ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಚಿಕ್ಕೋಸಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 77ನೇ ಭಾರತ ಗಣ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪುಷ್ಪಲತಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು-ಹಾಲಿ ಸದಸ್ಯರಾದ ಕುಮಾರಗೌಡ ಅವರು ಧ್ವಜಾರೋಹಣ ನೆರವೇರಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಸುಧಾಮಣಿ ಪ್ರಾಸ್ತಾವಿಕ ನುಡಿಗಳನ್ನಾಡಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು- ಹಾಲಿ ನಿರ್ದೇಶಕರಾದ ಚಿಕ್ಕೋಸಹಳ್ಳಿ ಸುರೇಶ್ ಅವರು ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ಕೊಡುಗೆಯಾಗಿ ವಿತರಿಸಿದರು.
ಗ್ರಾಮದ ಮುಖಂಡರಾದ
ನಾಗೇಶ್ ಗೌಡ
ರವಿ ಕೋಟೇಗೌಡ
ಸುರೇಶ್ ಗೌಡ
ಎಸ್.ಡಿ.ಎಂ.ಸಿ ಸದಸ್ಯರಾದ ಮಧು, ಲಕ್ಷ್ಮೀದೇವಿ, ಅನಿತಾ, ಶಂಕರ್, ಮಂಜು,
ಗ್ರಾಮಸ್ಥರಾದ
ಮಂಜೇಗೌಡ, ಶೇಖರ್ ಪಾಪಣ್ಣ, ವೆಂಕಟೇಶ್ ಜಯರಾಮು, ರಾಮಕೃಷ್ಣೇಗೌಡ, ಸಹ ಶಿಕ್ಷಕ ದೇವರಾಜೇಗೌಡ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಶಾಲೆಯ ವತಿಯಿಂದ ಗ್ರಾಮದ ಮುಖಂಡರಿಗೆ ಸನ್ಮಾನಿಸಿ ಗೌರವಿಸಲಾಯಿತು.
– ಶ್ರೀನಿವಾಸ್ ಆರ್.
