ಕೆ.ಆರ್.ಪೇಟೆ : ಮಾಜಿ ಉಪಮುಖ್ಯಮಂತ್ರಿ ಡಾ: ಸಿ ಅಶ್ವಥ್ ನಾರಾಯಣ್ ರವರ ಹುಟ್ಟುಹಬ್ಬ ಪ್ರಯುಕ್ತ ಕೆ.ಆರ್.ಪೇಟೆ.ತಾಲ್ಲೂಕಿನ ಡಾ: ಸಿ.ಎನ್ ಅಶ್ವಥ್ ನಾರಾಯಣ್ ಅಭಿಮಾನಿ ಬಳಗದ ಅಧ್ಯಕ್ಷ ಪರಮೇಶ್ವರ್ ಹಾಗೂ ಉಪಾಧ್ಯಕ್ಷ ಹೊಸಹೊಳಲು ಯೋಗೇಶ್ ಎನ್.ಗೌಡ ಅವರ ನೇತೃತ್ವದಲ್ಲಿ ಬೆಂಗಳೂರು ಅಶ್ವಥ್ ನಾರಾಯಣ್ ರವರ ಕಚೇರಿಗೆ ತೆರಳಿ ಅಶ್ವಥ್ ನಾರಾಯಣ್ ಅವರಿಗೆ ಹೃದಯಸ್ಪರ್ಶಿಸುವಂತೆ ಅಭಿನಂದಿಸಿದರು

ಬಳಿಕ ಮಾತನಾಡಿ ಅಧ್ಯಕ್ಷ ಪರಮೇಶ್ ನಮ್ಮ ನಾಯಕರಾದ ಸಿ.ಎನ್ ಅಶ್ವಥ್ ನಾರಾಯಣ್ ರವರ ಉಪ ಮುಖ್ಯಮಂತ್ರಿ ಆಡಳಿತ ಅವಧಿಯಲ್ಲಿ ರಾಜ್ಯದ ದಿನದಲಿತರ ಉದ್ಧಾರಕ್ಕೆ ಉತ್ತಮ ನಿರಂತರ ಸೇವೆ ಸಲ್ಲಿಸಿ ಬೆಂಗಳೂರು ಮಲ್ಲೇಶ್ವರಂ ನಲ್ಲಿ ಸೋಲಿಲ್ಲದ ಸರದಾರಂತೆ ಉತ್ತಮ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯವನ್ನು ಆಳುವ ಉತ್ತಮ ಸ್ಥಾನಮಾನ ದೊರಕಲಿ ಎಂದು ಶುಭಕೋರಿದರು.
ಕೆ.ಆರ್.ಪೇಟೆ. ತಾಲೂಕು ಅಶ್ವಥ್ ನಾರಾಯಣ್ ಅಭಿಮಾನಿ ಬಳಗದ 2026 ವರ್ಷದ ದಿನದರ್ಶಿಕೆಯನ್ನು ಅಶ್ವಥ್ ನಾರಾಯಣ್ ಬಿಡುಗಡೆಗೊಳಿಸಿದರು.
ವರದಿ : ಮನು ಮಂಡ್ಯ
