ಕೆ.ಆರ್.ಪೇಟೆ,ಜ.07: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೂಡೇಹೊಸಹಳ್ಳಿ ಗ್ರಾಮದಲ್ಲಿ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರ ಅಧ್ಯಕ್ಷತೆಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ಆಡಳಿತವು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿದ್ದ ಮಾದಾಪುರ ಗ್ರಾಮ ಪಂಚಾಯಿತಿ ಮಟ್ಟದ ಜನಸಂರ್ಕ ಸಭೆ ಹಾಗೂ ಪ್ರಜಾ ಸ್ಪಂದನಾ ಸಭೆಯಲ್ಲಿ ಸುಮಾರು 1000ಕ್ಕೂ ಫಲಾನುಭವಿಗಳಿಗೆ ಶಾಸಕರು ಸವಲತ್ತುಗಳನ್ನು ವಿತರಣೆ ಮಾಡಿದರು. ಜನರಿಂದ ಅಹವಾಲು ಸ್ವೀಕರಿಸಿ ನೂರಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ರೂಪಿಸಲಾಯಿತು.
ಕೃಷಿ ಇಲಾಖೆಯಿಂದ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಯಿತು. ಮೀನುಗಾರಿಕೆ ಇಲಾಖೆಯಿಂದ ಹರಿಗೋಲು ದೋಣಿಗಳನ್ನು ವಿತರಿಸಲಾಯಿತು. ಪಶುವೈದ್ಯ ಇಲಾಖೆಯಿಂದ ಮೇವು ಕಟಾವು ಮಾಡುವ ಯಂತ್ರಗಳನ್ನು ವಿತರಿಸಲಾಯಿತು. ಕೃಷಿ ಇಲಾಖೆಯಿಂದ ರೈತರಿಗೆ ಟ್ರಾಕ್ಟರ್ ವಿತರಣೆ ಮಾಡಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಗಂಗಾಕಲ್ಯಾಣ ಯೋಜನೆಯ ಫಲಾನುಭವಿ ರೈತರಿಗೆ ಕೊಳವೆಬಾವಿ ಮೋಟಾರ್, ಪೈಪ್ ಮತ್ತು ಇತರೆ ಪರಿಕರಗಳನ್ನು ಶಾಸಕರಾದ ಹೆಚ್.ಟಿ.ಮಂಜು ವಿತರಣೆ ಮಾಡಿದರು.ಪ್ರಮುಖವಾಗಿ ಪೌತಿ ಖಾತೆ ದಾಖಲೆ, ವಿಧವಾ ವೇತನ, ವೃದ್ದಾಪ್ಯ ಸೇರಿದಂತೆ ವಿವಿಧ ಮಾಸಾಶನಗಳ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಗೂಡೇಹೊಸಹಳ್ಳಿ ಗ್ರಾಮಕ್ಕೆ ಸೇರಿದ ಗೋಮಾಳದಲ್ಲಿ ಹಲವು ರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರಿಗೆ ಭೂ ಮಂಜೂರಾತಿ ಹಾಗೂ ದುರಸ್ತ್ ದಾಖಲೆಗಳನ್ನು ರೈತರಿಗೆ ವಿತರಣೆ ಮಾಡುವ ಸಂರ್ಭದಲ್ಲಿ ರೈತನ ಕುಟುಂಬದವರು ಹಾಜರಿದ್ದು ಶಾಸಕರಿಗೆ ಹಾಗೂ ತಹಸೀಲ್ದಾರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಮಾದಾಪುರ ಗ್ರಾಮ ಪಂಚಾಯತ್ ವತಿಯಿಂದ ಮನೆಯ ಇಸ್ವತ್ತುಗಳನ್ನು ಶಾಸಕರು ವಿತರಣೆ ಮಾಡಿದರು. ತಾಲ್ಲೂಕು ಪಂಚಾಯತ್ ವತಿಯಿಂದ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಮಾಡಲಾಯಿತು. ಗ್ರಾಮದ ಸುಪುತ್ರರು ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಯೋಗೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಗ್ರಾಮಕ್ಕೆ ಹಾಗೂ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶಾಸಕರು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ವಿವರಿಸಿ, ಹೇಮಾವತಿ ನದಿ ನೀರಿನ ಏತನೀರಾವರಿ ಸೌಲಭ್ಯ ಸೇರಿದಂತೆ ಶಾಸಕರಿಂದ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳ ಗಮನ ಸೆಳೆದರು.

