ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಗೋಣಿಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಕೇಂದ್ರ ವನ್ನು ರೈತರ ಹಾಗೂ ಹೈನುಗಾರಿಕೆ ಅನುಕೂಲಕ್ಕಾಗಿ ಉದ್ಘಾಟನೆ ಮಾಡಲಾಗಿತ್ತು.
ತುಮಲ್ ನಿರ್ದೇಶಕ ವಿ. ಸಿದ್ದಗಂಗಯ್ಯ ಮಾತನಾಡಿ. ನಾನು ನಿರ್ದೇಶಕನಾಗಿ 14 ತಿಂಗಳು ಕಳೆದಿದೆ ಭವಿಷ್ಯ ಹಲವಾರು ದಿನಗಳನ್ನು ಕಳೆದಿದ್ದು. ಬಹುತೇಕ ಈ ದೇಶದಲ್ಲಿ ಹೈನುಗಾರಿಕೆಗೆ ಡಾ. ವರ್ಜಿಸ್ ಕುರಿಯನ್ ಅಭಿವೃದ್ಧಿ ಆರ್ಥಿಕತೆಗೆ ಬಹಳ ಹೊತ್ತು ನೀಡಿದ್ದಾರೆ. ಈ ದೇಶದ ಅಕ್ಷರ ಸಾಗರ ಹಾಗೂ ಕ್ಷಿರಸಾಗರ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ತುಮಕೂರಿನಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ,ಗುಬ್ಬಿ, ತುಮಕೂರು ಗ್ರಾಮಾಂತರ. ತಾಲ್ಲೂಕುಗಳಲ್ಲಿ ಮುಂದುವರೆದಿದ್ದು ನಮ್ಮ ಭಾಗದ ಶಿರಾ, ಪಾವಗಡ, ಮಧುಗಿರಿ ಮತ್ತು ಕೊರಟಗೆರೆ ಬಂಜರು ಭೂಮಿಯಲ್ಲಿ ಇರುವಂತದ್ದು. ಅದರಲ್ಲಿ ಹೆಚ್ಚಿನದಾಗಿ ವ್ಯವಸಾಯ ನಂಬಿ ಜೀವನ ಸಾಗಿಸುವುದು ಅದರ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬು ಮಾಡಿಕೊಂಡು ಬರುತ್ತಿದ್ದು. 55000 ಲೀಟರ್ ಇಂದ ಇದೀಗ 85,000 ಲೀಟರ್ ವರೆಗೆ ಕೊರಟಗೆರೆಯಲ್ಲಿ ಹಾಲು ಪ್ರಮಾಣ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಮಟ್ಟಕ್ಕೆ ಹೋಗಲಿದ್ದು ಗೋಣಿಹಳ್ಳಿ ಗ್ರಾಮದ ಯುವಕರು ಹಾಗೂ ಹಿರಿಯರು ಮತ್ತು ರೈತ ವ್ಯಾಪ್ತಿ ವರ್ಗದವರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಎಲ್ಲಾ ಕೆಲಸಗಳಿಗೆ ಯಜಮಾನರಿದ್ದಾರೆ. ಆದರೆ ರೈತರಿಗೆ ಯಜಮಾನರು ಯಾರು ಇಲ್ಲ. ಬೆಳಗ್ಗೆ ಎರಡುಗಂಟೆ ಸಂಜೆ ಎರಡು ತಾಸು ಕೆಲಸ ಮಾಡಿದರೆಸಾಕು ರೈತರ ಜೀವನ ಸಾಗುತ್ತದೆ.

ಹೈನುಗಾರಿಕೆಯಿಂದ ತುಂಬಾ ಬದಲಾವಣೆ ಕಂಡಿದೆ. ಹೈನುಗಾರಿಕೆಯಲ್ಲಿ ತರಬೇತಿಗಳನ್ನು ನೀಡುತ್ತಾರೆ ಅದನ್ನು ಉಪಯೋಗ ಪಡಿಸಿಕೊಳ್ಳಬೇಕು. ಅದರಲ್ಲೂ ಗೋಣಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಮುಂದಿನ ದಿನಗಳಲ್ಲಿ ಉತ್ತಮ ಮಟ್ಟಕ್ಕೆ ಬೆಳೆದು. ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದಂತೆ ಅವರು ಕೂಡ ಬೆಳೆಯಬೇಕು ಎಂದು ಹೇಳಿದರು.
ಸಂದರ್ಭದಲ್ಲಿ ತಾಲ್ಲೂಕು ವಿಸ್ತಾರಕ ಜಯಕುಮಾರ್ ಪುಷ್ಪ ಬಶೀರಾ ಗೋಣಿಹಳ್ಳಿ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ. ಜಿ.ಹೆಚ್ ನಾಗಹನುಮಯ್ಯ. ಕೆ.ಎ.ಎಸ್. ಭೈರಪ್ಪ,ಎಲ್.ಲಿಂಗಣ್ಣ, ಎಲ್.ರಂಗಪ್ಪ, ರಂಗಹನುಮಯ್ಯ ಆಂಜಿನಪ್ಪ, ನಿವೃತ್ತ ಶಿಕ್ಷಕ.ನಾಗಪ್ಪ, ದೊಡ್ಡನಾಗಪ್ಪ, ಜಿ.ವಿ.ಅರಸಪ್ಪ.ಜಿ.ಎಂ.ಆರೋಗ್ಯ ಕ್ಷೇತ್ರ. ಕುಮಾರಿ ಸಂಗೀತ, ಶಿಕ್ಷಣ ಕ್ಷೇತ್ರದ ಬಿ.ಹೆಡ್.ನಲ್ಲಿ ಚಿನ್ನದ ಪದಕ ಪಡೆದ ಕುಮಾರಿ.ದೀಪಿಕಾ, ಜಿ.ಹೆಚ್. ಯಲಚಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ. ಶ್ರೀನಿವಾಸ. ಉಪಾಧ್ಯಕ್ಷ ಗಂಗಹನುಮಯ್ಯ. ಕಾರ್ಯದರ್ಶಿ ಆನಂತ.ಮಲುಗೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ. ಶಶಿರೇಖಾಆರಾಧ್ಯ. ಕಾರ್ಯದರ್ಶಿ.ರೂಪ ಗೋಪೆನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ. ಯುವರಾಜ್.ಕಾರ್ಯಕ್ರಮ ಜಿ.ವಿ.ದೊಡ್ಡನಾಗಪ್ಪ. ನಿವೃತ್ತ ಶಿಕ್ಷಕರು ಗೋಣಿಹಳ್ಳಿ ಗ್ರಾ. ಪಂ.ಮಾಜಿ ಸದಸ್ಯ ಸಿದ್ದಪ್ಪ. ರಂಗಸ್ವಾಮಿ. ತಿಮ್ಮಯ್ಯ. ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ ನರಸಿಂಹಯ್ಯ ಹೊಸಕೋಟೆ
