ಹಾಸನ: ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿ ಇಂಜಿನಿಯರ್ಗಳ ಸಂಘದ ಹಾಸನ ಜಿಲ್ಲಾ ವಲಯ ಸಮಿತಿಯ ಸದಸ್ಯರಾಗಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ನ ಅಧ್ಯಕ್ಷರಾದ ರೋ.!! ಎಚ್.ಡಿ. ವಜ್ರಕುಮಾರ್ ಅವರು ಆಯ್ಕೆಯಾಗಿದ್ದಾರೆ.
ವಿದ್ಯುತ್ ಕ್ಷೇತ್ರದಲ್ಲಿ ಹೊಂದಿರುವ ಅನುಭವ, ಸಂಘಟನೆ ಸಾಮರ್ಥ್ಯ ಹಾಗೂ ಸಾಮಾಜಿಕ ಸೇವೆಯ ಹಿನ್ನೆಲೆಯನ್ನು ಪರಿಗಣಿಸಿ ಅವರಿಗೆ ಈ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಇವರ ಆಯ್ಕೆಯಿಂದ ಜಿಲ್ಲೆಯ ಇಂಜಿನಿಯರ್ಗಳ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ದೊರಕುವ ನಿರೀಕ್ಷೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಎಚ್.ಡಿ. ವಜ್ರಕುಮಾರ್ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿ, ಅವರ ಮುಂದಿನ ಕಾರ್ಯಾವಧಿಗೆ ಶುಭ ಹಾರೈಸಲಾಗಿದೆ.
