
ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಬ್ಯಾಕ್ ಲಾಗ್ ಹುದ್ದೆಗಳನ್ನು ಗುರುತಿಸಿ ಭರ್ತಿ ಮಾಡುವ ಬಗ್ಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ, ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳು, ಉಪ ನಿದೇರ್ಶಕರು, (ಆಡಳಿತ) ಶಾಲಾ ಶಿಕ್ಷಣ ಇಲಾಖೆಗೆ ಪತ್ರವನ್ನು ಬರೆದಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಈ ಸಂಬಂಧ ಪತ್ರದಲ್ಲಿ ಈ ಕೆಳಕಂಡಂತೆ ಸೂಚಿಸಲಾಗಿದೆ.
1. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು. ರವರ ಆದೇಶ ಸಂಖ್ಯೆ: SWD 275 SLP 2024, ದಿನಾಂಕ: 29-08-2024. 2. ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ರವರ ಅಧಿಕೃತ ಜ್ಞಾಪನ ಸಂಖ್ಯೆ: ಸಕನಿ.ಮೀ.ಜಾ.ಕೋ-1:ಸಿ.ಆರ್:-2024-25 ದಿನಾಂಕ: 26-12-2024.
3. ಈ ಕಛೇರಿ ಪತ್ರ ಸಂ. ಸಂಖ್ಯೆ: ಕರಾ/ಅಜಾ/ಅಬು/ಆಯೋಗ/ಸೇವೆ/ಸಿ.ಆರ್-56/
2024-25 ದಿನಾಂಕ: 09.01.2025
4. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರ ಜ್ಞಾಪನಾ ಸಂ. ಸಿ3(5) ಪ್ರಾ.ಶಿ. ಇತರೆ/06/2023-24 ದಿನಾಂಕ: 17.01.2025
5. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರ ಜ್ಞಾಪನಾ ಸಂ. ಸಿ4(2) ರಾ.ಪ. ಜಾ.ಮು.ಮಾ/03/2024-25 ದಿನಾಂಕ: 21.01.2025
ಮೇಲ್ದಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (4)(5)ರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರ ಪತ್ರಗಳಲ್ಲಿ 1978 ರಿಂದ 2003ರ ವರೆಗೆ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಾಧಿಕಾರಿಯು ರಾಜ್ಯದ 04 ವಿಭಾಗೀಯ ಕಛೇರಿಗಳ ಸಹ ನಿರ್ದೇಶಕರಾಗಿದ್ದು. 2003ನೇ ಸಾಲಿನಿಂದ ನೇಮಕಾತಿ ಪ್ರಾಧಿಕಾರಿಗಳು ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಾಗಿರುತ್ತಾರೆ. ಹಾಗೂ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಮುಂಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿಗಳು 35 ಶೈಕ್ಷಣಿಕ ಜಿಲ್ಲೆಗಳಾಗಿರುವುದರಿಂದ ಅನುಬಂಧ-1 ರಲ್ಲಿ ನೇರ ನೇಮಕಾತಿ & ಅನುಬಂಧ-2ರಲ್ಲಿ ಮುಂಬಡ್ತಿಗಳ ಮಾಹಿತಿಯನ್ನು ಈ ಕಛೇರಿಗೆ ಒದಗಿಸಲು ದಿನಾಂಕಗಳನ್ನು ನಿಗಧಿಪಡಿಸಿ ಆದೇಶಿಸಲಾಗಿದೆ.
ಅದರಂತೆ ನಿಗಧಿಪಡಿಸಿದ ದಿನಾಂಕಗಳಂದು ಸಹ ನಿರ್ದೇಶಕರು, ವಿಭಾಗೀಯ ಕಛೇರಿ/ಉಪನಿರ್ದೇಶಕರು ಶೈಕ್ಷಣಿಕ ಜಿಲ್ಲೆಗಳು/ಸಿಬ್ಬಂದಿಗಳು ಈ ಕಛೇರಿಗೆ ಭೇಟಿ ನೀಡಿ, ಅನುಬಂಧ-1 ರಲ್ಲಿ ನೇರ ನೇಮಕಾತಿ & ಅನುಬಂಧ-2 ರಲ್ಲಿ ಮುಂಬಡ್ತಿಗಳ ಮಾಹಿತಿಯನ್ನು ಕ್ರೂಢೀಕರಿಸಲು ಸ್ಪಷ್ಟ್ರೀಕರಣವನ್ನು ಪಡೆದಿರುತ್ತಾರೆ. ಯಾವುದೇ ವಿಭಾಗೀಯ ಕಛೇರಿಗಳು/ಜಿಲ್ಲೆಗಳು ಮಾಹಿತಿ ಸಲ್ಲಿಸಿರುವುದಿಲ್ಲ, ನೇರ ನೇಮಕಾತಿ ಮಾಹಿತಿಯನ್ನು 1984 ರಿಂದ ಮುಂಬಡ್ತಿಗಳನ್ನು 1978ರಿಂದ ಮಾಹಿತಿಯನ್ನು ಕ್ರೂಢೀಕರಿಸಲು ಕಾಲವಕಾಶ ನೀಡುವಂತೆ ಕೋರಿಕೆಗಳನ್ನು ಸಲ್ಲಿಸಿರುತ್ತಾರೆ.
ತಮ್ಮ ಕೋರಿಕೆಯಂತೆ ಈಗಾಗಲೇ 1 ತಿಂಗಳು ಕಾಲ ಗತಿಸಿರುತ್ತದೆ. ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿರುವುದರಿಂದ,ಪ್ರಾಥಮಿಕ ಶಾಲೆ ಶಿಕ್ಷಕರು, GPT, ಪ್ರೌಢ ಶಾಲೆ ಶಿಕ್ಷಕರು 1984 ರಿಂದ ನೇರ ನೇಮಕಾತಿಗಳನ್ನು, 1978 ರಿಂದ ಪ್ರಾಥಮಿಕ ಶಾಲೆ ಶಿಕ್ಷಕರಿಂದ HM & NGHM, ಪ್ರೌಢಶಾಲೆ ಶಿಕ್ಷಕರ ಹುದ್ದೆಗೆ ಮುಂಬಡ್ತಿಗೆ ಸಂಬಂಧಿಸಿದಂತೆಮಾಹಿತಿಯನ್ನು ಎಲ್ಲಾ ವಿಭಾಗೀಯ ಸಹ ನಿರ್ದೇಶಕರು/35 ಶೈಕ್ಷಕಣಿಕ ಜಿಲ್ಲೆಯ ಉಪ ನಿರ್ದೇಶಕರು, ಶಾಲಾ ಶಿಕ್ಷಣಇಲಾಖೆ, ರವರುಗಳು ಮಾಹಿತಿಯನ್ನು ಅನುಬಂಧ-1, & 2ರಲ್ಲಿ ಎಲ್ಲಾ ಪುಟಗಳನ್ನು ದೃಢೀಕರಿಸಿ, ದ್ವಿಪ್ರತಿಯಲ್ಲಿಮಾಹಿತಿಯನ್ನು ಕೂಡಲೇ ಈ ಕಛೇರಿಗೆ ಮುದ್ದಾಂ ಸಲ್ಲಿಸಲು ಹಾಗೂ ಸಾಫ್ಟ್ ಕಾಫಿಯನ್ನು E-mail:karnatakastatecomscst@yahoo.in ಗೆ ಸಲ್ಲಿಸಲು ತಿಳಿಸಿದೆ.