ರಾಮನಾಥಪುರ: ರಾಮನಾಥಪುರ ಹೋಬಳಿ ಬಸವಪಟ್ಟಣದಲ್ಲಿ ವೈಭವೋಪೇತವಾಗಿ ಸಂಗೀತಯುಕ್ತ ಇಷ್ಠಲಿಂಗ ಮಹಾಪೂಜೆ ಹಾಗೂ ಧಾರ್ಮಿಕ ಸಭೆ ನೆರವೇರಿತು.
ಈ ಸಂದರ್ಭದಲ್ಲಿ ಉತ್ತರಪ್ರದೇಶದ ವಾರಣಾಸಿಯ ಶ್ರೀ ಜಗದ್ಗುರು ಕಾಶೀ ಜ್ಞಾನ ಸಿಂಹಾಸನ ಮಹಾ ಸಂಸ್ಥಾನ ಪೀಠ, ಜಂಗಮವಾಡಿ ಮಠದ ಶ್ರೀಮದ್ ಕಾಶೀ ಜ್ಞಾನ ಸಿಂಹಾಸನಾಧೀಶ್ವರರಾದ ಶ್ರೀ 1008 ಹಿರಿಯ ಜಗದ್ಗುರುಗಳವರು ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಅವರನ್ನು ಜಗದ್ಗುರುಗಳು ಆಶೀರ್ವದಿಸಿ ಗೌರವಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಭಕ್ತರು, ಗಣ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿ ಇಷ್ಠಲಿಂಗ ಮಹಾಪೂಜೆಯಲ್ಲಿ ಭಾಗಿಯಾಗಿ ಆಶೀರ್ವಾದ ಪಡೆದರು.
