ಕೊರಟಗೆರೆ: ಸುಪ್ರಿಂ ಕೋಟ್ ಅದೇಶ ಉಲ್ಲಂಘಿಸಿ ಒಳ ಮೀಸಲಾತಿ ಜಾರಿ ಆಗದೇ 56,432 ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ದ ಕರ್ನಾಟಕ ಮಾದರ ಮಹಾ ಸಭಾ ಕೊರಟಗೆರೆ ತಾಲೂಕು ಘಟಕ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿ ಭಟನೆಯಲ್ಲಿ ಮಾತನಾಡಿದ ಕರ್ನಾಟಕ ಮಾದರ ಮಹಾ ಸಭಾ ಕೊರಟಗೆರೆ ತಾಲೂಕು ಘಟಕ ಅಧ್ಯಕ್ಷ ಸಿದ್ದೇಶ್(ವಿಭೂತಿ) ರಾಜ್ಯದಲ್ಲಿ ಶೋಷಿತ ಸಮುದಾಯಗಳು ಕಳೆದ 35 ವರ್ಷಗಳಿಂದ ಒಳ ಮೀಸಲಾತಿಗಾಗಿ ನಿರಂತರ ಅನೇಕ ಹೋರಾಟಗಳನ್ನು ಮಾಡಿದ್ದು ಸುಪ್ರೀಂ ಕೋರ್ಟ್ ಆದೇಶದಂತೆ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಹಿಂದುಳಿದಿರುವಿಕೆ ಆಧಾರದ ಮೇಲೆ ಒಳ ಮೀಸಲಾತಿ ಜಾರಿಯಾಗಬೇಕು, ಒಳ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ಸ್ಪಷ್ಟ ಕ್ರಮ ಕೈಗೊಳದೆ ಲೆಕ್ಕಕ್ಕೆ ಮಾತ್ರ ಒಳ ಮೀಸಲಾತಿ ಜಾರಿ ನಮಗೆ ಅವಶ್ಯಕವಿಲ್ಲಾ ಕಾನೂನು ಬದ್ದವಾಗಿ ಸಂವಿಧಾನದ ಅಡಿಯಲ್ಲಿ ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿ ಆಗಬೇಕೆಂದು ಮತ್ತು 2022 ಹೊಸ ಮೀಸಲಾತಿಯನ್ನು ಸಂವಿಧಾನ 9ನೇ ಷಡ್ಯೋಲ್ಗೆ ಸೇರಿಸಲು ಸರ್ವ ಪಕ್ಷಗಳ ಸಬೆ ಕರೆದು ಪ.ಜಾತಿಗರ ಶೇ.17, ಪ.ಪಂಗಡಕೆ ಶೇ.7 ರಷ್ಟು ಮೀಸಲಾತಿಯನ್ನು ಜಾರಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾ ಮಾದರ ಮಹಾ ಸಭಾದ ಪದಾಧಿಕಾರಿ ದಾಡಿವೆಂಕಟೇಶ್ ಮಾತನಾಡಿ ರಾಜ್ಯ ಸರ್ಕಾರ ತೆಗೆದುಕೊಂಡಂತ ಒಳ ಮೀಸಲಾತಿ ಜಾರಿಗಾಗಿ ಬೆಳಗಾವಿ ಅಧಿವೇಶನದಲ್ಲಿ ಪ್ರವರ್ಗ-ಎ ಶೇ.6, ಪ್ರವರ್ಗ-ಬಿ ಶೇ.6, ಪ್ರವರ್ಗ-ಸಿ ಶೇ.5 ರಂತೆ ತಿರ್ಮಾನ ತೆಗೆದುಕೊಂಡು ತಮ್ಮಗಳ ಅನುಮೋದನೆಗೆ ಸಲ್ಲಿಸಿದ್ದನ್ನು ರಾಜ್ಯ ಸರ್ಕಾರವೇ ಅನುಮೋದಿಸಿದ್ದರು ಸಹ ಒಳ ಮೀಸಲಾತಿ ಇಲ್ಲದೇ 56,432 ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ರಾಜ್ಯದ ಮುಖ್ಯಮಂತ್ರಿಗಳು ಹಳೇ ಪದ್ದತಿಯಲ್ಲೇ ಶೇ.50 ರಷ್ಟು ಮೀಸಲಾತಿ ಹಾಗೂ ಅದರಲ್ಲಿ ಪರಿಶಿಷ್ಟ ಜಾತಿಗೆ ಶೇ.15 ರಂತೆ ಹುದ್ದೆಗಳನ್ನು ತುಂಬಲು ತೀರ್ಮಾನಿಸಿರುವುದುರಿಂದ ನಮ್ಮ ಮಾದಿಗ ಹಾಗೂ ಸಂಬಂದಿಸಿದ 16 ಉಪಜಾತಿಗಳನ್ನು ಒಳಗೊಂಡ ಪ್ರವರ್ಗ-ಎ ಗುಂಪಿಗೆ ಬಡ ವಿದ್ಯಾರ್ಥಿಗಳ ಹೊಟ್ಟೆ ಮೇಲೆ ಹೊಡೆದು ಅವರ ಜೀವನನ್ನೆ ಕಿತ್ತುಹೊಳ್ಳುತ್ತಿದ್ದು ಸರಿ ಸುಮಾರು 3500 ಹುದ್ದೆಗಳು ಜನಾಂಗದ ಸರ್ಕಾರಿ ನೌಕರಿ ಬಯಸುತ್ತಿದ್ದ ನಿರುದ್ಯೋಗಿಗಳ ಬದುಕನ್ನೆ ಸರ್ವ ನಾಶ ಮಾಡುತ್ತಿರುವುದು ಘೋರ ಅನ್ಯಾಯವಾಗಿದ್ದು ತಕ್ಷಣ ಪ್ರಸ್ತುತ ನೇಮಕಾತಿಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇದಂತೆ ಒಳ ಮೀಸಲಾತಿ ಜಾರಿ ಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಮಾದರ ಮಹಾ ಸಭಾ ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಆರ್.ಲಕ್ಷ್ಮಿನರಸಯ್ಯ, ಖಜಾಂಚಿ ವೀರಕ್ಯಾತರಾಯ, ಪದಾಧಿಕಾರಿಗಳಾದ ನಾಗರಾಜು, ಬೀಮರಾಜು, ಎ.ವಿ.ವೀರಕ್ಯಾತರಾಯ, ಸುಬ್ರಾಯಪ್ಪ, ರವಿಕುಮಾರ್, ನರಸಿಂಹಯ್ಯ, ಸಿದ್ದೇಶ್, ಸಿದ್ದಗಂಗಯ್ಯ, ಹನುಮಂತರಾಯಪ್ಪ, ಮುನಿರಾಜು, ಕೃಷ್ಣಪ್ಪ, ಶಿವಣ್ಣ, ರಮೇಶ್, ತೇಜಶ್, ಯೋಗೀಶ್, ಶಿವರಾಜು, ನರಸಿಂಹಯ್ಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
– ಶ್ರೀನಿವಾಸ್ ಕೊರಟಗೆರೆ.
