ತುಮಕೂರು:ಜಿಲ್ಲಾ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ,ಹಿರಿಯ ವಕೀಲರಾದ ಕೆ.ಎನ್. ಬಸವರಾಜು(59)ರವರು ಇಂದು ಮುಂಜಾನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಹೆಂಡತಿ ಮಂಜುಳ.ಹೆಚ್.ಎನ್. ಮಗ ವಕೀಲರಾದ ಸೃಜನ್,ಅಪಾರ ಸ್ನೇಹಿತರು,ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ನಿಧನಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ,ಶಾಸಕ ಜಿ.ಬಿ.ಜ್ಯೋತಿಗಣೇಶ್,ರಾಜೇಂದ್ರರಾಜಣ್ಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಡಿ.ಸಿ.ಹಿಮಾನಂದ್, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರು ಮತ್ತು ಹಿರಿಯ ವಕೀಲರಾದ ಜೆ.ಕೆ.ಅನಿಲ್,ರಾಜ್ಯ ಉಚ್ಛನ್ಯಾಯಾಲಯದ ಹಿರಿಯ ವಕೀಲರು ಮತ್ತು ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಎಂ.ಎನ್.ಮಧುಸೂಧನ್,ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿಮಹೇಶ್,ಜಂಟಿ ಕಾರ್ಯದರ್ಶಿ ಟಿ.ಎಂ.ಧನಂಜಯ, ಬಿ.ಜಿ.ಸತೀಶ್, ಎಂ.ಎಲ್.ಎ.ಶಿವರಾಮ್,ಆರ್.ಪಾತಣ್ಣ,ಶಶಿಶೇಖರ್,ಗಿರೀಶ್,ಹಿರಿಯ ವಕೀಲರಾದ ಎಂ.ಸಿ.ಚಂದ್ರಣ್ಣ ಸೇರಿದಂತೆ ಹಿರಿಯ,ಕಿರಿಯ,ಮಹಿಳಾ ವಕೀಲರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
– ಚಂದ್ರಚೂಡ ಕೆ.ಬಿ
