ಕೆ.ಆರ್.ಪೇಟೆ,ಫೆ.17: ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಸಾಮಾಜಿಕ ಬಾಂಧವ್ಯಗಳನ್ನು ಬಲಪಡಿಸುತ್ತವೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇರಾ ಯುವ ಭಾರತ್ ಜಿಲ್ಲಾ ಯುವಜನ ಕ್ರೀಡಾ ಇಲಾಖೆ, ಮಂಡ್ಯ ಜಿಲ್ಲಾ ಯುವ ಪರಿಷತ್, ಹೊಸಹೊಳಲು ಕುರುಹಿನಶೆಟ್ಟಿ ಮಹಿಳಾ ಸಮಾಜ, ಮಾದಾಪುರ ವಿಘ್ನೇಶ್ವರ ಯುವಕರ ಸೇವಾ ಸಂಘ, ಮಂಡ್ಯ ಯುವಜನ ಮತ್ತು ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆ ಎಂದರೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವ ಒಂದು ಚಟುವಟಿಕೆ. ಇದು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಬದಲಾಗಿ ಶಿಸ್ತು, ತಂಡದ ಕೆಲಸ, ನಾಯಕತ್ವ ಮತ್ತು ಸಮಯ ನಿರ್ವಹಣೆಯಂತಹ ಮೌಲ್ಯಗಳನ್ನು ಕಲಿಸುತ್ತದೆ. ಕ್ರೀಡೆಗಳು ಮಾನವನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕ್ರೀಡೆಗಳಿಂದ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಕ್ರೀಡೆಗಳು ದೇಹವನ್ನು ಸದೃಢವಾಗಿಡುತ್ತವೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ, ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕ್ರೀಡೆಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಮತ್ತು ಮನಸ್ಸನ್ನು ಶಾಂತವಾಗಿಡುತ್ತವೆ.

ತಂಡದ ಕೆಲಸವನ್ನು ಪ್ರೋತ್ಸಾಹಿಸುತ್ತವೆ, ಸ್ನೇಹವನ್ನು ಬೆಳೆಸುತ್ತವೆ, ಮತ್ತು ಸಾಮಾಜಿಕ ಕೌಶಲ್ಯಗಳನ್ನು ಸುಧಾರಿಸುತ್ತವೆ. ಶಿಸ್ತು, ಸಮಯ ನಿರ್ವಹಣೆ, ಮತ್ತು ನಾಯಕತ್ವದ ಗುಣಗಳನ್ನು ಕಲಿಸುತ್ತವೆ ಹಾಗಾಗಿ ಯುವಜನರು ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶಾಸಕರು ಯುವಕರಿಗೆ ಸಲಹೆ ನೀಡಿದರು. ಕ್ರೀಡೆಗಳು ಶಿಸ್ತು, ಸಂಯಮ, ನಾಯಕತ್ವ ಮತ್ತು ಸಮಯ ನಿರ್ವಹಣೆಯಂತಹ ಮೌಲ್ಯಗಳನ್ನು ಕಲಿಸುತ್ತದೆ.

ಕ್ರೀಡೆಗಳು ಮಾನವನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕ್ರೀಡೆಗಳಿಂದ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಕ್ರೀಡೆಗಳು ದೇಹವನ್ನು ಸದೃಢವಾಗಿಡುತ್ತವೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ, ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕ್ರೀಡೆಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಮತ್ತು ಮನಸ್ಸನ್ನು ಶಾಂತವಾಗಿಡುತ್ತವೆ. ತಂಡದ ಕೆಲಸವನ್ನು ಪ್ರೋತ್ಸಾಹಿಸುತ್ತವೆ, ಸ್ನೇಹವನ್ನು ಬೆಳೆಸುತ್ತವೆ, ಮತ್ತು ಸಾಮಾಜಿಕ ಕೌಶಲ್ಯಗಳನ್ನು ಸುಧಾರಿಸುತ್ತವೆ. ಶಿಸ್ತು, ಸಮಯ ನಿರ್ವಹಣೆ, ಮತ್ತು ನಾಯಕತ್ವದ ಗುಣಗಳನ್ನು ಕಲಿಸುತ್ತವೆ ಹಾಗಾಗಿ ಯುವಜನರು ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು.
