ಕೊರಟಗೆರೆ : ಪಟ್ಟಣದಲ್ಲಿ ಫೆ.7 ಹಾಗೂ ಫೆ.8 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಿ ಎಂದು ಬೆಸ್ಕಾಂ ಇಲಾಖೆಯ ಎಇಇ ಪ್ರಸನ್ನಕುಮಾರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ತಾಲೂಕಿನ ಕೋಳಾಲ ಹಾಗೂ ಸಂಕೇನಹಳ್ಳಿಯಲ್ಲಿ ಕವಿಪ್ರನಿನಿ ವತಿಯಿಂದ ನಿರ್ವಹಣಾ ಕಾಮಗಾರಿಯನ್ನ ಹಮ್ಮಿಕೊಂಡಿದ್ದು. ಫೆ.7 ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೊರಟಗೆರೆ ಪಪಂ ವ್ಯಾಪ್ತಿ ಹಾಗೂ ತಾಲೂಕಿನ ಕೋಳಾಲ, ವಜ್ಜನಕುರಿಕೆ, ಪಾತಗಾನಹಳ್ಳಿ, ಚಿನ್ನಹಳ್ಳಿ, ಮಾವತ್ತೂರು, ದೊಡ್ಡಸಾಗ್ಗೆರೆ, ವಡ್ಡಗೆರೆ, ಅಗ್ರಹಾರ, ತೀತಾ, ಬುಕ್ಕಾಪಟ್ಟಣ, ಹಂಚಿಹಳ್ಳಿ, ನೀಲಗೊಂಡನಹಳ್ಳಿ, ಎಲೆರಾಂಪುರ, ಮತ್ತು ಹುಲೀಕುಂಟೆ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಫೆ.8 ರ ಭಾನುವಾರ ತಾಲೂಕಿನ ತೋವಿನಕೆರೆ, ಹೊಳವನಹಳ್ಳಿ, ನಿಟ್ರಹಳ್ಳಿ ಹಾಗೂ ಬೈರೇನಹಳ್ಳಿಯಲ್ಲಿ ಕವಿಪ್ರನಿನಿ ವತಿಯಿಂದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತಾಲೂಕಿನ ತೋವಿನಕೆರೆ, ಬೂದಗವಿ, ಕುರಂಕೋಟೆ, ತುಂಬಾಡಿ, ವಡ್ಡಗೆರೆ, ಹೊಳವನಹಳ್ಳಿ, ಅಕ್ಕಿರಾಂಪುರ, ಬಿ.ಡಿ.ಪುರ, ಬೈಚಾಪುರ, ಕ್ಯಾಮೇನಹಳ್ಳಿ, ಹಾಗೂ ಅರಸಾಪುರ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ವರದಿ : ಶ್ರೀನಿವಾಸ್ ಕೊರಟಗೆರೆ
