ಕೆ.ಆರ್.ಪೇಟೆ: ದಿನದಿಂದ ದಿನಕ್ಕೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಮಾಜಿಕ ಸ್ವಾಸ್ಥ್ಯಕಾಪಾಡುವಲ್ಲಿ ಶಿಕ್ಷಕರು ಮತ್ತು ಪತ್ರಕರ್ತರ ಪಾತ್ರ ಬಹಳಷ್ಟು ದೊಡ್ಡದಿದೆ ಎಂದು ಸಮಾಜ ಸೇವಕರಾದ ಆರ್ ಟಿ ಓ ಮಲ್ಲಿಕಾರ್ಜುನ್ ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ರಾಜ್ಯ ಪ್ರಶಸ್ತಿಗೆ ಕೆ.ಆರ್.ಪೇಟೆ ತಾಲೂಕಿನ ಹಿರಿಯ ಪತ್ರಕರ್ತರಾದ ಕೆ.ಆರ್.ನೀಲಕಂಠ ಅವರಿಗೆ ಭಾಜನರಾದ ಹಿನ್ನೆಲೆ.
ಪಟ್ಟಣದಲ್ಲಿರುವ ಜಯನಗರ ಬಡಾವಣೆಯಲ್ಲಿರುವ ತಮ್ಮ ಕಚೇರಿಯಲ್ಲಿ ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಿರಿಯ ಪತ್ರಕರ್ತ ಕೆ.ಆರ್ ಡಾ.ನೀಲಕಂಠ ರವರಿಗೆ ಹಾಗೂ ಉತ್ತಮ ಫಲಿತಾಂಶ ನೀಡಿದ ಗವಿಮಠ ಮುರಾರ್ಜಿ ವಸತಿ ಶಾಲಾ ಕುಪ್ಪಹಳ್ಳಿ ಪ್ರಸನ್ನ ಅವರನ್ನ ಅಭಿನಂದಿಸಿ ಮಾತನಾಡಿದರು.ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರವು ಸಹ ಮಹತ್ವದ್ದಾಗಿದೆ. ಜನರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪತ್ರಕರ್ತರು ಸಮಾಜಮುಖಿಯಾಗಿ ಯೋಚಿಸಬೇಕು ಹಾಗೂ ಕರ್ತವ್ಯ ನಿರ್ವಹಿಸಿದಾಗ ಇಂತಹ ಗೌರವಾನ್ವಿತ ಪ್ರಶಸ್ತಿಗಳು ಲಭಿಸಲು ಸಾಧ್ಯ.

ಹಿರಿಯ ಪತ್ರಕರ್ತ ಕೆ.ಆರ್ ನೀಲಕಂಠ ರವರು 30 ವರ್ಷದ ತಮ್ಮ ಸುದೀರ್ಘ ಪತ್ರಿಕಾ ಜೀವನದಲ್ಲಿ ಹಲವು ಗೆಲುವು ಮತ್ತು ಸೋಲುಗಳನ್ನು ಅನುಭವಿಸಿದ್ದಾರೆ ತಮಗೆ ಎಷ್ಟೇ ಹಿರಿತನವನ್ನು ಮರೆತು ಹಿರಿಯ ಪತ್ರಕರ್ತರಿಗೆ ಮಾರ್ಗದರ್ಶನ ತೋರುತ್ತ ಅವರ ಜೊತೆಯಲ್ಲೇ ಉಳಿದ ಹಿರಿಯ ಪತ್ರಕರ್ತರು ಕೂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಇಂದಿಗೂ ನಮ್ಮ ನಡುವೆ ಇದ್ದಾರೆ. ಪತ್ರಕರ್ತರ ಪರಿಸ್ಥಿತಿ ಕಠಿಣವಾಗಿದ್ದರೂ ಪ್ರಾಮಾಣಿಕವಾಗಿ ವರದಿಗಾರಿಕೆ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರವು ಪತ್ರಕರ್ತರ ಹಿತವನ್ನು ಗಮನದಲ್ಲಿಸಿಕೊಂಡು ಅವರಿಗಾಗಿಯೇ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ತಾಲ್ಲೂಕು ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅನೇಕ ಪತ್ರಕರ್ತರಿಗೆ ವೃತ್ತಿ ಬುನಾದಿಯನ್ನು ನೀಡಿವೆ ಎಂದ ಅವರು ಉತ್ತಮ ಸಮಾಜ ಹಾಗೂ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಕರಿಗೆ ಸಮಾಜದಲ್ಲಿ ಬಹಳ ಗೌರವದ ಸ್ಥಾನವಿದ್ದು, ಶಿಕ್ಷಕರು ನಿರ್ವಹಿಸುವ ಕಾರ್ಯ ಅನನ್ಯವಾಗಿದೆ ಅ ನಿಟ್ಟಿನಲ್ಲಿ ಪ್ರಾಂಶುಪಾಲ ಪ್ರಸನ್ನ ಅವರು ಕೂಡ ಪ್ರಥಮ ಸ್ಥಾನದಲ್ಲಿ ಇದ್ದಾರೆ ಹಾಗಾಗಿ ಇವರಿಬ್ಬರಿಗೂ ಸ್ವಾಮಿ ವಿವೇಕಾನಂದ ಜಯಂತಿ ದಿನದೊಂದು ಗೌರವಿಸುವ ಕರ್ತವ್ಯ ನಮ್ಮದಾಗಿದೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ:ಕೆ.ಆರ್ ನೀಲಕಂಠ ಹಿಂದುಳಿದ ಪತ್ರಕರ್ತರು ಹಾಗೂ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಹೀಗೆ ವಿವಿಧ ಹುದ್ದೆಗಳನ್ನು ವಹಿಸಿಕೊಂಡು ಸಂಘಟನಾತ್ಮಕ ಕಾರ್ಯಗಳನ್ನು ವಿವಿಧ ಸವಾಲುಗಳ ಮಧ್ಯೆ ಹತ್ತಾರು ವರ್ಷಗಳ ಕಾಲ ನಿರ್ವಹಿಸಿರುವುದು ತೃಪ್ತಿ ಕೊಟ್ಟಿದೆ. ಮಾಧ್ಯಮ ಅಕಾಡೆಮಿಯ ಸೇವೆಗೂ ನಮ್ಮ ಹಿರಿಯ ಪತ್ರಕರ್ತರು ಕಾರಣ. ನನ್ನ ಸೇವೆ ಗುರುತಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ರಾಜ್ಯ ಪ್ರಶಸ್ತಿ ಸೇರಿದಂತೆ ಸರ್ಕಾರದ ವಿವಿಧ ಉನ್ನತ ಸ್ಥಾನಮಾನಗಳು ತನ್ನನ್ನು ಹುಡುಕಿಕೊಂಡು ಬಂದಿವೆ ಎಂದು ಅಭಿಪ್ರಾಯಪಟ್ಟರು.

