ತುಮಕೂರು: ಶಬರಿಮಲೈ ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಜ್ಯ ಘಟಕದಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಈ ತಿಂಗಳ 6 ಮತ್ತು 7ರಂದು ವಿವಿಧ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಸೇವಾ ಸಮಾಜಂನ ಜಿಲ್ಲಾ ಘಟಕದಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ರಾಷ್ಟ್ರೀಯ ಘಟಕ ಮಾಜಿ ಅಧ್ಯಕ್ಷರೂ ಆದ ನಗರದ ಗಾರ್ಡನ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಕೋರಿದ್ದಾರೆ.
6ರಂದು ಸಂಜೆ 4 ಗಂಟೆಗೆ ಧರ್ಮಸ್ಥಳದಲ್ಲಿ ಸೇವಾ ಸಮಾಜಂನ ರಾಜ್ಯ ಘಟಕದ ಕಾರ್ಯಕಾರಿಣಿ ಸಭೆ ನಡೆಯಲಿದೆ. 7ರಂದು ಬೆಳಿಗ್ಗೆ 9 ಗಂಟೆಗೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 2 ಗಂಟೆಗೆ ಘೋಷಣೆಯುಕ್ತ ಮೆರವಣಿಗೆಯೊಂದಿಗೆ ನೇತ್ರಾವತಿ ನದಿ ಪಾತ್ರದೆಡೆಗೆ ಪಾದಯಾತ್ರೆ, ನಂತರ ನೇತ್ರಾವತಿ ತಾಯಿಗೆ ಆರತಿ ಕಾರ್ಯಕ್ರಮ ಹಾಗೂ ಸ್ವಚ್ಛ ನೇತ್ರಾವತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ಪದಾಧಿಕಾರಿಗಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟಿ.ಬಿ.ಶೇಖರ್ ವಿನಂತಿಸಿದ್ದಾರೆ. ಹೆಸರು ನೋಂದಣಿ ಹಾಗೂ ಹೆಚ್ಚಿನ ವಿವರಗಳಿಗೆ ಸೇವಾ ಸಮಾಜಂನ ರಾಜ್ಯ ಘಟಕದ ಸಂಪರ್ಕಾಧಿಕಾರಿ ಮೊಬೈಲ್:9886544737 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
– ಕೆ.ಬಿ.ಚಂದ್ರಚೂಡ
