ಕೆ ಆರ್ ಪೇಟೆ- ತಾಲ್ಲೂಕು ಯುವ ಜನತಾದಳದ(ಜಾ) ಕಾರ್ಯದರ್ಶಿಯಾಗಿ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ ಗ್ರಾಮದ ಜೀವನ್ ಎಸ್. ಆರ್ ಗೌಡ ಅವರು ಆಯ್ಕೆಯಾಗಿದ್ದು, ನೇಮಕಾತಿ ಆದೇಶ ಪತ್ರವನ್ನು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕ ಹೆಚ್.ಟಿ.ಮಂಜು ಹಾಗೂ ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ಮಹಾದೇವೇಗೌಡ ವಿತರಿಸಿದರು. ನೂತನ ಯುವ ಜೆಡಿಎಸ್ ಕಾರ್ಯದರ್ಶಿ ಸಿಂಗನಹಳ್ಳಿ ಜೀವನ್ ಅವರಿಗೆ ಅಭಿನಂದನೆಗಳು.
– ಶ್ರೀನಿವಾಸ್ ಆರ್.