ಭಾರತ ಆಧ್ಯಾತ್ಮಿಕತೆಯ ಮೇರು ಪರ್ವತ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಮಹನೀಯರಾದ ಸ್ವಾಮಿ ವಿವೇಕಾನಂದ ಅವರ ಭಾವ ಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿದರು.ಬಳಿಕ ತೇಗನಹಳ್ಳಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಸಂಸ್ಥೆ ಏರ್ಪಡಿಸಿದ್ದ ಉಚಿತ ಕಣ್ಣಿನ ಶಿಬಿರದಲ್ಲಿ ಪಾಲ್ಗೊಂಡು ಶಾಸ್ತ್ರಚಿಕಿತ್ಸೆಗೆ ಪಡೆದುಕೊಂಡ ರೋಗಿಗಳಿಗೆ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಕನ್ನಡಕ ವಿತರಿಸಿ ಕಿಕ್ಕೇರಿ ಕುರುಹೀನ ಸಮುದಾಯ ಭವನಕ್ಕೆ 50.ರೂ ಸಾವಿರ ಚೆಕ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಕಾಳೇಗೌಡ,ಕಸಾಪ ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಶ್ರೀ ಧರ್ಮಸ್ಥಳ ಯೋಜನೆಯ ಚನ್ನರಾಯಪಟ್ಟಣ ಜಿಲ್ಲಾ ನಿರ್ದೇಶಕ ಡಾ ಯೋಗೇಶ್,ಜನ ಜಾಗೃತಿ ಜಿಲ್ಲಾ ಉಪಾಧ್ಯಕ್ಷೆ ನಳಿನಿ,ನಿರ್ದೇಶಕರಾದ ಕೆ.ಆರ್ ರಾಜೇಶ್,ಸುನಿತಾ, ಮೊಟ್ಟೆ ಮಂಜುನಾಥ್,ಶಿವರಾಜ್, ಡಿ.ಸಿ ಕುಮಾರ್,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ಉದ್ಯಮಿ ಗ್ಯಾಸ್ ರಾಜಶೇಖರ್,ಹಿರಿಯ ಪತ್ರಕರ್ತ ಬಳ್ಳೆಕೆರೆ ಮಂಜುನಾಥ್,ಕಸಾಪ ಮಾಜಿ ಅಧ್ಯಕ್ಷ ಹರಿಚರಣ್ ತಿಲಕ್,ಕೆ ಆರ್ ಪೇಟೆ ಕಾರ್ಯನಿರತ ಪತ್ರಕರ್ತ ಸಂಘದ ತಾಲ್ಲೂಕು ಅಧ್ಯಕ್ಷ ಅರುಣ್ ಕುಮಾರ್, ಆರ್.ಎಸ್.ಎಸ್ ಮಂಜುನಾಥ್,ಪ್ರಾಂಶುಪಾಲ ಪ್ರಸನ್ನ, ಶ್ರೀ ಧರ್ಮಸ್ಥಳ ಸಂಸ್ಥೆಯ ಯೋಜನಾ ಅಧಿಕಾರಿಗಳಾದ ತಿಲಕ್ ರಾಜ್, ಕಿಕ್ಕೇರಿ ಯೋಗೇಶ್, ನಿವೃತ್ತ ಪೊಲೀಸ್ ಅಧಿಕಾರಿ ಶಂಕರಲಿಂಗೇಗೌಡ, ಮುಖಂಡರಾದ ಕೋಮನಹಳ್ಳಿ ಮಂಜುನಾಥ್, ಸಾಧುಗೋನಹಳ್ಳಿ ಕೋಳಿ ಮಂಜು,ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಶ್ರೀ ಧರ್ಮಸ್ಥಳ ಸಂಸ್ಥೆಯ ಮೇಲ್ವಿಚಾರಕಿ ಗುಣಶ್ರೀ, ಸೇವಾಪ್ರತಿನಿಧಿ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
