Oplus_16908288
ಡೊಡಾ: ಜಮ್ಮು-ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಒಂದು ಭಯಾನಕ ಘಟನೆ ಸಂಭವಿಸಿದೆ. 17 ಸವಾರರು ಸಂಚರಿಸುತ್ತಿದ್ದ ಸೇನಾ ವಾಹನವೊಂದು ಬೃಹತ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 10 ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.ಘಟನೆಯಲ್ಲಿ 10 ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಸೈನಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಎಸ್ಕೆ ಪಯೆನ್ ಪ್ರದೇಶದ ಬಳಿ ಮಧ್ಯಾಹ್ನ 2.30 ರ ಸುಮಾರಿಗೆ ಸಂಭವಿಸಿದ ಈ ದುರಂತಕ್ಕೆ ರಸ್ತೆ ಹದಗೆಟ್ಟಿರುವುದು ಮತ್ತು ಕೆಟ್ಟ ಹವಾಮಾನ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನೆ, ‘ಪ್ರತಿಕೂಲ ಹವಾಮಾನ ಮತ್ತು ಕಳಪೆ ಗೋಚರತೆಯ ಪರಿಸ್ಥಿತಿಯಿಂದಾಗಿ ಭಾರತೀಯ ಸೇನೆಯ ವಾಹನವೊಂದು ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿದೆ. ಗಾಯಗೊಂಡ ಸೈನಿಕರನ್ನು ಕಾಶ್ಮೀರಿ ಸ್ಥಳೀಯರ ಸಹಾಯದಿಂದ ವೈದ್ಯಕೀಯ ಆರೈಕೆಗಾಗಿ ತಕ್ಷಣವೇ ಸ್ಥಳಾಂತರಿಸಲಾಯಿತು, ಇದಕ್ಕಾಗಿ ತಕ್ಷಣದ ಸಹಾಯವನ್ನು ನೀಡಿದ ನಾಗರಿಕರಿಗೆ ನಾವು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ’ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
‘ದುರದೃಷ್ಟವಶಾತ್, ಈ ಭಯಾನಕ ಅಪಘಾತದಲ್ಲಿ ಮೂವರು ಧೈರ್ಯಶಾಲಿಗಳು ಪ್ರಾಣ ಕಳೆದುಕೊಂಡರು. ಭಾರತೀಯ ಸೇನೆಯು ಮೃತರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸುತ್ತಿದೆ’ ಎಂದು ಸೇನೆ ತಿಳಿಸಿದೆ. ಕೆಲವು ಗಂಟೆಗಳ ನಂತರ, ಮತ್ತೊಬ್ಬ ಸೈನಿಕ ತೀವ್ರ ಗಾಯಗಳಿಂದ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು ಎಂದು ಸೇನೆಯ ಚಿನಾರ್ ಕಾರ್ಪ್ಸ್ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಭಾರತೀಯ ಸೇನೆಯ ಕ್ಯಾಸ್ಪರ್ (ಕ್ಯಾಸ್ಪರ್ ಬುಲೆಟ್ಪ್ರೂಫ್ ವಾಹನ) ರಸ್ತೆಯಿಂದ ಜಾರಿ ಸುಮಾರು 200 ಅಡಿ ಆಳದ ಕಂದಕಕ್ಕೆ ಖಾಯಿಗೆ ಬಿದ್ದಿದೆ. ಈ ದುರಂತದಲ್ಲಿ 10 ಜವಾನರು ಸಾವನ್ನಪ್ಪಿದ್ದಾರೆ ಮತ್ತು 7 ಇತರ ಜವಾನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕ್ಯಾಸ್ಪರ್ ವಾಹನವು ಡೋಡಾದ ಭದ್ರವಾಹ್-ಚಂಬಾ ಅಂತರರಾಜ್ಯ ರಸ್ತೆಯಲ್ಲಿ (ಖನ್ನಿ ಟಾಪ್ ಬಳಿ) ಚಲಿಸುತ್ತಿತ್ತು. ರಸ್ತೆಯ ಸ್ಥಿತಿ ಈಗಾಗಲೇ ಹದಗೆಟ್ಟಿದ್ದರಿಂದ ವಾಹನದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಹನದಲ್ಲಿ ಒಟ್ಟು 17 ಸೈನಿಕರು ಇದ್ದರು
ಘಟನಾ ಸ್ಥಳದಲ್ಲಿ ಸೇನೆ ಮತ್ತು ಪೊಲೀಸ್ ತಂಡಗಳು ಸಂಯುಕ್ತವಾಗಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಗಾಯಾಳುಗಳನ್ನು ತಕ್ಷಣವೇ ಭದ್ರವಾಹ್ನ ಸಮೀಪದ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಗಂಭೀರ ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಉಧಂಪುರದ ಸೇನಾ ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ.
