ಚನ್ನರಾಯಪಟ್ಟಣ: ಕಾಂತರಾಜಪುರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸವಿತಾ ಪುರುಷೋತ್ತಮ್ ಅವಿರೋಧವಾಗಿ ಆಯ್ಕೆಗೊಂಡರು. ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಕಾಂತರಾಜಪುರ ಗ್ರಾಮ ಪಂಚಾಯಿತಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ದಿನ ಚುನಾವಣೆ ಪ್ರಕ್ರಿಯೆ ನಡೆಯಿತು.
ಚುನಾವಣಾ ಅಧಿಕಾರಿಗಳಾಗಿ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳಾದ ಜಿ ಆರ್ ಹರೀಶ್ ಅವರು ಕಾರ್ಯನಿರ್ವಹಿಸಿದರು. ಈ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಸವಿತಾ ರವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಉತ್ತೇನಹಳ್ಳಿ ಗ್ರಾಮದ ಶ್ರೀಮತಿ ಸವಿತಾ ಪುರುಷೋತ್ತಮ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಶಾಸಕರಾದ ಸಿಎನ್ ಬಾಲಕೃಷ್ಣ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ ಶ್ರೀಮತಿ ಸವಿತಾ ಪುರುಷೋತ್ತಮ್ ರವರು ಕಾಂತರಾಜಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ ಇವರಿಗೆ ನಾನು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.ನೂತನ ಅಧ್ಯಕ್ಷರು ಉತ್ತಮ ಸೇವೆಯನ್ನು ಸಾರ್ವಜನಿಕ ನೀಡಲಿ ಎಂದು ಶುಭ ಹಾರೈಸಿದರು.

ಉತ್ತೇನಹಳ್ಳಿ ಗ್ರಾಮದ ಹಿರಿಯ ಮುಖಂಡರಾದ ರಾಜಪ್ಪ ಮಾತನಾಡಿ ಕಾಂತರಾಜ್ ಪುರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ನಮ್ಮ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಮತಿ ಸವಿತಾ ಪುರುಷೋತ್ತಮ ರವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು. ನೂತನ ಅಧ್ಯಕ್ಷರಿಗೆ ಸಿಕ್ಕಿರುವ ಅತಿ ಕಡಿಮೆ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಸಿಎನ್ ಬಾಲಕೃಷ್ಣ, ಇ ಓ ಹರೀಶ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸುಮನ್, ಅಧ್ಯಕ್ಷರಾದ ಶ್ರೀಮತಿ ಸವಿತಾ ಪುರುಷೋತ್ತಮ್, ಉಪಾಧ್ಯಕ್ಷರಾದ ಶ್ರೀಮತಿ ಮಮತಾರಾಣಿ ಸ್ವಾಮಿ, ಉತ್ತೇನಹಳ್ಳಿ ರಾಜಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಉತ್ತೇನಹಳ್ಳಿ ಶರತ್, ಕಾಂತರಾಜಪುರ ಕಾರ್ತಿಕ್, ಶ್ರೀಮತಿ ಅಮೃತ ಶಿಲ್ಪ ಶಿವರಾಜ, ಬರಾಳುಮಹೇಂದ್ರ, ವಿ ಜಿ ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯರುಗಳಾದ ಸುಗ್ಗನಹಳ್ಳಿ ಮಹೇಶ, ರತ್ನಮ್ಮ ದೇವರಾಜು, ಭಾಗ್ಯಮ್ಮ ರಾಮೇಗೌಡ, ಚಂದ್ರಶೇಖರ್, ಪ್ರಮೀಳಾ ನಾಗರಾಜು, ಜೆಡಿಎಸ್ ಮುಖಂಡರುಗಳಾದ ಚಿಕ್ಕಬಿಳ್ತಿ ಪ್ರವೀಣ್, ಗಂಗಾಧರ್, ಸಿಂಹಾದ್ರಿಮಂಜಣ್ಣ,ರಂಗಣ್ಣ, ದೇವರಾಜು, ಕೆ ಎಂ ಶಿವರಾಜು ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
