ಬೆಂಗಳೂರು, ಜನವರಿ 22, 2026: ಇತ್ತೀಚಿನ ದಿನಗಳಲ್ಲಿ ಫಾರ್ಮಸಿ ಕ್ಷೇತ್ರದಲ್ಲಿ ಫೇಕ್ ಔಷಧಿಗಳ (Fake Medicines) ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಆರೋಗ್ಯ ಇಲಾಖೆ ಹೊಸ ಯೋಜನೆ ಘೋಷಿಸಿದೆ. ಇದರಿಂದ ರೋಗಿಗಳು ಔಷಧಿಗಳನ್ನು ಸುರಕ್ಷಿತವಾಗಿ ಬಳಸಲು ಸಾಧ್ಯವಾಗಲಿದೆ ಮತ್ತು ನಕಲಿ ಔಷಧಿಗಳ ವ್ಯಾಪ್ತಿಗೆ ಕಡಿವಾಣ ಹೇರಲಾಗುವುದು.
ಪ್ರಮುಖ ತಿದ್ದುಪಡಿ
-
ಪ್ರತಿ ಔಷಧದ ಪ್ಯಾಕ್ ಮೇಲೆ ಬಾರ್ ಕೋಡ್ ಮತ್ತು ಕ್ಯೂಆರ್ (QR) ಕೋಡ್ ಮುದ್ರಣ.
-
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ:
- ಬ್ಯಾಚ್ ನಂಬರ್
- ತಯಾರಿಕೆಯ ದಿನಾಂಕ
- ಉತ್ಪಾದಕ ಕಂಪನಿ ಮಾಹಿತಿ
- ಬಳಕೆಯ ವಸ್ತುಗಳು ಮತ್ತು ಪ್ರಮಾಣ
- ಎಕ್ಸ್ಪೈರಿ ಡೇಟ್
- ಉಪಯೋಗಗಳು ಮತ್ತು ಸೈಡ್ ಎಫೆಕ್ಟ್ಗಳ ಮಾಹಿತಿಯನ್ನು ಪಡೆಯಬಹುದು.
- ಫಾರ್ಮಾ ಕ್ಷೇತ್ರದಲ್ಲಿ ಕೋಡಿಂಗ್ ವ್ಯವಸ್ಥೆ
ಆರೋಗ್ಯ ಇಲಾಖೆ ಪ್ರಾರಂಭ ಹಂತದಲ್ಲಿ ಈ ವ್ಯವಸ್ಥೆಯನ್ನು ಕೆಲವು ಔಷಧಗಳಿಗಾಗಿ ಜಾರಿಗೆ ತರಲಿದೆ. ನಂತರ ಇಡೀ ಫಾರ್ಮಾ ಕ್ಷೇತ್ರಕ್ಕೆ ಕ್ಯೂಆರ್ ಕೋಡ್ ಮತ್ತು ಬಾರ್ ಕೋಡ್ ಆಧಾರಿತ ಕೋಡಿಂಗ್ ವ್ಯವಸ್ಥೆ ಅನ್ವಯಿಸಲಾಗುವುದು. ಇದರ ಮೂಲಕ ಪ್ರತಿಯೊಬ್ಬರು ಸುಲಭವಾಗಿ ಔಷಧ ಉತ್ಪಾದಕ ಕಂಪನಿಯ ವಿವರಗಳನ್ನು ಪಡೆದುಕೊಳ್ಳಬಹುದು.
ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಯಿಂದ ಈ ಯೋಜನೆಯ ಪ್ರಗತಿ ಮತ್ತು ಅನುಷ್ಠಾನ ಕುರಿತು ಮಾಹಿತಿ ಸಂಗ್ರಹಿಸುವುದಕ್ಕೆ ಸೂಚನೆ ನೀಡಿದೆ.
ಈ ಹೊಸ ನಿಯಮಗಳೊಂದಿಗೆ, ರೋಗಿಗಳು ತಮ್ಮ ಔಷಧಗಳ ಕುರಿತು ಸಂಪೂರ್ಣ ಮಾಹಿತಿ ಪಡೆದು ಸುರಕ್ಷಿತ ಬಳಕೆ ಮಾಡಬಹುದು, ಹಾಗೂ ನಕಲಿ ಔಷಧಿಗಳ ವ್ಯಾಪ್ತಿಗೆ ಸೂಕ್ತ ತಡೆಹಿಡಿಯಲಾಗುವುದು ಎಂದು ಇಲಾಖೆ ತಿಳಿಸಿದೆ.
ನಿರೀಕ್ಷೆ:-
ನಕಲಿ ಔಷಧಿಗಳನ್ನು ಪತ್ತೆಹಚ್ಚಲು ಮತ್ತು ಅವುಗಳ ಬಳಕೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆಯ ಈ ನವೀನ ಯೋಜನೆ ಫಾರ್ಮಾ ಕ್ಷೇತ್ರದಲ್ಲಿ ಸ್ವಚ್ಛತೆ, ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದರಲ್ಲಿ ಮಹತ್ವದ ಹೆಜ್ಜೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
