ತಿರುವನಂತಪುರಂ, ಫೆಬ್ರವರಿ 10, 2026: ಭಾರತದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲೊಂದಾದ ಎಚ್ಡಿಎಫ್ಸಿ ಲೈಫ್ ಸಂಸ್ಥೆಯು ಕೇರಳದ ತಿರುವನಂತಪುರಂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮುತ್ತೂಟ್ ಪಾಪಚ್ಚನ್ ಗ್ರೂಪ್ (ಮುತ್ತೂಟ್ ಬ್ಲೂ) ನ ಪ್ರಮುಖ ಅಂಗ ಸಂಸ್ಥೆಯಾದ ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಜೊತೆ ಸಹಭಾಗಿತ್ವ ಮಾಡಿಕೊಂಡಿರುವುದಾಗಿ ಘೋಷಿಸಿದೆ.
ಈ ಪಾಲುದಾರಿಕೆಯ ಮೂಲಕ ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ನ ಗ್ರಾಹಕರು ಎಚ್ಡಿಎಫ್ಸಿ ಲೈಫ್ನ ಸಮಗ್ರ ಗುಂಪು ವಿಮೆ ಹಾಗೂ ವೈಯಕ್ತಿಕ ಜೀವ ವಿಮಾ ಪರಿಹಾರಗಳನ್ನು ಪಡೆಯಲು ಅವಕಾಶ ದೊರೆಯಲಿದೆ. ಗ್ರಾಹಕರ ದೀರ್ಘಕಾಲಿಕ ಆರ್ಥಿಕ ಗುರಿಗಳನ್ನು ಸಾಧಿಸಲು ಸಹಾಯಕವಾಗುವ ರಕ್ಷಣಾ ಯೋಜನೆಗಳು ಮತ್ತು ಉಳಿತಾಯ ಆಧಾರಿತ ಉತ್ಪನ್ನಗಳು ಇದರೊಳಗೆ ಸೇರಿವೆ. ಮುತ್ತೂಟ್ ಫಿನ್ ಕಾರ್ಪ್ನ ದೇಶಾದ್ಯಂತ ಇರುವ 3,750ಕ್ಕೂ ಹೆಚ್ಚು ಶಾಖೆಗಳು ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಈ ಸೇವೆಗಳು ಲಭ್ಯವಾಗಲಿವೆ.
ಈ ಕುರಿತು ಮಾತನಾಡಿದ ಎಚ್ಡಿಎಫ್ಸಿ ಲೈಫ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಓ ವಿಭಾ ಪಡಾಲ್ಕರ್ ಅವರು, “ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಜೊತೆಗಿನ ಈ ಸಹಭಾಗಿತ್ವವು ‘2047ರೊಳಗೆ ಎಲ್ಲರಿಗೂ ವಿಮೆ’ ಎಂಬ ಗುರಿ ಸಾಧನೆಯತ್ತ ಮಹತ್ವದ ಹೆಜ್ಜೆಯಾಗಿದೆ. ಮುತ್ತೂಟ್ ಫಿನ್ ಕಾರ್ಪ್ನ ಹಾಲಿ ಹಾಗೂ ಹೊಸ ಗ್ರಾಹಕರಿಗೆ ಅವರ ಆರ್ಥಿಕ ಗುರಿಗಳನ್ನು ಸಾಧಿಸಲು ನೆರವಾಗುವ ಪರಿಣಾಮಕಾರಿ ಜೀವ ವಿಮಾ ಪರಿಹಾರಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ನಮ್ಮ ಸರಳ ಮತ್ತು ಡಿಜಿಟಲ್ ಪ್ರಕ್ರಿಯೆಗಳು ಮುತ್ತೂಟ್ ತಂಡಗಳಿಗೆ ಹೆಚ್ಚಿನ ಸಾಮರ್ಥ್ಯ ಒದಗಿಸಿ, ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡಲಿವೆ. ದೇಶದಲ್ಲಿ ವಿಮಾ ವ್ಯಾಪ್ತಿಯನ್ನು ವಿಸ್ತರಿಸಿ, ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ನಾವು ಎದುರು ನೋಡುತ್ತಿದ್ದೇವೆ,” ಎಂದು ಹೇಳಿದರು.
ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ನ ಸಿಇಓ ಶ್ರೀ ಶಾಜಿ ವರ್ಗೀಸ್ ಅವರು ಮಾತನಾಡಿ, “ಎಚ್ಡಿಎಫ್ಸಿ ಲೈಫ್ ಜೊತೆ ಕೈಜೋಡಿಸಿರುವುದು ನಮಗೆ ಸಂತೋಷ ತಂದಿದೆ. ಮುತ್ತೂಟ್ ಫಿನ್ ಕಾರ್ಪ್ ಮತ್ತು ಎಚ್ಡಿಎಫ್ಸಿ ಲೈಫ್ ಎರಡೂ ಗ್ರಾಹಕರ ವಿಶ್ವಾಸದ ಮೇಲೆ ನಿರ್ಮಿತ ಸಂಸ್ಥೆಗಳಾಗಿವೆ. ನಮ್ಮ 3,750ಕ್ಕೂ ಹೆಚ್ಚು ಶಾಖೆಗಳ ಜಾಲ, ಡಿಜಿಟಲ್ ವೇದಿಕೆಗಳು ಮತ್ತು ಲಕ್ಷಾಂತರ ಗ್ರಾಹಕರೊಂದಿಗಿನ ನಂಟನ್ನು ಎಚ್ಡಿಎಫ್ಸಿ ಲೈಫ್ನ ಉತ್ಪನ್ನ ಮತ್ತು ಅಪಾಯ ನಿರ್ವಹಣಾ ಪರಿಣತಿಯೊಂದಿಗೆ ಸಂಯೋಜಿಸಿ, ಭಾರತೀಯ ಕುಟುಂಬಗಳಿಗೆ ಅರ್ಥಪೂರ್ಣ ಆರ್ಥಿಕ ರಕ್ಷಣೆ ನೀಡುವುದು ಈ ಪಾಲುದಾರಿಕೆಯ ಉದ್ದೇಶವಾಗಿದೆ,” ಎಂದು ತಿಳಿಸಿದರು.
