ಗೋವಾ, ಜನವರಿ 28, 2026: ವಿಶ್ವ ಲೆಜೆಂಡ್ಸ್ ಪ್ರೊ ಟಿ20 ಲೀಗ್ 2026ರ ನಾಲ್ಕನೇ ಪಂದ್ಯದಲ್ಲಿ ದುಬೈ ರಾಯಲ್ಸ್, ಗುರುಗ್ರಾಮ್ ಥಂಡರ್ಸ್ ವಿರುದ್ಧ ಕೇವಲ 3 ರನ್ಗಳಿಂದ ಉಸಿರುಗಟ್ಟಿಸುವ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ದುಬೈ ರಾಯಲ್ಸ್ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 200 ರನ್ಗಳ ಭರ್ಜರಿ ಮೊತ್ತ ಕಲೆಹಾಕಿತು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ರಾಯಲ್ಸ್, ಪ್ರತಿಯೊಂದು ಹಂತದಲ್ಲೂ ರನ್ ವೇಗವನ್ನು ಕಾಯ್ದುಕೊಂಡು ಥಂಡರ್ಸ್ ಬೌಲರ್ಗಳ ಮೇಲೆ ನಿರಂತರ ಒತ್ತಡ ಹೇರಿತು.
ಸಮಿತ್ ಪಟೇಲ್ ಅವರು 32 ಎಸೆತಗಳಲ್ಲಿ ಅಜೇಯ 65 ರನ್ಗಳ ಮ್ಯಾಚ್ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಬ್ಯಾಟಿಂಗ್ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಂಡ ದುಬೈ ರಾಯಲ್ಸ್, ಲೀಗ್ನಲ್ಲಿ ಮೊದಲ ಬಾರಿಗೆ 200 ರನ್ ಗಡಿ ದಾಟಿತು.
ಬೌಲಿಂಗ್ನಲ್ಲಿ ಗುರುಗ್ರಾಮ್ ಥಂಡರ್ಸ್ ಹೋರಾಟ ಬಿಡಲಿಲ್ಲ. ತಿಸಾರಾ ಪೆರೇರಾ ಚೆಂಡಿನೊಂದಿಗೆ ಗಮನಸೆಳೆದಿದ್ದು, 2 ಓವರ್ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು. ಡೆತ್ ಓವರ್ಗಳಲ್ಲಿ ಥಂಡರ್ಸ್ ಬೌಲರ್ಗಳು ಪುನಃ ಸಂಘಟಿತರಾಗಿ ಹೆಚ್ಚಿನ ಹಾನಿಯನ್ನು ತಡೆಯುವಲ್ಲಿ ಯಶಸ್ವಿಯಾದರು.
201 ರನ್ಗಳ ಗುರಿ ಬೆನ್ನಟ್ಟಿದ ಗುರುಗ್ರಾಮ್ ಥಂಡರ್ಸ್ ಆತ್ಮವಿಶ್ವಾಸದ ಆರಂಭ ಪಡೆದಿತು. ಚೇತೇಶ್ವರ ಪೂಜಾರ ಅವರ ಮಾಸ್ಟರ್ಕ್ಲಾಸ್ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ಬಲ ನೀಡಿತು. ಅನುಭವೀ ಬ್ಯಾಟರ್ ತಮ್ಮ ಆಟದ ಹೊಸ ಆಯಾಮ ತೋರಿಸಿ, 100 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನೊಂದಿಗೆ ಟೂರ್ನಿಯಲ್ಲಿ ತಮ್ಮ ಮೊದಲ ಅರ್ಧಶತಕ ದಾಖಲಿಸಿದರು. ತಿಸಾರಾ ಪೆರೇರಾ ಅವರ ಸ್ಫೋಟಕ ಕೇಮಿಯೋ (ಸುಮಾರು 200 ಸ್ಟ್ರೈಕ್ ರೇಟ್) ಜೊತೆಗೆ ಥಂಡರ್ಸ್ ಕೊನೆಯವರೆಗೂ ಪೈಪೋಟಿ ನೀಡಿತು.
ಕೊನೆಯ ಓವರ್ನಲ್ಲಿ 7 ರನ್ ಅಗತ್ಯವಿದ್ದ ಸಂದರ್ಭದಲ್ಲಿ ಪಿಯೂಷ್ ಚಾವ್ಲಾ ತಮ್ಮ ಅಪಾರ ಅನುಭವ ಪ್ರದರ್ಶಿಸಿ ಒತ್ತಡದಲ್ಲಿ ಅದ್ಭುತ ಬೌಲಿಂಗ್ ಮಾಡಿದರು. ಪೂಜಾರ 99 ರನ್ಗಳಲ್ಲಿ ಔಟ್ ಆಗಿ ಶತಕದಿಂದ ಕೇವಲ ಒಂದು ರನ್ ದೂರ ಉಳಿದರು. ಚಾವ್ಲಾ ಓವರ್ನ್ನು ಯಶಸ್ವಿಯಾಗಿ ಮುಗಿಸಿ ದುಬೈ ರಾಯಲ್ಸ್ಗೆ ನಾಟಕೀಯ 3 ರನ್ ಜಯ ತಂದುಕೊಟ್ಟರು.
ಈ ಜಯದೊಂದಿಗೆ ದುಬೈ ರಾಯಲ್ಸ್ ಈ ಸೀಸನ್ನ ಮೊದಲ ಗೆಲುವು ದಾಖಲಿಸಿತು. ಇನ್ನು ಗುರುಗ್ರಾಮ್ ಥಂಡರ್ಸ್ ಮತ್ತೊಮ್ಮೆ ಅಲ್ಪ ಅಂತರದ ಸೋಲನ್ನು ಅನುಭವಿಸಿ, ರೋಚಕ ಹೋರಾಟದಲ್ಲಿ ಗುರಿ ತಲುಪಲು ವಿಫಲವಾಯಿತು.
ಸಂಕ್ಷಿಪ್ತ ಸ್ಕೋರ್:
ದುಬೈ ರಾಯಲ್ಸ್ – 200/5
● ಸಮಿತ್ ಪಟೇಲ್ – 65 (32)
● ಅಂಬಾಟಿ ರಾಯುಡು – 45 (27)
● ಸ್ಟುವರ್ಟ್ ಬ್ರಾಡ್ – 2/17 (3 ಓವರ್ಗಳು)
● ಸೌರಿನ್ ಠಾಕರ್ – 1/26 (3 ಓವರ್ಗಳು)
ಗುರುಗ್ರಾಮ್ ಥಂಡರ್ಸ್ – 195/7
● ಚೇತೇಶ್ವರ ಪೂಜಾರ – 99 (60)
● ತಿಸಾರಾ ಪೆರೇರಾ – 56 (27)*
● ಪಿಯೂಷ್ ಚಾವ್ಲಾ – 3/35 (4 ಓವರ್ಗಳು)
● ಸಮಿತ್ ಪಟೇಲ್ – 2/16 (4 ಓವರ್ಗಳು)
