ಕೊರಟಗೆರೆ:- ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ಕಾರ್ಡಿಯಲ್ ಸ್ಕೂಲ್ನಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಚಿಣ್ಣರ ಸಂಭ್ರಮವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಯಿತ್ತು. ಶಾಲೆಯ ಅಧ್ಯಕ್ಷ ಇಸ್ಮಾಯಿಲ್, ಜಬೀವೂಲ್ಲಾ ಮಾತನಾಡಿ ನಮ್ಮ ಶಾಲೆಯಲ್ಲಿ ಪ್ರತಿವರ್ಷ ಸಂಕ್ರಾಂತಿ ಹಬ್ಬದ ದಿನದೊಂದು ವಿಶೇಷವಾಗಿ ಮಕ್ಕಳಿಗೆ ನಮ್ಮ ಗ್ರಾಮೀಣ ಸೋಗಡನ್ನ ಪರಿಚಯಿಸುವ ಸಲುವಾಗಿ ಮಕ್ಕಳಿಗೆ ಹಬ್ಬದ ವಾತವರಣವನ್ನ ನಮ್ಮ ಶಾಲೆಯಲ್ಲಿ ಕಲ್ಪಿಸಲಾಗುತ್ತದೆ. ಪ್ರತಿಯೊಬ್ಬರು ವಿಶೇಷ ಉಡುಗೆ ತೊಟ್ಟು ಸಂಕ್ರಾಂತಿ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ ಎಂದರು.

ಶಾಲೆಯ ಮುಖ್ಯಶಿಕ್ಷಕಿ ಮಂಜುಮ್ಮ ಮಾತನಾಡಿ ನಮ್ಮ ಕಾರ್ಡಿಯಲ್ ಸ್ಕೂಲ್ನಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಚಿಣ್ಣರ ಸಂಭ್ರಮ ಎಂದು ಸಂಕ್ರಾಂತಿ ಹಬ್ಬವನ್ನ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರು ಜೊತೆಗೂಡಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಇತ್ತೀಚಿಗೆ ಹಬ್ಬಗಳ ಸಡಗರ ಕಾಣೆಯಾಗುತ್ತಿದ್ದು, ಅದನ್ನ ಮತ್ತೆ ಮಕ್ಕಳಿಗೆ ತಿಳಿಸುವ ಸಲುವಾಗಿ ಸಂಕ್ರಾಂತಿ ಹಬ್ಬಕ್ಕೆ ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳನ್ನ ಕಟಾವು ಮಾಡಿದ ದವಸ ಧಾನ್ಯಗಳನ್ನ ತಮ್ಮ ಹೊಲದಲ್ಲಿ ಮಾಡಿದ ಕಣದಲ್ಲಿ ಇಟ್ಟು ಪೂಜೆ ಮಾಡುವ ರೀತಿ ನಾವು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ತೋರಿಸಿಕೊಟ್ಟಿದ್ದೇವೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿ ರೀಟಾ, ಅಶೀಯಾ ಸಹೀದಾ ಬಾನು, ಇಂದಿರ, ಆಶ್ವಿನಿ, ಅನಿತಾ ಸೇರಿದಂತೆ ಇತರರು ಇದ್ದರು.
-ಶ್ರೀನಿವಾಸ್ ಕೊರಟಗೆರೆ.
