ಕೊರಟಗೆರೆ : ತಾಲ್ಲೂಕು ಆಡಳಿತ ಮಂಡಳಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡಿಗರಿಗೆ, ಸಾಹಿತ್ಯ ಪ್ರೇಮಿಗಳಿಗೆ ಹಬ್ಬವೇ ಸರಿ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಮೀಸಲಾದ ಅತಿದೊಡ್ಡ ಕಾರ್ಯಕ್ರಮವೇ ಕನ್ನಡ ಸಾಹಿತ್ಯ ಸಮ್ಮೇಳನ.
ಕನ್ನಡಿಗರ ಐಕ್ಯತೆಯ ಪ್ರತೀಕವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಸಾಹಿತ್ಯಾಸಕ್ತರ, ಕವಿಗಳ, ಲೇಖಕರ, ಕಲಾವಿದರ ಮತ್ತು ಸಾಂಸ್ಕೃತಿಕ ಉತ್ಸಾಹಿಗಳ ಕನ್ನಡ ಪರ ಹೋರಾಟಗಾರರ ಸಂಘಟನೆಗಳಅತಿದೊಡ್ಡ ಸಮಾಗಮವಾಗತ್ತು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಸಮ್ಮೇಳವನ್ನು ಈ ವರ್ಷ ಆಯೋಜಿಸಿದ್ದು, ಕನ್ನಡದ ಇತಿಹಾಸವನ್ನು ಪ್ರಚುರಪಡಿಸುವುದು ಮತ್ತು ಭಾಷೆಯನ್ನು ಬೆಳೆಸುವುದು ಸಮ್ಮೇಳನದ ಮೂಲ ಉದ್ದೇಶ. ಕನ್ನಡಕ್ಕಾಗಿ ಅವಿರತ ದುಡಿದ, ಕನ್ನಡ ಭಾಷೆಗೆ ತಮ್ಮ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ ಸಾಹಿತಿಗಳು, ಕವಿಗಳನ್ನು ಗುರುತಿಸಿ ಅವರನ್ನು ಈ ಸಮ್ಮೇಳನ ಅಧ್ಯಕ್ಷರನ್ನಾಗಿ ನಿಯೋಜಿಸಲಾಗುತ್ತದೆ.

ಈ ಬಾರಿ ಕೊರಟಗೆರೆ ಸಾಹಿತಿ ಕವಿಗಳಾದ ತುಂಬಾಡಿ ರಾಮಯ್ಯರವರು ಸಮ್ಮೇಳನ ಅಧ್ಯಕ್ಷರಾಗಿದ್ದು ಕೊರಟಗೆರೆಗೆ ಮೇರುಗು ತಂದಿದೆ.ಕೊರಟಗೆರೆಯ ಕನ್ನಡ ಸಾಹಿತ್ಯ ಭವನದಿಂದ ಕನ್ನಡಾoಬೆಯ ರಥವು ವಿವಿಧ ಕಲಾ ತಂಡಗಳ ನೃತ್ಯ, ವಾದ್ಯಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ತಾಲ್ಲೂಕಿನ ಎಲ್ಲ ಅಧಿಕಾರಿಗಳು , ಪುರಸಭೆ ಅಧಿಕಾರಿಗಳು ಆಡಳಿತ ವರ್ಗದವರು, ಕರ್ನಾಟಕ ರಕ್ಸಣಾ ವೇದಿಕೆ ಸರ್ವ ಸದಸ್ಯರು, ಕರ್ನಾಟಕ ರಣಧೀರ ವೇದಿಕೆ, ಸರ್ಕಾರಿ ನೌಕರರು, ಆಟೋ ಚಾಲಕರು, ಕನ್ನಡಭಿಮಾನಿಗಳು, ನೃತ್ಯ ಮಾಡುತ್ತಾ ಸಡಗರದಿಂದ ಎಂ ಜಿ ಪಾಲೇಸ್ ವರೆಗೂ ಕರೆತಂದು ಕವಿ ಕೆಂಪನಂಜುಂಡ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ವಿಜೃಂಭಣೆಯ ಕೊಡುಗೆಯಾಗಿ ಮಾಡಿದರು.

