ಚನ್ನರಾಯಪಟ್ಟಣ: ನಗರದ ಕರ್ನಾಟಕ ಬ್ಯಾಂಕ್ ಎದುರು ಇರುವ ಮುತ್ತೂಟ್ ಮಿನಿ ಫೈನಾನ್ಸ್ ಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯದ್ಯಕ್ಷರಾದ ಶ್ರೀಮತಿ ನಾಗರತ್ನಮ್ಮ ಚಿನ್ನೇನಹಳ್ಳಿ ನೇತೃತ್ವದಲ್ಲಿ ಮುತ್ತೋಟ್ ಮಿನಿ ಫೈನಾನ್ಸ್ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.
ಗ್ರಾಹಕರಿಗೆ ಮೋಸ ಮಾಡಿರುವ ರೇಖಾ, ಕಾವ್ಯ, ನಿಶ್ಚಿತ ಅವರನ್ನು ಬ್ಯಾಂಕಿಗೆ ಕರೆಸುವವರೆಗೂ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಶ್ರೀಮತಿ ನಾಗರತ್ನಮ ತಿಳಿಸಿದರು. ಶ್ರೀಮತಿ ಗೀತಾರವರು 67 ಗ್ರಾಂ ಚಿನ್ನವನ್ನು ಮುತ್ತೂಟ್ ಮಿನಿ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದರು. ಗ್ರಾಹಕರಿಗೆ ಯಾವುದೇ ನೋಟಿಸ್ ಕಳುಹಿಸದೆ ಚಿನ್ನವನ್ನು ಹರಾಜು ಮಾಡಿರುವುದಾಗಿ ಉಡಾಫೆ ಉತ್ತರವನ್ನು ನೀಡುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ನಾಗರತ್ನಮ್ಮ, ಮೋಸಕ್ಕೆ ಒಳಗಾದ ಮಹಿಳೆ ಹೌಸಿಂಗ್ ಬೋರ್ಡ್ ಶಾರದ ನಗರದ ನಿವಾಸಿ ಗೀತಾ ಹರೀಶ್, ರೈತ ಸಂಘದ ಮುಖಂಡರುಗಳಾದ ರವೀಶ್ ಅರಸಿಕೆರೆ, ಹುಲಿವಾಲ ಹರೀಶ್, ಮಂಜು ಮಾಡಬ ಟೈಲರ್ ಕುಮಾರ, ಜೋಗಿಪುರ ಮೋಹನ್, ಕುರುವಂಕ ಅಣ್ಣೇಗೌಡ, ಬಿಂಡೆನಹಳ್ಳಿ ನಟರಾಜ್, ಕೋವಿಬಾಬು, ಇತರ ರೈತ ಮುಖಂಡರು ಹಾಜರಿದ್ದರು.
– ಮಂಜುನಾಥ್ ಐ.ಕೆ
