ಕೊರಟಗೆರೆ:- ಪ್ರಜಾಪ್ರಭುತ್ವದ ನಾಲ್ಕು ಪಿಲ್ಲರ್ ಸರಿ ಇದ್ದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಎಲೆರಾಂಪುರ ಮಠದ ಪೀಠಾದ್ಯಕ್ಷ ಶ್ರೀಗಳಾದ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಗ ಮಹಾಸಂಸ್ಥಾನ ಮಠದಲ್ಲಿ ಕೊರಟಗೆರೆ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ದೇಶದಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ, ಹಾಗೂ ಪತ್ರಿಕಾ ರಂಗ ಸರಿ ಇದ್ದಾಗ ಮಾತ್ರ ಈ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಪತ್ರಿಕಾ ರಂಗದಲ್ಲಿ ಪ್ರಸ್ತುತವಾಗಿ ಕೈಲ್ಲಿ ಒಂದು ಮೋಬೈಲ್ ಇದ್ದರೆ ಸಾಕು ನಾನು ಪತ್ರಕರ್ತ ಎನ್ನವ ಮನಸ್ಥಿತಿಗೆ ಬಂದಿದ್ದಾರೆ. ನಿಜವಾದ ಸಾಮಾಜಿಕ ಕಳಕಳಿ ಇರುವ ಬರಹಗಾರರು ಹಾಗೂ ಪತ್ರಿಕೆಯಲ್ಲಿ ನೈಜ್ಯತೆ ತಿಳಿಸುವ ಪತ್ರಕರ್ತರು ಮರೆಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಎನ್.ಮೂರ್ತಿ ಮಾತನಾಡಿ, ಪತ್ರಕರ್ತರು ಎಂದರೆ ಸಮಾಜದಲ್ಲಿನ ಅಂಕುಡೊಂಕುಗಳನ್ನ ತಮ್ಮ ಬರಹದ ಮೂಲಕ ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳ ಕಣ್ಣು ತೆರೆಸುವಂತಹ ಕೆಲಸವನ್ನ ಮಾಡಬೇಕು. ಇತ್ತೀಚಿಗೆ ಕೈಯಲ್ಲಿ ಮೋಬೈಲ್ ಇಟ್ಟುಕೊಂಡು ನಾನು ಪತ್ರಕರ್ತ ಎಂದು ತಿರುಗಾಡುತ್ತಿದ್ದಾರೆ. ಆದರೆ ನಮ್ಮ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಬೆಳಿಗ್ಗೆ 5 ಗಂಟೆಗೆ ಎದ್ದು ಪತ್ರಿಕೆಯನ್ನ ಓದುಗರ ಮನೆ ಬಾಗಲಿಗೆ ಹಾಕಿ, ಅವನು ಬರೆದಂತ ಸುದ್ದಿಯನ್ನ ಒಂದಿಷ್ಟು ಜನ ಓದಿ ಅದರಿಂದ ಬದಲಾವಣೆ ಆದರೆ ಅವಾಗ ಸಮಾಜ ಬದಲಾವಣೆಯಾಗಲು ಸಾಧ್ಯ. ಎಲೆರಾಂಪುರ ಶ್ರೀ ಮಠದ ಸ್ವಾಮೀಜಿಗಳು ನಮ್ಮ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಷಯ ನಾವು ಕೂಡ ಶ್ರೀಮಠದ ಜೊತೆ ಸದಾ ಇರುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ಕಾರ್ಯದರ್ಶಿ ರಂಗಧಾಮಯ್ಯ ಮಾತನಾಡಿ ಕೊರಟಗೆರೆ ತಾಲೂಕಿನ ಎರಡು ಮಠಗಳ ಸ್ವಾಮೀಜಿ ಅವರು ನಮ್ಮ ಭಾಗದ ನಡೆದಾಡುವ ದೇವರು ಇದ್ದಂತೆ. ಸಾಮಾಜಿಕ ಹಾಗೂ ಧಾರ್ಮೀಕ ಸೇವೆಯಲ್ಲಿ ಇವರು ಮುಂದೆ ನಿಲ್ಲುತ್ತಾರೆ. ಸಮಾಜವನ್ನ ಬದಲಾವಣೆಯಾಗಬೇಕಾದರೆ ಮಠ ಮಾನ್ಯಗಳ ಸಹಕಾರ ಮುಖ್ಯ. ಪ್ರತಿವರ್ಷವೂ ಕೂಡ ಎಲೆರಾಂಪುರ ಶ್ರೀಮಠದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಸ್ವಾಮೀಜಿ ಅವರು ನಮ್ಮ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಅವರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಅದನ್ನ ನಾವು ಕೂಡ ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರಂಗಧಾಮಯ್ಯ, ತಾಲೂಕು ಸಂಘದ ಉಪಾಧ್ಯಕ್ಷ ಎಚ್.ಎನ್.ನಾಗರಾಜು, ತಿಮ್ಮರಾಜು, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ನವೀನ್ಕುಮಾರ್, ಕಾರ್ಯದರ್ಶಿ ಲಕ್ಷ್ಮೀಶ್, ನಿರ್ದೇಶಕರಾದ ಲೋಕೇಶ್, ದೇವರಾಜು, ವಿಜಯಶಂಕರ್, ನಾಗ್ರೇಂದ್ರ, ಸಿದ್ದರಾಜು, ನರಸಿಂಹಮೂರ್ತಿ, ಪತ್ರಕರ್ತ ರಮೇಶ್, ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್, ಕೊರಟಗೆರೆ.
