ಹಾಸನ: ಬಸ್ನಲ್ಲಿ ಬರುವಾಗ ಮಹಿಳೆಯ ಬ್ಯಾಗಿನಲ್ಲಿದ್ದ 4 ಲಕ್ಷ ರೂ.ಹಣ ಕಳವಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಬೇಲೂರು ತಾಲ್ಲೂಕು ಕಲ್ಯಾಣಪುರದ ನಿವಾಸಿ ನಳಿನ ಎಂಬುವರು, ಕುಟುಂಬ ಸಮೇತ ಮಹಾರಾಷ್ಟ್ರದಲ್ಲಿ ಕೆಲಸ ಮಾಡಿಕೊಂಡಿದ್ದು, ಲ್ಯಾಣಪುರದ ತಮ್ಮ ಸೈಟ್ ಮಾರಾಟ ಮಾಡಿ ಬೆಂಗಳೂರಿನಲ್ಲಿ ಸೈಟ್ ತೆಗೆದುಕೊಳ್ಳಲು ಯೋಜನೆ ಮಾಡಿದ್ದರು ಎನ್ನಲಾಗಿದೆ.
ಅದರೆ ದುರದೃಷ್ಟವಶತ್ ಮಾ.2 ರಂದು ಮಧ್ಯಾಹ್ನ 12.30ರಲ್ಲಿ ಕಲ್ಯಾಣಪುರದಿಂದ ಖಾಸಗಿ ವಾಹನದಲ್ಲಿ ಹಗರೆಗೆ, ಅಲ್ಲಿಂದ ಹಾಸನಕ್ಕೆ ಕೆಎ-18-ಎಫ್-0894 ನಂಬರಿನ ಕೆಎಸ್ಆರ್ಟಿಸಿ ಬಸ್ನಲ್ಲಿ ಬಂದರು.ಹೊಸಬಸ್ನಿಲ್ದಾಣದಲ್ಲಿ ಇಳಿದು ನೋಡಿದಾಗ ಬ್ಯಾಗ್ನಲ್ಲಿ ಹಣ ಕಳುವಾಗಿರುವುದು ತಿಳಿದು ಬಂದಿದೆ. ಈ ಸಂಬಂಧ ಬಡಾವಣೆ ಠಾಣೆಗೆ ದೂರು ನೀಡಲಾಗಿದೆ.