
ಚಾಮರಾಜನಗರ:– ಕ್ಷೇತ್ರದ್ಯಾಂತ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರು ಪೊರೈಕೆ ಮಾಡಬೇಕು ಎಂದು ಸಂಸದ ಸುನೀಲ್ ಬೋಸ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ದಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಮಾರ್ಚ್ ತಿಂಗಳಲ್ಲಿದ್ದೇವೆ. ಇನ್ನು ಮೂರು ತಿಂಗಳು ಬೇಸಿಗೆ ಇರುತ್ತದೆ. ಹೀಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಿ, ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳು, ಸಿಇಓ ಹಾಗು ಕುಡಿಯುವ ನೀರು ವಿಭಾಗದ ಇಂಜಿನಿಯರ್ ವಿಭಾಗ ಕ್ರಮ ವಹಿಸಬೇಕು. ಅಲ್ಲದೇ ದೂರು ಬರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಅಭಿವೃದ್ದಿ ಕಾರ್ಯಕ್ರಮಗಳಿಗೆ ಅಧಿಕಾರಿಗಳಿಂದ ಅಡೆತಡೆ ಉಂಟಾಗಬಾರದು. ಬಡವರ ಕಷ್ಟಗಳಿಗೆ ಸ್ಪಂದಿಸಿ, ಕೃಷಿಗೆ ಯೋಗ್ಯವಲ್ಲದ ಜಮೀನಿನಲ್ಲಿ ಮಣ್ಣು ತೆಗೆದು ರಸ್ತೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲು ಕಂದಾಯ ಇಲಾಖೆಯಿಂದ ಎನ್ಓಸಿ ನೀಡಲು ವಿಳಂಬ ಮಾಡಲಾಗುತ್ತಿದೆ. ಅವರೇನು ಗಣಿಗಾರಿಕೆ ಮಾಡಲು ಅನುಮತಿ ಕೋರುತ್ತಿಲ್ಲ. ತಮ್ಮ ಜಮೀನಿನಲ್ಲಿರುವ ಅನುಪಯುಕ್ತ ಮಣ್ಣು ತೆಗೆಯಲು ತೊಂದರೆ ಕೊಟ್ಟರೆ ಹೇಗೆ ಎಂದು ಸಂಸದ ಸುನೀಲ್ ಬೋಸ್ ಪ್ರಶ್ನೆ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿ ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಮನೆ ನಿರ್ಮಾಣ ಹಾಗು ಇತರೇ ಸರ್ಕಾರದ ಅಭಿವೃದ್ದಿ ಕಾರ್ಯಕ್ರಮಗಳಿಗೆ ಅಡ್ಡಿ ಮಾಡಬೇಡಿ. ಗಣಿ ಇಲಾಖೆಗೆ ಅವಶ್ಯವಾದ ಅನುಮತಿಯನ್ನು ನೀಡಿ ಎಂದರು. ಜಿಲ್ಲೆಯಲ್ಲಿ ಇಬ್ಬರಿಗೆ ಮಾತ್ರ ಅಧಿಕಾರಿಗಳು ಅವಕಾಶ ನೀಡುತ್ತಿದ್ದರು. ಇದು ಸರಿಯಲ್ಲ. ತಿದ್ದುಕೊಂಡರೆ ಒಳಿತು. ಮುಂದೆ ಇಂಥ ಅಧಿಕಾರಿಗಳ ವಿರುದ್ದ ಕ್ರಮ ಗ್ಯಾರಂಟಿ ಎಂದರು.
ಕೋಡಿಮೋಳೆ ಕೆರೆಯಿಂದ ಕುಡಿಯುವ ನೀರಿಗಾಗಿ ಇನ್ನುಳಿದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವಿಳಂಬವಾಗುತ್ತಿದೆ. ಇನ್ನು ಏಕೆ ಕಾಮಗಾರಿ ಪೂರ್ಣವಾಗಿಲ್ಲ. ಸಂಬAಧಪಟ್ಟ ಅಧಿಕಾರಿಯ ವಿರುದ್ದ ಸಂಸದರು ಗರಂ ಅದರು. ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಧ್ವನಿಗೊಡಿಸಿ, ಯೋಜನೆ ವಿಳಂಬ ನಿಖರವಾದ ಕಾರಣವನ್ನು ನೀಡಿದರು. ಜಿಲ್ಲಾಧಿಕಾರಿಯು ಸಹ ಗುತ್ತಿಗೆದಾರರ ನಡೆಯ ವಿರುದ್ದ ದೂರಿದರು.
ಸಭೆಯಲ್ಲಿ ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿ.ಪಂ.ಸಿಇಒ ಮೋನಾರೋತ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಬಿ.ಟಿ ಕವಿತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
– ಶ್ರೀ ಸಾಯಿ ಎಸ್ ಮಂಜು