ಅರೇಮಾದನಹಳ್ಳಿ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಇಂದು ಉತ್ತರಧಿಕಾರಿಗಳಿಗೆ ಸoನ್ಯಾಸಿ ದೀಕ್ಷೆ ಹಾಗೂ ಶಿಷ್ಯ ಸ್ವೀಕಾರ ಕಾರ್ಯಕ್ರಮ ಪ್ರಾರಂಬಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ ವಿಶ್ವಕರ್ಮ ಸಮುದಾಯಗಳ ಅಭಿರುದ್ದಿ ನಿಗಮ ಮಂಡಳಿ ಅಧ್ಯಕ್ಷರಾದ ಶ್ರೀ ಪಿ. ಸುಜ್ಞಾನ ಮೂರ್ತಿ ಮಾತನಾಡಿ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಹೆಚ್. ಡಿ ದೇವೇಗೌಡರವರು, ಶಾಸಕರು ಎ. ಮಂಜು ಹಾಗೂ ಇತರೇ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.

ಶ್ರೀಮಠದ ಕಾನೂನು ಸಲಹೆಗಾರರಾದ ಶ್ರೀ ಎ. ಎಂ ಮಹೇಶ್ ವಕೀಲರು, ಬೆಂಗಳೂರು ರವರು ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಶ್ರೀ ಮಠದ ಹಾಗೂ ಸಮುದಾಯದ ಬಂದುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ವಸ್ತು ರೂಪದ ಹೊರೆಕಾಣಿಕೆಯನ್ನು ಶ್ರೀ ಮಠಕ್ಕೆ ತಲುಪಿಸುವಂತೆ ಮನವಿ ಮಾಡಿದರು ಹಾಗೂ ಶ್ರೀಮಠದ ನಿರ್ದೇಶಕರಾದ ಶ್ರೀ ಹೆಚ್. ಪಿ ಶಶಿಧರ್ ಹೊನ್ನಹಳ್ಳಿ ಮಾತನಾಡಿ ಸoನ್ಯಾಸ ಧಾರ್ಮಿಕ ಪೂಜಾ ವಿಧಿ ಕನ್ನಡ ಸೋಮು, ಶ್ರೀ ಸಿದ್ದಗಂಗಾಚಾರ್ ಇತರರು ಹಾಜರಿದ್ದರು.

ವರದಿ : ಕುಮಾರಸ್ವಾಮಿ