ಕನ್ನಡ ತಾಯಿಯ ನಾಡಲ್ಲಿ ಕನ್ನಡಮ್ಮನ ತೇರು ಕನ್ನಡಾಂಬೆಯ ಮಕ್ಕಳಾದ ನಾವು ಭಾಷೆ ನೆಲ ಜಲ ಸಮೃದ್ಧಿ ಕಲ್ಪತರ ನಾಡಿನಲ್ಲಿ ಭಾವೈಕ್ಯತೆಯ ಸಾರುವ ವೀರಪುರುಷ ಕೋಟೆಯ ಕೂರಂಗ ರಾಜರ ರಾಜಧಾನಿ ಕೊರಟಗೆರೆ ಸಸ್ಯ ಕಾಶಿಯ ಸಿದ್ದರ ಬೆಟ್ಟ ಸಿದ್ದರ ನಾಡು ಸತ್ಯಸಂತರ ತವರೂರು ಭಾವ ಭಾಶಿಕರು ಶಿಲ್ಪಕಲೆಯಿಂದ ಮೆರೆದ ಗುಡಿ ನೂರಾರು ಜನರು ಕಾರ್ಯಕ್ರಮದಲ್ಲಿ ಗೋಪುರಗಳನ್ನು ಕಟ್ಟಿದ ನಾಡು ವೀರನಾರಿಯರ ಕರ್ಮ ಭೂಮಿ ನಮ್ಮದು ಕನ್ನಡದ ಕಹಳೆ ಮೊಳಗಲಿ ಬರಲಿ ಎಲ್ಲರ ಸಂತಸ ಕನ್ನಡವೇ ಉಸಿರಾಗಲಿ ಕನ್ನಡವೇ ಹಸಿರಾಗಲಿ ನೆಲೆಯಾಗಲಿ ಕನ್ನಡ ಎಲ್ಲೆಲ್ಲೂ ಕನ್ನಡ ಜೈ ಕನ್ನಡಾಂಬೆ ಎಂದು ಹಳೆಯ ಸಮ್ಮೇಳನವನ್ನು ನೆನೆಯುತ್ತಾ ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುವಾದ ತುಂಬಾಡಿ ರಾಮಯ್ಯನವರು ಅವರ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ತಮ್ಮ ಕೈ ಬರವಣಿಗೆ ಮೂಲಕ ಬದಲಾಯಿಸಲು ಅನೇಕ ಕೃತಿಗಳನ್ನು ರಚಿಸಿ ಮುಂದಿನ ಪೀಳಿಗೆಗೆ ನೆಲ ಜಲ ಭಾಷೆ ಜಾತಿ ಭಾವೈಕ್ಯತೆಗಳ ಪರಿಪೂರ್ಣ ಅರ್ಥ ಗರ್ಭಿತ ಕಾವ್ಯಗಳನ್ನು ಬರೆದು ಸಮಾಜಕ್ಕೆ ದಾರಿ ತೋರಿಸುವ ಪುಸ್ತಕವಾಗಿದ್ದಾರೆ. ನೈಜತೆಯ ಬದುಕು ಜೀವನವನ್ನು ಅವರ ದೂರ ದೃಷ್ಟಿಯಲ್ಲಿ ಕನ್ನಡಿಗರಾಗದ ನಮಗೆ ತಿಳಿಸಿ ನೀವು ಸಹ ಧ್ರುವ ಸಾಹಿತಿಗಳಾಗಬೇಕೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥ ಕೆ ತಹಶೀಲ್ದಾರ್ ಕಾರ್ಯಧ್ಯಕ್ಷರು ಸ್ವಾಗತ ಸಮಿತಿ, ಅಪೂರ್ವ ಸಿ ಅನಂತರಾಮು,ಕೆ ಎಸ್ ಈರಣ್ಣ ತಾಲ್ಲೂಕು ಅಧ್ಯಕ್ಷರು,ತುಂಬಾಡಿ ರಾಮಯ್ಯ ಸಮ್ಮೇಳನ ಅಧ್ಯಕ್ಷರು,ಡಾ. ಕೆ ನಾಗಣ್ಣನವರು, ಅರಕೆರೆ ಶಂಕರ್. ಶ್ರೀಮತಿ ಪ್ರೇಮ ಮಾಹಾಲಿಂಗಪ್ಪ.ಉಮೇಶ್ ಕೆಎಸ್ ಮುಖ್ಯ ಅಧಿಕಾರಿಗಳು ಪುರಸಭೆ,ಅನಿಲ್ ಆರಕ್ಷಕ ವೃತ್ತ ನಿರೀಕ್ಷಕರು,ಪ್ರಸನ್ನ ಕುಮಾರ್ ಎಂ ಇ ಇ,ನಟರಾಜ್ ಹಾಗು ಎಚ್ ಎಮ್ ಮಹದೇವ್, ಮತ್ತು ಎಲ್ಲಾ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಪೌರಕಾರ್ಮಿಕರು, ಪತ್ರಕರ್ತರು, ಧ್ವನಿ ಸಂಘಟನೆಯ ಪತ್ರಕರ್ತರು, ಟಿವಿ ಮಾಧ್ಯಮದವರು ಯೂಟ್ಯೂಬರ್ಸ್, ನರಸಿಂಹರಾಜು ಎಲ್ ಕರವೇ ಅಧ್ಯಕ್ಷರು,ಕನ್ನಡ ಪರ ಸಂಘಟನೆಯ ಸದಸ್ಯರು, ಬಸವರಾಜು, ರಘು,ದೊಡ್ಡೇಗೌಡರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದರು.ಇದು ಕೇವಲ ಸಾಹಿತ್ಯ ಕಾದಂಬರಿ ಕವಿತೆ ಮೂಲವಲ್ಲದೆ ಕನ್ನಡದ ನೆಲ ಜಲ ಭಾಷೆಯನ್ನು ಎತ್ತಿಹಿಡಿಯುವ ಬೃಹತ್ ಜಾತ್ರೆಯಾಗಿ ಕಾರ್ಯಕರ್ತರು ಭಾಗಿಯಾಗಿದ್ದರು
ವರದಿ : ನರಸಿಂಹಯ್ಯ ಹೊಸಕೋಟೆ