ಶಾಸಕ ಹೆಚ್.ಟಿ.ಮಂಜು ಮಾತನಾಡಿ ತಾಲ್ಲೂಕಿನ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಸರ್ಕಾರದ ಕಡೆಯಿಂದ ನಿರೀಕ್ಷಿತ ಅನುಧಾನ ಸಿಗುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ 50ಕೋಟಿ ಅನುಧಾನ ನೀಡಿದರೆ ವಿರೋಧ ಪಕ್ಷಗಳ ಶಾಸಕರಿಗೆ ಕೇವಲ 10ರಿಂದ 25ಕೋಟಿ ಮಾತ್ರ ನೀಡುತ್ತಿದೆ ಇದು ಆನೆ ಹೊಟ್ಡೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಆದರೂ ಬರುವ ಅನುಧಾನದಲ್ಲಿ ತಾಲ್ಲೂಕಿನ ಜರೂರು ಅಗತ್ಯ ಇರುವ ಗ್ರಾಮಗಳಿಗೆ ಅನುಧಾನ ಹಂಚಿಕೆ ಮಾಡಿ ಅಭಿವೃದ್ದಿಗೆ ಕೈಜೋಡಿಸುತ್ತಿದ್ದೇನೆ. ಅಧಿಕಾರಿಗಳ ತಮ್ಮ ಹಂತದಲ್ಲಿ ತಾಲ್ಲೂಕಿನ ರೈತರ ಕೆಲಸಗಳನ್ನು ತ್ವರಿತವಾಗಿ ಪ್ರಾಮಾಣಿಕವಾಗಿ ಮಾಡಿಕೊಡುವ ಮೂಲಕ ಕ್ಷೇತ್ರದ ಶಾಸಕನಾದ ನನಗೆ ಹೆಸರು ತಂದು ಕೊಡಬೇಕು. ಯಾವುದೇ ಕಾರಣಕ್ಕೂ ರೈತರನ್ನು ಕಚೇರಿಗೆ ಅಲೆಸಬೇಡಿ. ಸಮಯಕ್ಕೆ ಸರಿಯಾಗಿ ರೈತರು ಮತ್ತು ಸಾರ್ವಜನಿಕರ ಕೆಲಸವನ್ನು ಮಾಡಿಕೊಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ತಹಶೀಲ್ದಾರ್ ಡಾ.ಎಸ್.ಯು.ಅಶೋಕ್, ತಾಲ್ಲೂಕು ಪಂಚಾಯತ್ ಇಓ ಸುಷ್ಮಾ, ಚನ್ನರಾಯಪಟ್ಟಣ ತಾ.ಪಂ.ಇಓ ಯೋಗೇಶ್, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣೇಗೌಡ, ಪಿಡಿಓ ಚಂದ್ರು, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಸರ್ವೆ ಇಲಾಖೆಯ ಎ.ಡಿ.ಎಲ್.ಆರ್. ಸಿದ್ದಯ್ಯ, ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಡಾ.ಮಂಜುಳ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಕೃಷಿ ಸಹಾಯಕ ನಿರ್ದೇಶಕ ಸಂತೋಷ್, ಪಶು ವೈದ್ಯಕೀಯ ಸಹಾಯಕ ನರ್ದೇಶಕ ಡಾ.ದಿವಾಕರ್, ತೋಟಗಾರಿಕೆ ಸಹಾಯಕ ನರ್ದೇಶಕ ಡಾ.ಲೋಕೇಶ್, ಮೀನುಗಾರಿಕೆ ಸಹಾಯಕ ನರ್ದೇಶಕ ಜಗದೀಶ್, ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್ಕುಮಾರ್, ತಾಲ್ಲೂಕು ಅರಣ್ಯಾಧಿಕಾರಿ ಡಾ.ಅನಿತಾ, ಸಿಡಿಪಿಓ ವಿದ್ಯಾವತಿ, ಕಿಕ್ಕೇರಿ ಹೋಬಳಿ ರಾಜಸ್ವ ನಿರೀಕ್ಷಕ ನರೇಂದ್ರ, ಗ್ರಾಮ ಲೆಕ್ಕಾಧಿಕಾರಿ ಸುನಿಲ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೂರಾರು ಮುಖಂಡರು ಗ್ರಾಮಸ್ಥರು ಸಾವಿರಾರು ಸಾರ್ವಜನಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಗೂಡೇಹೊಸಹಳ್ಳಿ ಗ್ರಾಮದ ನೂತನ ಅಂಗನವಾಡಿ ಕಟ್ಟಡ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಶಾಸಕರು ಉದ್ಘಾಟನೆ ಮಾಡಿದರು.
– ಶ್ರೀನಿವಾಸ್ ಆರ್.

[…] ಇದನ್ನು ಓದು: ಕೆ.ಆರ್.ಪೇಟೆ:ಗೂಡೇಹೊಸಹಳ್ಳಿಯಲ್ಲಿ ಜನಸ್ಪಂ… […]