ಹಾಸನ : ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರ ಕನಸಿನ ಕೂಸಾದ ‘ವಾತ್ಸಲ್ಯ’ ಯೋಜನೆ ನೂರಾರು ವಸತಿ ರಹಿತ ಕುಟುಂಬಗಳಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿಕೊಡುವುದರ ಮೂಲಕ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಾನವೀಯ ಸ್ಪಂದನೆ ಕೆಲಸ ಮಾಡುತ್ತಿದೆ ಎಂದು ಪ್ರೈಡ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಆಡಳಿತಾಧಿಕಾರಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು.
ಅವರು ಶಾಂತಿಗ್ರಾಮ ತಾಲೂಕಿನ ಕಮ್ಮರಿಗೆ ಗ್ರಾಮದ ವಾತ್ಸಲ್ಯ ಫಲಾನುಭವಿ ದ್ಯಾವಮ್ಮ ರವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಮಾಜಮುಖಿ ಕೆಲಸಗಳ ಬಗ್ಗೆ ಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ಪಲಾನುಭವಿ ದ್ಯಾವಮ್ಮ, ಹಾಸನ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸುರೇಶ್ ಮೊಯ್ಲಿ, ಗ್ರಾಮ ಪಂಚಾಯತಿ ಪಿಡಿಓ ಶೈಲಾ, ಗ್ರಾಮ ಪಂಚಾಯತಿ ಅಧ್ಯಕ್ಷರು ಮಣಿ, ತಾಲ್ಲೂಕು ಯೋಜನಾಧಿಕಾರಿ ಹೇಮಲತಾ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಆರ್.ಎಸ್.ರಮೇಶ್, ಹರೀಶ್, ಸತ್ಯನಾರಾಯಣ,ಹಾಗೂ ಜ್ಞಾನ ವಿಕಾಸಮನ್ವಯ ಅಧಿಕಾರಿ ಹಂಸಲೇಖ, ಮೇಲ್ವಿಚಾರಕರು ಶ್ರೀಧರ್ ಸೇವಾಪ್ರತಿನಿಧಿ ಗೌರಮ್ಮ, ಹಾಗೂ ಊರಿನ ಗ್ರಾಮಸ್ಥರು ಹಾಗೂ ಸಂಘದ ಸದಸ್ಯರು ಗಳು ಭಾಗವಹಿಸಿದ್ದರು
