋಷಕರವಾದ ವಿಷಯ, ಈ ಶಿಬಿರದ ಆಯೋಜನೆಯಲ್ಲಿ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ರವರ ಸಂಸ್ಥೆಯು ನೂತನವಾಗಿ ಉತ್ತಮ ಸಮಾಜ ಸೇವೆಗೆ ಪಾದಾರ್ಪಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭರತ್ ಕುಮಾರ್ ಹೆಚ್.ಜಿ ರವರು ಇಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಮಾನವ ಹಕ್ಕುಗಳ ದಿನಾಚರಣೆಯನ್ನು ವಿಶೇಷವಾಗಿ ಮಹಿಳಾ ಶಿಕ್ಷಕರು ಹಾಗೂ ಕುಟುಂಬದವರಿಗೆ ಆರೋಗ್ಯ ತಪಾಸಣೆ ಮತ್ತು ಆರೋಗ್ಯದ ಅರಿವು ಕಾರ್ಯಕ್ರಮದೊಂದಿಗೆ ಆಚರಿಸುತ್ತಿದೆ, ಈಗಿನ ಮನುಕುಲ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ ಮನುಷ್ಯನಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳು ಕಾರು, ಬಂಗಲೆ, ಹಣ ಇತ್ಯಾದಿ ಎಲ್ಲವನ್ನು ನಾವು ಅನುಭವಿಸಬಹುದು ಅಥವಾ ಕೊಂಡುಕೊಳ್ಳಬಹುದು ಆದರೆ ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಹಾಗೂ ಇಂದು ಹಲವಾರು ವೃತ್ತಿ ಕ್ಷೇತ್ರಗಳಲ್ಲಿ ಒತ್ತಡದ ಜೀವನವನ್ನು ನಡೆಸುತ್ತಿದ್ದೇವೆ ಹಾಗೂ ವಿಶೇಷವಾಗಿ ಶಿಕ್ಷಕರ ಕ್ಷೇತ್ರದಲ್ಲಿ ಒತ್ತಡತೆ ಹೆಚ್ಚಿದೆ ಆದಕಾರಣ ನಮ್ಮ ಸಂಸ್ಥೆ ವತಿಯಿಂದ ಶಿಕ್ಷಕರಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದೇವೆ, ಒಬ್ಬ ಶಿಕ್ಷಕರು ಆರೋಗ್ಯವಂತನಾಗಿದ್ದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಇಂದು ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣದ ವತಿಯಿಂದ ಉಚಿತ ಆರೋಗ್ಯ ಆರೋಗ್ಯ ಶಿಬಿರವನ್ನು ಇಂಡಿಯಾನಾ ಆಸ್ಪತ್ರೆ, ಹಾಸನ ಇವರ ಸಹಯೋಗದೊಂದಿಗೆ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಶ್ರೀಮತಿ ಮಮತಾ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ಸಂಸ್ಥೆ ಹೊಳೆನರಸೀಪುರ ರವರು ಇಂದು ರೆಡ್ ಕ್ರಾಸ್ ಸಂಸ್ಥೆಯು ದೇಶಾದ್ಯಂತ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ, ನಮ್ಮ ಜಿಲ್ಲೆಯಲ್ಲಿ ಸಾವಿರಾರು ಸಾರ್ವಜನಿಕರಿಗೆ ನೆರವಾಗುವ ಹಾಗೂ ಸಹಾಯ ಹಸ್ತ ನೀಡುವ ಏಕೈಕ ಸಂಸ್ಥೆ ಎಂದರೆ ಅದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇಂತ ಒಂದು ಸಂಸ್ಥೆಯ ಸಹಯೋಗದೊಂದಿಗೆ ಇಂದು ಶಿಕ್ಷಕರಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದು ನಮ್ಮ ಭಾಗ್ಯ ಎಂದು ಭಾವಿಸುತ್ತೇವೆ ಎಂದು ತಿಳಿಸಿದರು,
ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಶ್ರೀ ಜಬಿವುಲ್ಲಾ ಬೇಗ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು,
ಶ್ರೀ ಪ್ರವೀಣ್ ಕುಮಾರ್ ಅಧ್ಯಕ್ಷರು ರೋಟರಿ ಸಂಸ್ಥೆ ಹೊಳೆನರಸೀಪುರ, ಡಾ. ಚಿತ್ರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಇಂಡಿಯನ ಆಸ್ಪತ್ರೆ ಹಾಸನ, ಡಾ .ನಹೀಮ್ ಸಿದ್ದೀಕ್ ಮೂಳೆ ತಜ್ಞರು ಇಂಡಿಯನ್ ಆಸ್ಪತ್ರೆ ಹಾಸನ, ಡಾ. ನಿರೂಪ ಜನರಲ್ ಮೆಡಿಸಿನ್ ಇಂಡಿಯನ್ ಆಸ್ಪತ್ರೆ ಹಾಸನ, ಶ್ರೀ ಪೃಥ್ವಿರಾಜ್ ನೌಕರರ ಸಂಘದ ಅಧ್ಯಕ್ಷರು ಹೊಳೆನರಸೀಪುರ, ಶ್ರೀಮತಿ ಬ್ರಹ್ಮರಂಬಾ ಕಾರ್ಯದರ್ಶಿ ಸಾವಿತ್ರಿಬಾಯಿ ಫುಲೆ ಸಂಸ್ಥೆ ಹೊಳೆನರಸೀಪುರ, ಶ್ರೀಮತಿ ಮಧುಮತಿ ಖಜಾಂಚಿ ಸಾವಿತ್ರಿಬಾಯಿ ಫುಲೆ ಸಂಸ್ಥೆ ಹೊಳೆನರಸೀಪುರ ಹಾಗೂ ಹಲವು ಸಂಘ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಸಾವಿತ್ರಿಬಾಯಿ ಫುಲೆ ಸಂಸ್ಥೆಯ ಸರ್ವ ಸದಸ್ಯರು ಭಾಗಿಯಾಗಿದ್ದರು.

[…] […]
[…] ಚನ್ನರಾಯಪಟ್ಟಣ: ಮಾನವ ಹಕ್ಕುಗಳ ದಿನಾಚರಣೆ […]