ಕೊರಟಗೆರೆ:- ಮಹಿಳಾ ಶಿಕ್ಷಕಿ ಹಾಗೂ ಮಹಾನ್ ಸಮಾಜ ಸುಧಾರಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯ ಅಂಗವಾಗಿ ಕೊರಟಗೆರೆ ಪಟ್ಟಣದ ಗುರುಭವನದಲ್ಲಿ ಭಾವಪೂರ್ಣ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಪೂಜ್ಯ ಡಾ. ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಉದ್ಘಾಟಿಸಿ ಮಾತನಾಡುತ್ತಾ, “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಎಂಬ ವಾಕ್ಯವನ್ನು ಉಲ್ಲೇಖಿಸಿ, ಮಹಿಳೆಯರನ್ನು ಗೌರವಿಸುವ ಸ್ಥಳದಲ್ಲೇ ದೇವತ್ವ ನೆಲೆಸಿದೆ ಎಂದರು.

ಮಾತೆ ಸಾವಿತ್ರಿಬಾಯಿ ಫುಲೆ ಅವರ ವಿಚಾರಧಾರೆಗಳನ್ನು ವಿವಿಧ ಸ್ಪರ್ಧೆಗಳ ಮೂಲಕ ಎಲ್ಲರಿಗೂ ತಿಳಿಸುವ ಕಾರ್ಯದಲ್ಲಿ ತಮ್ಮ ಸಹಕಾರವಿದೆ ಎಂದು ತಿಳಿಸಿದರು.
ಮಧುಗಿರಿ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಜಿ. ಎಲ್. ರಾಧಮ್ಮ ಮಾತನಾಡಿ, ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಆದರ್ಶ ಮತ್ತು ಸ್ಪೂರ್ತಿದಾಯಕವಾಗಿದ್ದು ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.
ಅವರ ಜಯಂತಿಯ ಅಂಗವಾಗಿ ಸಂಘಟನೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಫೈರೋಜ್ ಬೇಗಂ ಅವರು ಮಾತನಾಡಿ, ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನದ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕರಾದ ಶ್ರೀಯುತ ರಿಜ್ವಾನ್ ಭಾಷಾ ಸಾಹೇಬ್ ಮಾತನಾಡಿ, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಅದನ್ನು ನಿಭಾಯಿಸುವುದು ನಮ್ಮೆಲ್ಲರ ಗುರುತರ ಜವಾಬ್ದಾರಿ ಎಂದರು.ಸಂಘದ ಬೆನ್ನೆಲುಬಾದ ಶ್ರೀಮತಿ ಸುಜಾತಾ ಮಾತನಾಡಿ, ಸಂಘಟನೆ ನಡೆಸುವುದು ಸುಲಭದ ಮಾತಲ್ಲ; ಧೈರ್ಯ, ಛಲ ಹಾಗೂ ಸಂಘಟನಾ ಮನೋಭಾವದಿಂದ ನಾವು ಸಂಘವನ್ನು ಮುನ್ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಲತಾ ಮಣಿ ಎಚ್.ಕೆ. ಮಾತನಾಡಿ, ಸಂಘಟನೆ ಇಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬಲಾಢ್ಯಗೊಂಡಿದೆ ಎಂದು ತಿಳಿಸಿದರು.
ಹೊಳವನಹಳ್ಳಿ ಕೆ ಪಿ ಎಸ್ ಶಾಲೆಯ ಶಿಕ್ಷಕಿ ಹಾಗೂ ಸಂಘದ ಕಾರ್ಯದರ್ಶಿ ಆಶಾರಾಣಿ ಕಾರ್ಯಕ್ರಮವನ್ನು ನಿರೂಪಿಸಿದರು. ತಾಲೂಕು ಅಧ್ಯಕ್ಷರಾದ ಶ್ರೀಮತಿ ಸುಜಾತಾ ಅವರು ಸಂಘಟನೆ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು. ಸ್ವರ್ಣಂಬರವರು ಸ್ವಾಗತ ಕೋರಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಮಾತೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಶ್ರೀಮತಿ ನೇತ್ರಾವತಿ ಹಾಗೂ ನಾಗವೇಣಿ ಪ್ರದಾನ ಮಾಡಿದರು. ನಿವೃತ್ತ ಶಿಕ್ಷಕಿಯರ ಸನ್ಮಾನವನ್ನು ಶ್ರೀಮತಿ ಮಾಲಿನಿ ನೆರವೇರಿಸಿದರು. ಜಿಲ್ಲಾ ಪ್ರಶಸ್ತಿ ವಿಜೇತರಾದ ಶ್ರೀ ಮೋಗಣ್ಣ ಹಾಗೂ ಶ್ರೀಮತಿ ಮಾಲಿನಿ ಅವರಿಗೆ ಸನ್ಮಾನವನ್ನು ಶ್ರೀಮತಿ ಮಂಜುಳಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಸಂಘದ ಪದಾಧಿಕಾರಿಗಳಾದ ನಳಿನ, ಉಷಾ ಸರೋಜಾ, ಸುನಂದಮ್ಮ, ಪ್ರೇಮ, ರಂಗಮ್ಮ, ಸೌಭಾಗ್ಯ, ಸಾಹೇರಾ ಬಾನು, ಕಲ್ಯಾಣಮ್ಮ, ನಾಗರತ್ನ, ಜಗದಾಂಬ, ತ್ರಿವೇಣಿ, ಲಲಿತ ಚಂದ್ರಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೌಕರರ ಸಂಘದ ಕಾರ್ಯದರ್ಶಿ ಚಿಕ್ಕಪ್ಪಯ್ಯ, ಸಿಇಒ ಅನಸೂಯ, ಗಂಗಮ್ಮ, ಎನ್ಪಿಎಸ್ ಸಂಘದ ಅಧ್ಯಕ್ಷರಾದ ರಮಾನಂದ ಹಾಗೂ ಬಿಆರ್ಪಿ ಮತ್ತು ಸಿಆರ್ಪಿ ಮಿತ್ರರು ಭಾಗವಹಿಸಿದ್ದರು. ಶ್ರೀಮತಿ ಪುಟ್ಟಮ್ಮ ಎಲ್ಲರನ್ನು ವಂದಿಸಿದರು.
ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ನೆರವೇರಿತು.ಜೈ ಸಾವಿತ್ರಿಬಾಯಿ ಪುಲೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ವರದಿ ನರಸಿಂಹಯ್ಯ ಹೊಸಕೋಟೆ
