ಕೊರಟಗೆರೆ :- ಕೂಲಿ ಕಾರ್ಮಿಕ ನೊರ್ವ ಕೆಲಸಕ್ಕೆಂದು ಮನೆಯಿಂದ ಹೋದವನು ತಿಂಗಳುಗಳು ಕಳೆದರೂ ಮನೆಗೆ ಬಾರದೆ ಕಣ್ಮರೆಯಾಗಿರುವ ಘಟನೆಯೂಂದು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ .
ಕೊರಟಗೆರೆ ತಾಲೂಕಿನ ಬುಡುಮಾರನಹಳ್ಳಿ ಗ್ರಾಮದ ಅಂಜಿನಪ್ಪನ ಮಗ ಸುಬ್ಬರಾಯಪ್ಪ ಎಂಬುವರು ಕೂಲಿ ಕಾರ್ಮಿಕರಾಗಿದ್ದು , ಕಳೆದ ತಿಂಗಳುಗಳ ಹಿಂದೆ ಕೂಲಿ ಕೆಲಸಕ್ಕೆ ಎಂದು ಮನೆಯಿಂದ ಹೋದವನು ಈವರೆಗೂ ಮನೆಗೆ ಬಾರದಿದ್ದು, ಸಂಬಂಧಿಕರು ಅಥವಾ ಸ್ನೇಹಿತರ ಮನೆಯಲ್ಲಿ ಇರಬಹುದು ಎಂದು ಹುಡುಕಾಡಿ ಅಂತಿಮವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ವ್ಯಕ್ತಿ ಪತ್ತೆಗಾಗಿ ಕುಟುಂಬಸ್ಥರು ಪೊಲೀಸ್ ಮರೆ ಹೋಗಿದ್ದಾರೆ.
ಸುಬ್ಬರಾಯಪ್ಪ ಮಡದಿ ಯಶೋದಮ್ಮ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನನ್ನ ಗಂಡನ ವಯಸ್ಸು 50 ವರ್ಷವಾಗಿದ್ದು, 5.5 ಅಡಿ ಎತ್ತರವಿದ್ದು ಕಪ್ಪು ಮೈಬಣ್ಣ, ಸಣಕಲು ದೇಹ, ಎಡಗೈ ಮೇಲೆ ನಾಗಮ್ಮ ಎಂದು ಅಚ್ಚೆ ಗುರುತಿದ್ದು, ತಲೆಯ ಕೂದಲು ಉದುರಿ ಅರ್ಧ ಬೋಳು ತಲೆಯಾಗಿದ್ದು, ಕಪ್ಪು ಮತ್ತು ಹಳದಿ ಬಣ್ಣದ ಟಿ-ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದು ಇಲ್ಲಿಯವರೆಗೂ ಪತ್ತೆ ಆಗಿರುವುದಿಲ್ಲ, ಇವರ ಬಗ್ಗೆ ಯಾರಿಗಾದರೂ ಮಾಹಿತಿ ದೊರಕಲ್ಲಿ ಕೊರಟಗೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಆರಕ್ಷಕ ಉಪನಿರೀಕ್ಷಕರು 9480802988 ಪೊಲೀಸ್ ಇನ್ಸ್ಪೆಕ್ಟರ್ 9480802954 ನಂಬರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡುವುದು ಅಥವಾ ಪೋಷಕರಿಗೆ ಮಾಹಿತಿ ನೀಡುವುದು.
– ಶ್ರೀನಿವಾಸ್ ಕೊರಟಗೆರೆ.

[…] ಕೊರಟಗೆರೆಯಲ್ಲಿ ಕೂಲಿ ಕಾರ್ಮಿಕ ನಾಪತ್ತೆ –… […]