ಚನ್ನರಾಯಪಟ್ಟಣ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡನೀಯ ಎಂದು ಬಿಜೆಪಿ ಮುಖಂಡ ಸಿಆರ್ ಚಿದಾನಂದ್ ಹೇಳಿದರು. ಪಟ್ಟಣದಲ್ಲಿ ಬಂದ್ ಆಚರಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಬಾಂಗ್ಲಾದೇಶಕ್ಕೆ ಭಾರತ ನೀಡಿದ ಸಹಕಾರವನ್ನು ಬಾಂಗ್ಲಾ ಎಂದಿಗೂ ಮರೆಯುವಂತಿಲ್ಲ. ಭಾರತ ದೇಶದ ಸಹಾಯ ಸಹಕಾರವನ್ನು ಮರೆತ ಬಾಂಗ್ಲಾದೇಶವು ಈ ದಿನ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಸರಿಯಲ್ಲ ಎಂದರು. ಈ ಕೂಡಲೇ ವಲಸಿಗರನ್ನು ಕರ್ನಾಟಕದಿಂದ ಹೊರಹಾಕಲು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು. ಅದೇ ರೀತಿ ಕೇಂದ್ರ ಸರ್ಕಾರವು ಕೂಡಲೇ ಮಧ್ಯಪ್ರವೇಶ ಮಾಡಿ ಬಾಂಗ್ಲಾದಲ್ಲಿರುವ ಹಿಂದುಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು. ಪಟ್ಟಣ್ಯಾದ್ಯಂತ ಸ್ವಯಂಪ್ರೇರಿತ ಬಂದ್ ಮಾಡಲಾಯಿತು. ಈ ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಪಕ್ಷದ ಮುಖಂಡರಾದ ಚಿದಾನಂದ್ ಸಿ ಆರ್, ವಿ ಎಚ್ ಬಿ ಜಿಲ್ಲಾಧ್ಯಕ್ಷ ಬೆಕ್ಕ ರಮೇಶ್, ಹಿಂದೂ ಕಮಾಂಡಸ್ ತಾಲೂಕು ಅಧ್ಯಕ್ಷ ಜಯರಾಮ್, ಮುಖಂಡರುಗಳಾದ ನಂಜುಂಡ ಮೈಮ್, ದಮ್ಮ ನಿಂಗಲ ರವಿ . ಕೆರೆಬೀದಿಜಗದೀಶ್, ಆನಂದ್, ಹರ್ಷವರ್ಧನ್,ಇಂಡಿಯನ್ ಕ್ರಿಕೆಟರ್ಸ್ ನವೀನ್, ಮಂಜುನಾಥ್,ಹರೀಶ್. ರೂಪೇಶ್, ಶಾಂತರಾಜ್, ರಾಮಣ್ಣ, ಚೇತನ್, ಅನಿಲ್, ಸೇರಿದಂತೆ ಇತರರು ಹಾಜರಿದ್ದರು.

ಇದನ್ನು ಓದಿ –

[…] […]