ಕೊರಟಗೆರೆ: ಕೈವಾರ ಯೋಗಿ ನಾರಾಯಣಪ್ಪನವರು ಕಾಲಜ್ಞಾನಿಗಳೆಂದೇ ಲೋಕವಿಖ್ಯಾತರಾಗಿದ್ದು ಅವರು ತಮ್ಮ ಅಪೂರ್ವವಾದ ಸಾಧಕ ಶಕ್ತಿಯಿಂದ ಭಗವಂತನನ್ನು ಒಲಿಸಿ ಕೊಂಡು ಜನ ಬದುಕಲೆಂದೇ ಆಧ್ಯಾತ್ಮದ ಹಾದಿಯನ್ನು ಹಿಡಿದು ಮಡಿ. ಮೈಲಿಗೆಯೆನ್ನದೆ, ಮೇಲು ಕೀಳು ಎನ್ನದೆ ಗಂಡು-ಹೆಣ್ಣು ಎಂಬ ಬೇದವಿಲ್ಲದೆ ಎಲ್ಲರ ಒಳಿತಿಗಾಗಿ ಅವರು ಬರೆದ ಅಮೂಲ್ಯ ಕೃತಿಗಳು ಶ್ರೀ ಸಾಮಾನ್ಯರ ಕೈಸೇರುವ ಮೂಲಕ ಧಾರ್ಮಿಕ ಕ್ರಾಂತಿಯಾಗಬೇಕಾಗಿದೆ ಎಂದು ಗ್ರೇಡ್2 ತಹಶೀಲ್ದಾರ್ ರಾಮಪ್ರಸಾದ್ ತಿಳಿಸಿದರು.
ಅವರು ಕೊರಟಗೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೊರಟಗೆರೆ ತಾಲೂಕು ಬಲಿಜ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಕಾಲಜ್ಞಾನಿ ಶ್ರೀ ಯೋಗಿನಾರೇಯಣ ಯತೀಂದ್ರರ 300 ನೇ ಜಯತೋಂತ್ಸವ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಕೈವಾರ ತಾತಯ್ಯ ನವರ ಭಾವಚಿತ್ರಕ್ಕೆ ಪುಪ್ಪರ್ಚಾನೆ ಮಾಡಿ ಮಾತನಾಡಿ ತಾತಯ್ಯನವರ ತತ್ವ ಆದರ್ಶ ಇಂದಿಗೂ ಪ್ರಸ್ತುತ, ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು, ಯೋಗಿನಾರೇಯಣ ಯತೀಂದ್ರರ ಆದರ್ಶಗಳು ಜನರಿಗೆ ತಲುಪಿಸಲು ಇಂತಹ ಜಯಂತಿಗಳು ಸಹಕಾರಿ ಎಂದ ಅವರು ಕಾಲಜ್ಞಾನಿ ಯೋಗಿನಾರೇಯಣ ಯತೀಂದ್ರರೆಂದರೆ ನೆನಪಿಗೆ ಬರುವುದಿಲ್ಲ ಕೈವಾರ ತಾತಯ್ಯ ಎಂದೇ ಮೊದಲು ನೆನಪಿಗೆ ಬರುವುದು, ಈ ಒಂದು ಸಮಾಜ ಘನ ಸರ್ಕಾರ ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡಿದೆ, ಕೈಷಿಕರೇ ಹೆಚ್ಚಿರುವ ಈ ಸಮಾಜದಲ್ಲಿ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಾಣಬೇಕು ಎಂದು ತಿಳಿಸಿದರು.
ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ್ ಮಾತನಾಡಿ ಕರ್ನಾಟಕ ಸರ್ಕಾರ ಬಲಿಜ ಜನಾಂಗದ ಒತ್ತಾಸೆಯ ಮೇರೆಗೆ ಕಳೆದ ನಾಲ್ಕು ವರ್ಷಗಳಿಂದ ಕೈವಾರ ತಾತಯ್ಯನವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ವಿಜೃಂಭಣೆಯಿಂದ ಆಚರಿಸುತ್ತಿದೆ, ಈ ಬಾರಿ ತಾತಯ್ಯನವರ 300 ನೇ ಜಯುಂತಿ ಆಚರಿಸಲಾಗುತ್ತಿದೆ ಅದರೆ ರಾಜ್ಯ ಸರ್ಕಾರ ಕಳೆದ 40 ವರ್ಷಗಳಿಂದ ಮೀಸಲಾತಿಯಲ್ಲಿ 2ಎ ಯಿಂದ 3ಎಗೆ ಬದಲಿಸಿ ಅನ್ಯಾಯ ಮಾಡಿದ್ದು ಇಲ್ಲಿಯವೆರಗೂ ಸರಿಪಡಿಸಿಲ್ಲ ಹಾಗೂ ಬಲಿಜ ನಿಗಮ ರಚಿಸಿ ಹಣ ಬಿಡುಗಡೆ ಮಾಡದೆ ನಿರ್ಲಕ್ಷಿಸುತ್ತಿದೆ ಎಂದ ಅವರು ನಮ್ಮ ಬಲಿಜ ಸಮುದಾಯ ಸಾಮಾಜಿಕವಾಗಿ, ಆಥಿರ್ಕಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬಹಳ ಹಿಂದುಳಿದಿದೆ, ಬಲಿಜ ಸಮುದಾಯ ಸಮಾಜದಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಬೇಕಾದರೆ ಹೋರಾಟ ನಡೆಸೆ ಸಂಪೂರ್ಣ 2ಎ ವರ್ಗದ ಮೀಸಲಾತಿ ಪಡೆಯಲು ಸರ್ಕಾರಗಳ ಗಮನ ಸೆಳೆಯಬೇಕಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್ ಮಾತನಾಡಿ ತಾತಯ್ಯನವರು ತಮ್ಮ ಜೀವನ ಸಂದೇಶವನ್ನು ಜನರಿಗೆ ತಲುಪಿಸಲು ಶಕ್ತಿಮೀರಿ ಪ್ರಯತ್ನಿಸಿದವರು ಎಂದ ಅವರು ನಾಡಿಗೆ ಉತ್ತಮ ಸಂದೇಶದೊಂದಿಗೆ ಕಾಲಜ್ಞಾನ ನೀಡಿ ಹಾಗೂ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ಸೌಹಾರ್ದತೆಗೆ ಶ್ರಮಿಸಿದ ಕೈವಾರ ತಾತಯ್ಯನವರೆ ಸ್ಪೂರ್ತಿ ಅವರ ತತ್ವ ಆದರ್ಶ ಗುಣಗಳು ಪ್ರತಿಯೊಬ್ಬರೂ ಜೀವನದಲ್ಲಿ ಆಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನಂತರಾಜು ಮಾತನಾಡಿ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಇಲಾಖೆಯಿಂದ ದೊರೆಯುವ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿ ಕುಲ ಕಸುಬುಗಳ ಅಭಿವೃದ್ದಿಗೆ ಇಲಾಖೆಯಿಂದ ಆರ್ಥಿಕ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಜಿಲ್ಲಾ ಬಲಿಜ ಸಂಘದ ಪ್ರತಿನಿಧಿ ಹಾಗೂ ಪ.ಪಂ ಮಾಜಿ ಸದಸ್ಯ ಕೆ.ಎಲ್.ಆನಂದ್, ಸಂಘದ ಉಪಾಧ್ಯಕ್ಷ ವೆಂಕಟೇಗೌಡ, ಮಹಿಳಾ ಸಂಘದ ಅಧ್ಯಕ್ಷ ಗಿರಿಜಮ್ಮಕೃಷ್ಣಪ್ಪ, ಗೌರಾವಾಧ್ಯಕ್ಷ ಹಾಗೂ ಪ.ಪಂ.ಮಾಜಿ ಸದಸ್ಯ ಮಂಜುಳಾಗೋವಿಂದ ರಾಜು ಮಾತನಾಡಿದರು, ವೇದಿಕೆಯಲ್ಲಿ ತಾ.ಪಂ ಯೋಜನಾಧಿಕಾರಿ ಮಧುಸೂದನ್, ಕಂದಾಯ ಇಲಾಖೆಯ ಆರ್.ಐ. ಬಸವರಾಜು, ನಕುಲ್, ಕೃಷಿ ಇಲಾಖೆಯ ರುದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಯಮುನಾ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಎಇಇ ಕಾಂತರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶೃತಿ, ಬಲಿಜ ಸಮುದಾಯದ ಮುಖಂಡರುಗಳಾದ ಹೊಳವನಹಳ್ಳಿ ಗ್ರಾ.ಪಂ. ಮಾಜಿ ಸದಸ್ಯ ಕುಂಭಿನರಸಿಂಹಯ್ಯ, ನಿವೃತ್ತ ಶಿಕ್ಷಕ ನಾರಾಯಣ್, ಪ್ರೇಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಬೆನಕಾವೆಂಕಟೇಶ್, ಪತ್ರಕರ್ತರುಗಳಾದ ಕೆ.ಬಿ.ಲೋಕೇಶ್, ದೇವರಾಜು, ತಿಮ್ಮರಾಜು. ಕಿರಣ್ಕುಮಾರ್, ಸಿದ್ದಾರ್ಥ, ದಯಾನಂದ್, ಪ್ರಶಾಂತ್, ಶ್ರೀನಿವಾಸುಲು, ಜಯರಾಮಯ್ಯ, ಕೇಶವಮೂರ್ತಿ, ಮಹಿಳಾ ಮಂಡಲಿ ಸದಸ್ಯರಾದ ಮಧುಶ್ರೀ, ಶಶಿಕಲಾ, ಸುಚಿತ್ರ, ಮಾನಸ, ಅರ್ಚನಾ, ತುಳಸಿ ಸೇರಿದಂತೆ ಇನ್ನಿತರರು ಹಾಜರಿದ್ದರು.
– ಶ್ರೀನಿವಾಸ್ ಆರ್.
