ರಾಮನಾಥಪುರ- ನಮ್ಮ ಸನಾತನ ಸಂಸ್ಕೃತಿ ಹಾಗೂ ನಮ್ಮ ಪರಂಪರೆ ಇಂದೂ ಸಹ ಗ್ರಾಮೀಣ ಪ್ರದೇಶಗಳಲ್ಲಿರುವ ದೇವಾಲಯಗಳಲ್ಲಿ ಉತ್ತಮ ರೀತಿಯಲ್ಲಿ ಪೂಜಾಕೈಂಕರ್ಯಗಳು ನಡೆದುಕೊಂಡು ಬರುತ್ತಿವೆ ಎಂದು ಶ್ರೀ ಶನೇಶ್ವರಸ್ವಾಮಿ ದೇವಾಲಯದ ವ್ಯವಸ್ಥಾಪಕರು ವೇ. ನಾಗರಾಜಸ್ವಾಮಿ ತಿಳಿಸಿದರು.

ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಮನಕೊಪ್ಪಲು ರಸ್ತೆಯಲ್ಲಿರುವ ಮಸಣಿಕ್ಕಮ್ಮ ( ಪಿರಿಯಪಟ್ಟಣಮ್ಮ) ದೇವಾಲಯ ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ಇತ್ತೀಚಗೆ ಲೋಕಾರ್ಪಣೆಯಾಗಿ ಇಂದು 48 ನೇ ದಿವಸದ ಪೂಜಾ ಕೈಂಕರ್ಯಗಳ ನಂತರ ಮಾತನಾಡಿದ ಅವರು ಧಾರ್ಮಿಕ ಚಿಂತನೆಯಿದ್ದಲ್ಲಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ವೇ. ನಾಗರಾಜಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಎಸ್. ಶಂಕರ್, ಹನ್ಯಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಗುಂಡಣ್ಣ, ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ ರಾಜ್ಯಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಶರಣ ಸಾಹಿತ್ಯ ಪರಿಷತ್ತು ಯುವ ಘಟಕದ. ಕಾರ್ಯದರ್ಶಿ ಅರ್.ಕೆ. ಶ್ರೀನಿವಾಸ್, ಅರ್ಚಕರಾದ ಸುನೀಲ್ ಕುಮಾರ್, ಶ್ರೀನಿವಾಸ್, ಗ್ರಾಮಸ್ಥರು ಭಾಗವಹಿಸಿದ್ದರು.
