ಟಿ.ನರಸೀಪುರ : 2028 ರ ವಿಧಾನಸಭಾ ಚುನಾವಣೆಯಲ್ಲೂ ವರಣಾ ವಿಧಾನ ಸಭಾ ಕ್ಷೇತ್ರದಿಂದ ಸಿದ್ದರಾಮಯ್ಯರವರನ್ನು ಗೆಲ್ಲಿಸಿ ಮತ್ತೊಮ್ಮಈ ರಾಜ್ಯದ ಮುಖ್ಯಮಂತ್ರಿಗಳನ್ನಾಗಿ ನೋಡಬೇಕೆಂಬುದನ್ನು ಬೈರಾಪುರ ಜನತೆ ಬಯಸುತ್ತೇವೆಂದು ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷರು ಹಾಗೂ ಗ್ರಾಮದ ಹಿರಿಯ ಮುಖಂಡರಾದ ಬಿ.ಮರಯ್ಯ ತಿಳಿಸಿದರು.
ಪಟ್ಟಣದ ಬೈರಾಪುರದಲ್ಲಿ ಅದ್ದೂರಿಯಾಗಿ ಆಚರಿಸುವ ಗ್ರಾಮದ ಶ್ರೀ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಹೋಮು,ಹವನ,ಪೂಜಾ,ಕೈಂಕರ್ಯಗಳನ್ನು ನೆರವೇರಿಸಿಕೊಡುವ ಮೂಲಕ ಅದ್ದೂರಿ ಗ್ರಾಮ ದೇವತೆ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ಬೈರಾಪುರ ಗ್ರಾಮದಲ್ಲಿರುವ ಎಂಟು ದೇವಸ್ಥಾನಗಳಿಗೆ ಸಿದ್ದರಾಮಯ್ಯರವರು ಒಂದು ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದ್ದು,ಹಬ್ಬದ ವಾತಾವರಣ ಕಳೆ ಗಟ್ಟಿದೆ ನಾಳಿದ್ದು ಅದ್ದೂರಿಯಾಗಿ ಗ್ರಾಮದ ಜನತೆ ಹಬ್ಬವನ್ನು ಆಚರಿಸಲಿರುವುದಾಗಿ ತಿಳಿಸಿದರು.

ಶ್ರೀ ದಂಡಿನ ಮಾರಮ್ಮ ದೇವಸ್ಥಾನ,ಸಮುದಾಯ ಭವನ,ರಸ್ತೆ,ಚರಂಡಿ ಸೇರಿದಂತೆ ಬೈರಾಪುರ ವ್ಯಾಪ್ತಿಗೆ ಬರುವ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯರವರ ಸಹಕಾರದಿಂದ ಆಗಿದ್ದು ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯರವರನ್ನು ಕರೆದು ಗ್ರಾಮದ ಎಲ್ಲಾ ದೇವಸ್ಥಾನಗಳ ಉದ್ಘಾಟನೆಯನ್ನು ನೆರವೇರಿಸಲಾಗುವುದೆಂದರು.

ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಪುರಸಭೆ ಮಾಜಿ ಸದಸ್ಯರಾದ ಪ್ರೇಮಮರಯ್ಯ ಕುಟುಂಬ ವರ್ಗ ಪ್ರಸಾದ ವಿನಿಯೋಗ ಮಾಡಿಸಿದರು.

ಮಣ್ಣಿನ ರೂಪದಲ್ಲಿ ಯಾವುದೇ ಆಸರೆ ಇಲ್ಲದೆ ಗಿಡ,ಗೆಂಟೆಗಳು,ಮುಳ್ಳಿನ ಪೊದೆಯಲ್ಲಿ ಇದ್ದ ಶ್ರೀ ದಂಡಿನ ಮಾರಮ್ಮ ದೇವಿಗೆ ದೇವಸ್ಥಾನ ಕಟ್ಟಲು ಜೊತೆ ಜೊತೆಗೆ ಬೈರಾಪುರ ಗ್ರಾಮದಲ್ಲಿ ಇರುವ ಎಂಟು ದೇವರುಗಳಿಗೆ ದೇವಸ್ಥಾನ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯರವರಿಗೆ ಗ್ರಾಮದ ಜನತೆ ಕೃತಜ್ಞತೆ ಸಲ್ಲಿಸುತ್ತೇವೆ.
– ಬಿ.ಮರಯ್ಯ,ಉಪಾಧ್ಯಕ್ಷರು (ಮಾಜಿ),ತಾಲ್ಲೂಕು ಪಂಚಾಯತಿ , ಟಿ.ನರಸೀಪುರ.
ಈ ಸಂದರ್ಭದಲ್ಲಿ ದಿವಾಕರ್ ಮರಯ್ಯ,ಮಹೇಂದ್ರ, ಗ್ರಾಮದ ದೊಡ್ಡ ಯಜಮಾಮರಾದ ಚಿಕ್ಕ ಲಿಂಗಯ್ಯ,ಜೆ.ಮಹದೇವ,ಚಿಕ್ಕ ನಂಜಯ್ಯ,ಪುಟ್ಟಸ್ವಾಮಿ, ರಾಜಣ್ಣ,ದಿಲೀಪ್ ಕುಮಾರ್,ಮಹದೇವಸ್ವಾಮಿ,ಬಸವರಾಜು, ಕುಮಾರ್, ಮಹದೇವ್,ಪುನೀತ್,ಅಭಿ,ಸುರೇಶ್,ಗಿರೀಶ್,ಪ್ರಕಾಶ್,ಗಟಕಮಹದೇವ್ ಸೇರಿದಂತೆ ಇತರರಿದ್ದರು.
ಎಂ.ನಾಗೇಂದ್ರಕುಮಾರ್