ಪದವಿ ಶಿಕ್ಷಣ ತಮ್ಮ ಜೀವನ ಗುರಿಯನ್ನು ಸಾಧಿಸಲು ಪ್ರಮುಖ ಘಟ್ಟವಾಗಿದೆ ಇದನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣ ಹೊಂದಬೇಕು. ಕಾಲೇಜಿನಲ್ಲಿ ಉಪನ್ಯಾಸಕರಿಂದ ಪಾಠ-ಪ್ರವಚನಕ್ಕೆ ಯಾವುದಾದರೂ ತೊಂದರೆ ಉಂಟಾದರೆ ತಕ್ಷಣ ನನ್ನ ಗಮನಕ್ಕೆ ತರಬೇಕು. ತಕ್ಷಣ ಅಂತಹ ಉಪನ್ಯಾಸಕರ ವಿರುದ್ದ ಸೂಕ್ತ ಕ್ರಮ ಕೈಗೊಂಡು ಪಾಠ ಪ್ರವಚನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ನೀವು ಉತ್ತಮ ಅಂಕಗಳನ್ನು ತೇರ್ಗಡೆ ಹೊಂದಿದರೆ ಶಾಸಕನಾದ ನನಗೂ ಗೌರವ ಬರುತ್ತದೆ. ತಾಲ್ಲೂಕಿನ ಅಭಿವೃದ್ಧಿಯಾಗಿದೆ ಎಂದು ತಿಳಿಯಲು ಶೈಕ್ಷಣಿಕ ಕ್ಷೇತ್ರದ ಸಾಧನೆಯೂ ಒಂದು ಪ್ರಮುಖವಾಗಿದೆ ಹಾಗಾಗಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಬೇಕು. ಯಾವುದೇ ತರಗತಿಗಳನ್ನು ಮಿಸ್ ಮಾಡಿಕೊಳ್ಳಬಾರದು ಎಲ್ಲಾ ತರಗತಿಗಳಲ್ಲಿಯೂ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
*ಖಾಯಂ ಉಪನ್ಯಾಸಕರಿಗೆ ಸಲಹೆ* ಕಾಲೇಜಿನ ಎಲ್ಲಾ ಖಾಯಂ ಉಪನ್ಯಾಸಕರು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರಬೇಕು. ಸಂಜೆಯವರೆವಿಗೂ ತರಗತಿಗಳನ್ನು ತೆಗೆದುಕೊಳ್ಳಬೇಕು. ಖಾಯಂ ಉಪನ್ಯಾಸಕರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು. ಎಲ್ಲವನ್ನೂ ಅತಿಥಿ ಉಪನ್ಯಾಸಕರ ಮೇಲೆ ಜವಾಬ್ದಾರಿ ಹೊರಿಸಿ ಜಾರಿಕೊಳ್ಳಬಾರದು. ಇದನ್ನು ನಾನು ಸಹಿಸುವುದಿಲ್ಲ. ಆಗಾಗ್ಗೆ ಅನಿರೀಕ್ಷಿತ ಬೇಟಿ ನೀಡಿ ಕಾಲೇಜಿನಲ್ಲಿರುವ ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲನೆ ನಡೆಸುವೆನು ಎಂದು ಶಾಸಕ ಹೆಚ್.ಟಿ.ಮಂಜು ಉಪನ್ಯಾಸಕ ವೃಂದಕ್ಕೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವಿ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಯುವ ಪ್ರಶಸ್ತಿ ವಿಜೇತರು ಹಾಗೂ ಮಂಡ್ಯ ಜಿಲ್ಲಾ ಯುವ ಪರಿಷತ್ ಅಧ್ಯಕ್ಷರಾದ ಪರಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮೇರಾ ಯುವ ಭಾರತ್ ಜಿಲ್ಲಾ ಯುವಜನ ಕ್ರೀಡಾ ಇಲಾಖೆ ಅಧಿಕಾರಿ ಎಸ್.ಶೃತಿ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಹೆಳವೇಗೌಡ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹೊಸಹೊಳಲು ಹೆಚ್.ಕೆ.ಅಶೋಕ್, ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ನಾಗೇಶ್, ಮಾದಾಪುರ ವಿಘ್ನೇಶ್ವರ ಯುವಕರ ಸೇವಾ ಸಂಘದ ಅಧ್ಯಕ್ಷ ಮಾದಾಪುರ ಸೋಮಶೇಖರ್, ಹೊಸಹೊಳಲು ಕುರುಹಿನಶೆಟ್ಟಿ ಮಹಿಳಾ ಸಮಾಜದ ಅಧ್ಯಕ್ಷೆ ಸುಕನ್ಯ ರಂಗನಾಥ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಲಕ್ಷ್ಮ ಣ್, ಕೆ.ಆರ್.ನೀಲಕಂಠ, ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದ ಸಂಚಾಲಕ ಕುಮಾರಸ್ವಾಮಿ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
