ಚನ್ನರಾಯಪಟ್ಟಣ:ಭಾರತ ವಿಶ್ವದಲ್ಲಿಯೇ ದೊಡ್ಡ ಆರ್ಥಿಕ, ತಂತ್ರಜ್ಞಾನ ದೇಶವಾಗಿ ಬೆಳೆಯುತ್ತಿದ್ದು, ಸದ್ಯವೀಗ ನಾಲ್ಕನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ. ೨೦೫೦ ವೇಳೆಗೆ ದೇಶವು ವಿಶ್ವದ ನಂ. ೧. ಆರ್ಥಿಕ ರಾಷ್ಟ್ರವಾಗಿ ಬೆಳೆದು ನಿಲ್ಲಲ್ಲಿದೆ ಎಂದು ಎಂದು ಪದ್ಮಶ್ರೀ ಪುರಸ್ಕೃತ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್ಕುಮಾರ್ ತಿಳಿಸಿದರು.
ಪಟ್ಟಣದ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಜ್ಞಾನ ಸಾಗರ ಅಂತರಾಷ್ಟ್ರೀಯ ಶಾಲೆಯ ಆವರಣದಲ್ಲಿ ಅಯೋಜಿಸಿದ್ದ ಎರಡು ದಿನಗಳ ಜ್ಞಾನಸಾಗರ ಪರಂಪರ-೨೦೨೫ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಮಾತ್ರವಲ್ಲದೇ ಸಾಮಾಜಿಕವಾಗಿ ಮುಂದುವರೆಯಬೇಕಾದರೆ ವಿಜ್ಞಾನದಿಂದ ಮಾತ್ರ ಸಾಧ್ಯ. ಬೇರೆ ದೇಶಗಳು ೫೦ರ ದಶಕದಲ್ಲೇ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದವು, ಆಗ ಭಾರತದ ಸಾಧನೆ ಶೂನ್ಯವಾಗಿತ್ತು. ಅನೇಕ ಶ್ರೇಷ್ಠ ವಿಜ್ಞಾನಿಗಳು ಛಲಬಿಡದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತಿದೊಡ್ಡ ಸಾಧನೆ ಮಾಡುವಂತೆ ಇಸ್ರೋವನ್ನು ಕಟ್ಟಿ ಬೆಳೆಸಿದರು. ಇಂದು ಬೇರೆ ದೇಶಗಳನ್ನೂ ಮೀರಿಸಿ, ಬಾಹ್ಯಾಕಾಶ ಸಂಬAಧ ಯಾವುದೇ ದೇಶ ಮಾಡದ ಅನೇಕ ಸಾಧನೆಗಳನ್ನು ಇಸ್ರೋ ಮಾಡಿದೆ. ೨೦೪೭ಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಭಾರತವು ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಷ್ಯಾ ೧೯೫೭ರಲ್ಲಿ ಮೊದಲ ಉಪಗ್ರಹ ಉಡಾವಣೆ ಮಾಡಿತ್ತು. ಉಪಗ್ರಹ ವಿಚಾರದಲ್ಲಿ ರಷ್ಯಾ ಮತ್ತು ಅಮೆರಿಕ ನಡುವೆ ಪೈಪೋಟಿ ಏರ್ಪಟ್ಟಿದ್ದಾಗ ಭಾರತ ಆ ನಿಟ್ಟಿನಲ್ಲಿ ಸಾಕಷ್ಟು ಹಿಂದೆ ಇತ್ತು. ಎಂಬ ಭಾವನೆ ಮೂಡಿತ್ತು. ವಿಕ್ರಂ ಸಾರಾಭಾಯಿಯವರು ದೇಶದಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಅದರಲ್ಲೂ ವಿಶೇಷವಾಗಿ ಉಪಗ್ರಹ ತಂತ್ರಜ್ಞಾನಕ್ಕೆ ಮುಂದಾದಾಗ ನಮ್ಮಲ್ಲಿರುವ ಸಂಪನ್ಮೂಲ ಸೌಲಭ್ಯ ಅಷ್ಟಕಷ್ಟೇ ಎನ್ನುವಂತಿತ್ತು. ಮೀನುಗಾರರ ಜಾಗವನ್ನು ಉಪಗ್ರಹ ತಯಾರು ಪ್ರಯೋಗದ ಬಳಕೆ ಕಾರ್ಯಕ್ಕೆ ಮುಂದಾದಾಗ, ಮುಂದೊAದು ದಿನ ಮೀನುಗಾರಿಕೆಗೆ ಉಪಯುಕ್ತವಾಗುವಂತಹ ಮಾಹಿತಿ ಇದಾಗಲಿದೆ ಎಂಬ ಭರವಸೆ ಮೂಡಿತ್ತು. ಇದೀಗ ಮೀನುಗಾರರಿಗೆ ಉಪಗ್ರಹ ಆಧಾರಿತವಾಗಿ ಮೀನು ಹೆಚ್ಚು ಎಲ್ಲಿವೆ, ಮೀನುಗಾರರು ಸಮುದ್ರದಲ್ಲಿ ಎಷ್ಟು ದೂರ ಕ್ರಮಿಸಿದ್ದಾರೆ. ಅವರೇನಾದರೂ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದಾರೆಯೇ ಎಂಬ ನಿಖರ ಮಾಹಿತಿ ನೀಡುವಷರ ಮಟ್ಟಿಗೆ ನಮ್ಮ ತಂತಜ್ಞಾನ ಬೆಳೆದು ನಿಂತಿದೆ. ಇಸ್ರೋ ಆರು ದಶಕಗಳ ತನ್ನ ಯಾನದಲ್ಲಿ ಮಹತ್ವದ ಸಾಧನೆ ಮಾಡಿದೆ. ಪ್ರತಿ ಬಾರಿ ಉಪಗ್ರಹಗಳು ನಭೋಮಂಡಲಕ್ಕೆ ಚಿಮ್ಮಿದಾಗ ಭೂಮಂಡಲದ ಶ್ರೇಯೋಭಿವೃದ್ಧಿಯೇ ಪ್ರಮುಖ ಉದ್ದೇಶವಾಗಿರುತ್ತದೆ. ವಿಜ್ಞಾನ, ತಂತ್ರಜ್ಞಾನ ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕು. ಇಲ್ಲವಾದಲ್ಲಿ ತಂತ್ರಜ್ಞಾನ ತನ್ನ ಮಹತ್ವ ಕಳೆದುಕೊಳ್ಳುತ್ತದೆ, ಇಸ್ರೋ ಚಟುವಟಿಕೆಗಳು ದೇಶದ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ. ಕೃಷಿ, ಶಿಕ್ಷಣ ಸೇರಿದಂತೆ ಎಲ್ಲ ವಲಯಗಳಿಗೂ ಅನುಕೂಲಕರವಾಗಿವೆ ಎಂದು ತಿಳಿಸಿದರು.

ವಾಯ್ಸ್ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕೆ.ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನಾಡಿ ಶಿಕ್ಷಣ ಎನ್ನುವುದು ಅಂಕಗಳಿಕೆ, ಜ್ಞಾನರ್ಜನೆಗೆ ಮಾನದಂಡವಲ್ಲ, ಶಿಕ್ಷಣವನ್ನು ಮಕ್ಕಳ ಹೃದಯಕ್ಕೆ ತುಂಬದೇ, ಮೆದುಳಿಗೆ ಮಾಹಿತಿ ತುಂಬುವ ಶಿಕ್ಷಣವನ್ನಾಗಿಸಲಾಗಿದೆ. ಇದರಿಂದ ಮಕ್ಕಳಲ್ಲಿ ಸ್ವಂತಿಕೆ, ಸೃಜನಶೀಲತೆ ಇಲ್ಲದಂತಾಗಿದೆ. ಕೊಠಡಿಗಳಲ್ಲಿ ಭೋದಿಸುವ ಪಾಠದ ಜೊತೆಗೆ ಕಲೆ, ಕ್ರೀಡೆ, ಸಂಸ್ಕಾರ, ಸಂಸ್ಕೃತಿ, ನಾಡಹಬ್ಬ ಸೇರಿ ಸರ್ವತ್ತೋಮುಖ ಬೆಳವಣಿಗೆಗೆ ಮುಂದಾಗಿಬೇಕು, ಯಾವ ಶಿಕ್ಷಣ ಸಂಸ್ಥೆ ಅಂಕಗಳ ಜೊತೆಗೆ ಕ್ರೀಯಾಶೀಲ, ಕ್ರೀಡಾಶೀಲ, ಸಾಹಿತ್ಯ, ದೇಶಾಭಿಮಾನದ ಬಗೆ ಆಸಕ್ತಿ ಮೂಡಿಸುವುದೊ ಆ ಸಂಸ್ಥೆ ದೇಶದ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆ ನೀಡಿದಂತೆ, ಪೋಷಕರು ಮಗುವಿನ ಕಲಿಕೆಯ ನಂತರ ಆತನ ಅಂಕಗಳನ್ನಷ್ಟೆ ನೋಡದೇ, ದೇಶದ ಪರಂಪರೆ ಬಗೆ ತಿಳಿದಿದ್ದನಾ ಎಂದು ಅರಿತಾಗ ಕೊಡಿಸಿದ ಶಿಕ್ಷಣಕ್ಕೆ ಸಾರ್ಥಕತೆ ಸಿಗುತ್ತದೆ. ಯಾವುದೇ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣವು ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿರುತ್ತದೆ. ಶಿಕ್ಷಣವೆಂದರೆ ಪದವಿಗಳನ್ನು ಪಡೆಯುವುದು ಮಾತ್ರವಲ್ಲದೇ ಹೊಸ ಹೊಸ ಜ್ಞಾನವನ್ನು ಕಲಿಯುವುದೂ ಆಗಿರುತ್ತದೆ. ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಜ್ಞಾನಸಾಗರ ವಿದ್ಯಾ ಸಂಸ್ಥೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪ್ಯಾರಾ ಒಲಿಂಪಿಕ್ ಈಜುಗಾರ ಕೆ.ಎಸ್. ವಿಶ್ವಾಸ್ ಮಾತನಾಡಿ, ನಮಗೆ ಅಂಗವೈಕಲ್ಯ ಇರುವುದರಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಜನರು ಭಾವಿಸುತ್ತಾರೆ. ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಜನರು ಪ್ರತಿಭೆಯನ್ನು ಹೊಂದಿರುತ್ತಾರೆ ಆದರೆ ಅವುಗಳನ್ನು ಪ್ರದರ್ಶಿಸಲು ಯಾವುದೇ ಅವಕಾಶಗಳನ್ನು ಹೊಂದಿರುವುದಿಲ್ಲ. ನಾವು ಏನು ಮಾಡುವುದರಲ್ಲಿ ಉತ್ತಮರು ಎಂಬುದರ ಮೇಲೆ ನಾವು ಕೆಲಸ ಮಾಡಬೇಕು ಮತ್ತು ಯಾವುದೂ ಅಸಾಧ್ಯವಲ್ಲ ಎಂದು ಜಗತ್ತಿಗೆ ತೋರಿಸಬೇಕು. ನಿಮ್ಮ ಹೃದಯ ಹೇಳುವುದನ್ನು ಮಾಡಿ ಮತ್ತು ಅದರ ಮೇಲೆ ಕೇಂದ್ರೀಕರಿಸಿ. ಯಶಸ್ಸು ಎಂದಿಗೂ ವಿರಮಿಸುವುದಿಲ್ಲ, ಇಂತಹ ದೊಡ್ಡ ಶಿಕ್ಷಣ ಸಂಸ್ಥೆ ನನ್ನನ್ನು ಅಭಿನಂದಿಸಿರುವುದಕ್ಕೆ ಋಣಿ ಎಂದ ಅವರು ಉತ್ತಮ ಕಲಿಕೆಗೆ ಮುಂದಾಗುವAತೆ ಮಕ್ಕಳಿಗೆ ಕಿವಿಮಾತು ಹೇಳಿದರು.
ತಾಲೂಕು ದಂಡಧಿಕಾರಿ ಜಿ.ಎಸ್ ಶಂಕರಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ.ಎನ್.ಅನಿಲ್ ಮಾತನಾಡಿದರು. ಸಂಸ್ಥೆಯ ಮುಖ್ಯ ಕಾರ್ಯಕಾರಿ ನಿರ್ದೇಶಕಿ ಡಾ.ಭಾರತಿನಾಗೇಶ್ ಪ್ರಾಸ್ತವಿಕವಾಗಿ ಮಾತನಾಡಿದರೇ, ಡೀನ್ ಡಾ.ಸುಜಾ ಫಿಲಿಪ್ ವಾರ್ಷಿಕವರದಿ ಮಂಡನೆ ಮಾಡಿದರು. ಇದೇ ಸಂದರ್ಭದಲ್ಲಿ ಲಂಡನ್ ರಾಯಲ್ ಕಾಲೇಜ್ ಆಫ್ ರೆಡಿಯಾಲಾಜಿಸ್ಟ್ ಸಂಸ್ಥೆಯಲ್ಲಿ “ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ರೆಡಿಯಾಲಾಜಿಸ್ಟ್” ಪದವಿ ಪಡೆದ ವೈದ್ಯೆ ಡಾ.ನಿಖಿತಾ ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತ್ತು. ಸಂಸ್ಥೆಯ ಆಡಳಿತಾಧಿಕಾರಿ ಪಿಲೀಪ್, ಸೇರಿ ಇತರರು ಹಾಜರಿದ್ದರು. ವೇದಿಕೆ ಕಾರ್ಯಕ್ರಮ
ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಇದನ್ನು ಓದಿ –

[…] 2050ಕ್ಕೆ ಭಾರತ ವಿಶ್ವದ ನಂ.1 ಆರ್ಥಿಕ ರಾಷ್ಟ್ರ: … […]