ತೂತುಕುಡಿ (ತಮಿಳುನಾಡು): ತಮಿಳುನಾಡು ಅರಣ್ಯ ಇಲಾಖೆಯು ತೂತುಕುಡಿ ಜಿಲ್ಲೆಯ ಥೇರಿ ಕಾಡುಗಳಲ್ಲಿ ಅಪರೂಪದ ಸಸ್ತನಿಯಾದ ಮದ್ರಾಸ್ ಹೆಡ್ಜ್ಹಾಗ್ (Madras Hedgehog) ಕುರಿತು ಮೊದಲ ಬಾರಿಗೆ ವಿಶೇಷ ಅಧ್ಯಯನವನ್ನು ಆರಂಭಿಸಿದೆ. ಈ ಸಮೀಕ್ಷೆಯು ಮದ್ರಾಸ್ ಹೆಡ್ಜ್ಹಾಗ್ಗಳ ಸಂಖ್ಯೆ, ಅವುಗಳ ಆವಾಸಸ್ಥಾನ ಹಾಗೂ ಎದುರಿಸುತ್ತಿರುವ ಬೆದರಿಕೆಗಳ ಕುರಿತು ವೈಜ್ಞಾನಿಕ ಮಾಹಿತಿ ಸಂಗ್ರಹಿಸುವ ಉದ್ದೇಶ ಹೊಂದಿದೆ.
ಸ್ಥಳೀಯವಾಗಿ ತಮಿಳಿನಲ್ಲಿ ‘ಮುಲ್ ಎಲಿ’ (Mull Eli) ಎಂದು ಕರೆಯಲಾಗುವ ಈ ಪ್ರಾಣಿ, ದಕ್ಷಿಣ ಭಾರತದ ಶುಷ್ಕ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಪ್ರಭೇದವಾಗಿದೆ. ರಾತ್ರಿವೇಳೆ ಸಂಚರಿಸುವ (Nocturnal) ಸ್ವಭಾವ ಹೊಂದಿರುವ ಮದ್ರಾಸ್ ಹೆಡ್ಜ್ಹಾಗ್ಗಳು 1851ರಲ್ಲಿ ಪತ್ತೆಯಾಗಿದ್ದು, ‘ಬರಿ ಹೊಟ್ಟೆಯ ಮುಳ್ಳುಹಂದಿ’ ಎಂಬ ಹೆಸರಿನಿಂದಲೂ ಪರಿಚಿತವಾಗಿವೆ.
ಇತ್ತೀಚಿನ ವರ್ಷಗಳಲ್ಲಿ ನಗರೀಕರಣ, ಕೃಷಿ ವಿಸ್ತರಣೆ ಹಾಗೂ ಆವಾಸಸ್ಥಾನದ ನಾಶದಿಂದಾಗಿ ಈ ಪ್ರಭೇದದ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ದೊರೆತಿದೆ. ಸಮೀಕ್ಷೆಯಿಂದ ಲಭಿಸುವ ಮಾಹಿತಿ ಭವಿಷ್ಯದಲ್ಲಿ ಸಂರಕ್ಷಣಾ ಕ್ರಮಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಪ್ರಪಂಚದಾದ್ಯಂತ ಸುಮಾರು 17 ಜಾತಿಯ ಮುಳ್ಳುಹಂದಿಗಳಲ್ಲಿ, ಭಾರತವು ಮೂರು ಜಾತಿಗಳಿಗೆ ನೆಲೆಯಾಗಿದೆ. ಅವುಗಳಲ್ಲಿ
• ಭಾರತೀಯ ಉದ್ದ ಕಿವಿಯ ಅಥವಾ ಕಾಲರ್ ಮುಳ್ಳುಹಂದಿ
• ಭಾರತೀಯ ಮುಳ್ಳುಹಂದಿ
• ಮದ್ರಾಸ್ ಹೆಡ್ಜ್ಹಾಗ್
